Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಾರಿಗೆ ಲಾರಿ ಡಿಕ್ಕಿ: ಕಾರಲ್ಲಿದ್ದ ಒಂದೇ ಮನೆಯ ಮೂವರು ಮೃತ್ಯು, ಲಾರಿ ಚಾಲಕನ ಸಹಿತ ಮೂವರಿಗೆ ಗಂಭೀರ ಗಾಯ

ಉಡುಪಿ: ಲಾರಿ, ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಒಂದೇ ಮನೆಯ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟು, ಮೃತರ ಮನೆಯ ಇಬ್ಬರು ಹೆಣ್ಮಕ್ಕಳು ಹಾಗೂ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ಒಂದು ಗಂಟೆಗೆ ಪೆರ್ಡೂರು ಸಮೀಪದ ಪಾಡಿಗಾರ್ ಕೈಕಂಬದಲ್ಲಿ ಸಂಭವಿಸಿದೆ.

ಕಾರ್ಕಳ ತಾಲೂಕು ಹೆಬ್ರಿ ಬಳಿಯ ನಾಡ್ಪಾಲು ಗ್ರಾಮದ ಸೋಮೇಶ್ವರ ನಿವಾಸಿಗಳಾದ ಮನೋಹರ ಭಕ್ತ, ಇವರ ಪತ್ನಿ ಶ್ರೀಮತಿ ಸ್ವಾತಿ ಹಾಗೂ ತಾಯಿ ಮನೋರಮಾ ಮೃತ ದುರ್ದೈವಿಗಳು. ಮನೋಹರ ಭಕ್ತರವರ ಮಕ್ಕಳಾದ ಮಾನಸ, ಸಂಜನಾ ಹಾಗೂ ಲಾರಿ ಚಾಲಕ ಸಂತೋಷ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತ ಮನೋಹರ ಭಕ್ತ ಅವರು ಹೊಟೇಲ್ ಉದ್ಯಮಿಯಾಗಿದ್ದು ಕಳೆದ ಹಲವು ವರ್ಷಗಳಿಂದ ಸೋಮೇಶ್ವರದಲ್ಲಿ ಸ್ವಂತ ಹೊಟೇಲ್ ನಡೆಸುತ್ತಿದ್ದಾರೆ.

ಮನೋಹರ ಭಕ್ತ ಹಾಗೂ ಮನೆಯವರು ಉಡುಪಿ ಕಡೆಯಿಂದ ತಮ್ಮ ಮನೆ ಇರುವ ಸೋಮೇಶ್ವರ ಕಡೆಗೆ ಕೆ.ಎ.20-ಎನ್ -7847 ನಂಬ್ರದ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹೆಬ್ರಿ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಸಂತೋಷ್ ಚಲಾಯಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದು ಈ ದಾರುಣ ಅಪಘಾತ ಸಂಭವಿಸಿದೆ.

ಈ ಬಗ್ಗೆ, ಸೋಮೇಶ್ವರ ನಿವಾಸಿ ದಯಾನಂದ ಭಕ್ತರವರ ಪುತ್ರ ರಾಘವೇಂದ್ರ ಭಕ್ತ (40) ನೀಡಿದ ದೂರಿನ ಆಧಾರದಲ್ಲಿ ಲಾರಿ ಚಾಲಕನ ವಿರುದ್ಧ ಹಿರಿಯಡ್ಕ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *