Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಕವಿ ಕಯ್ಯಾರರ ಮನೆಯಲ್ಲಿ ಶಾಲಾ ಮಕ್ಕಳ ಕಲರವ

ಬದಿಯಡ್ಕ(ಕಾಸರಗೋಡು): ಜಿ.ಬಿ.ಯು.ಪಿ.ಎಸ್.ಪೆರಡಾಲ ಶಾಲ ಮಕ್ಕಳು ನಾಡೋಜ, ಕವಿ ಡಾ.ಕಯ್ಯಾರ ಕಿಞ್ಞಣ್ಣ ರೈಯವರ ಮನೆಗೆ ಅಧ್ಯಾಪಕರು ಹಾಗೂ ರಕ್ಷಕ ಸಂಘದ ಸದಸ್ಯರೊಂದಿಗೆ ಕವಿ ನಿವಾಸಕ್ಕೆ ಭೇಟಿ ನೀಡಿದರು.

ಕವಿ ಕಯ್ಯಾರ ಅವರು ರಚಿಸಿದ ಕವನಗಳನ್ನು ಅವರ ಮುಂದೆ ಮಕ್ಕಳು ಹಾಡಿದರು. ಹಿರಿಯ ಅಧ್ಯಾಪಿಕೆ ಕೃಷ್ಣಕುಮಾರಿ ಕಯ್ಯಾರರ ಕುರಿತು ಸ್ವರಚಿತ ಮಲೆಯಾಳ ಕವನ ವಾಚಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶಕುಂತಲಾ, ಪಿ.ಟಿ.ಎ. ಅಧ್ಯಕ್ಷರಾದ ಮ್ಯೊದು, ಅಬ್ದುಲ್ಲಕುಂಞಿ ಹಾಜಿ, ಮಾತೃ ಸಂಘದ ಅಧ್ಯಕ್ಷ ಹನ್ನತ್ತ್, ಶಾಲಾ ಅಧ್ಯಾಪಕ ಸಂಘದ ಕಾರ್ಯದರ್ಶಿ ಚಂದ್ರಹಾಸ ನಂಬ್ಯಾರ್, ಕೃಷ್ಣನ್ ನಂಬೂದಿರಿ, ಬಿನೋಯಿ, ಸೋಮನಾಥನ್, ರಿಶಾದ್ ಪೆರ್ಲ, ಪ್ರಶಾಂತ್, ಜಯಲತ, ದಿವ್ಯಗಂಗಾ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *