Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಹೋಟೆಲ್ ಗಳಿಗೆ ದಾಳಿ: ಹಳಸಲು ಪರೋಟ ವಶ !

ಬದಿಯಡ್ಕ(ಕಾಸರಗೋಡು): ಬದಿಯಡ್ಕ ಪೇಟೆಯ ಕೆಲವು ಹೋಟೆಲುಗಳಲ್ಲಿ ಹಳಸಿದ ತಿಂಡಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಬದಿಯಡ್ಕ ಬಸ್ ನಿಲ್ದಾಣ ಸಮೀಪದ ದುರ್ಗಾ ವಿಲಾಸ್ ಹೋಟೆಲಿಗೆ ದಾಳಿ ನಡೆಸಿ ಹಳಸಿದ ಎರಡು ದಿನಗಳ ಹಿಂದಿನ ಪರೋಟವನ್ನು ಅರೋಗ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇದೇ ಪರಿಸರದ ದೇವಿಕೃಪಾ ಹೋಟೆಲಿಗೂ ದಾಳಿ ನಡೆಸಲಾಗಿದ್ದು, ಇಲ್ಲಿ ಯಾವುದೇ ಹಳಸಿದ ವಸ್ತುಗಳು ಪತ್ತೆಯಾಗಿಲ್ಲ. ಬದಿಯಡ್ಕ ಬಸ್ ನಿಲ್ದಾಣದ ಸಮೀಪ ತೆರೆದ ಸ್ಥಳದಲ್ಲಿ ಅವಿಲ್ ಮಿಲ್ಕ್ ಮತ್ತು ಹಲವಾರು ತಿಂಗಳಿನಿಂದ ಬದಲಾಯಿಸದೇ ಇರುವ ಎಣ್ಣೆಯಲ್ಲಿ ಕರಿದ ಪದಾರ್ಥ, ಚಿಪ್ಸ್ ತಯಾರಿಸಿ ನೀಡುತ್ತಿರುವುದಾಗಿ ನಾಗರಿಕರು ಆರೋಪಿಸುತ್ತಿದ್ದು, ಈ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಂಡು ನಿಯಂತ್ರಣ ಕಾರ್ಯ ಕೈಗೊಳ್ಳಬೇಕೆಂದು ನಾಗರಿಕರು ಆರೋಗ್ಯ ಇಲಾಖೆಯ ಅಧಿಕೃತರನ್ನು ಇದೇ ಸಂದಂರ್ಭದಲ್ಲಿ ಒತ್ತಾಯಿಸಿದರು.

ಕಳೆದ ಕೆಲವು ತಿಂಗಳಿಂದ ಬದಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಹಲವು ಸೋಂಕು ಕಾಯಿಲೆಗಳು ಬಾಧಿಸಿ ನಾಗರಿಕರು ಚಿಕಿತ್ಸೆಗೆ ಬಂದಿರುವುದನ್ನು ಆರೋಗ್ಯ ಇಲಾಖೆಯ ಅಧಿಕೃತರು ದೃಢಪಡಿಸಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಅರೋಗ್ಯ ಇಲಾಖೆಯ ಅಧಿಕಾರಿ ತಂಬಾನ್, ಕಿರಿಯ ಆರೋಗ್ಯ ನಿರೀಕ್ಷಕರಾದ ನಾರಾಯಣ ನಾಯ್ಕ್, ಸತೀಶನ್, ಶೈನಿ ಮೊದಲಾದವರು ಕಾರ್ಯಾಚರಣೆಯ ನೃತೃತ್ವ ವಹಸಿದ್ದರು.

ಚಿತ್ರದಲ್ಲಿ: ಹಳಸಿದ ಪರೋಟ ಪ್ರದರ್ಶಿಸುತ್ತಿರುವ ಆರೋಗ್ಯ ಅಧಿಕಾರಿಗಳು.

Leave a Reply

Your email address will not be published. Required fields are marked *