Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಉಡುಪಿ: ಸದನದಲ್ಲಿ ಮೊಬೈಲ್ ವೀಕ್ಷಿಸಿದ ಬಿಜೆಪಿ ಶಾಸಕರ ಉಚ್ಛಾಟನೆಗೆ ಆಗ್ರಹ

ಉಡುಪಿ: ರಾಜ್ಯ ವಿಧಾನ ಸಭೆಯಲ್ಲಿ ಕಬ್ಬು ಕೃಷಿಗೆ ಸಂಬಂಧಿಸಿದಂತೆ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಬಿಜೆಪಿ ಶಾಸಕರಾದ ಪ್ರಭು ಚವ್ಹಾಣ್ ಹಾಗೂ ಬಣಕಾರ್ ಅವರು ಮೊಬೈಲ್ ನಲ್ಲಿ ಚಿತ್ರಗಳನ್ನು ವೀಕ್ಷಿಸುವ ಮೂಲಕ ಅನುಚಿತವಾಗಿ ವರ್ತಿಸಿರುವುದು ಅತ್ಯಂತ ಖಂಡನಾರ್ಹ. ಮಹಿಳಾ ದೌರ್ಜನ್ಯದ ಬಗ್ಗೆ ದಿನನಿತ್ಯ ಪುಂಖಾನುಪುಂಖವಾಗಿ ಮಾತನಾಡುವ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ತೇಜಸ್ವಿನಿ ಗೌಡ ಅವರು ಇದೀಗ ತಮ್ಮದೇ ಪಕ್ಷದ ಶಾಸಕರ ಇಂಥ ವರ್ತನೆ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿದೆ. ಪಕ್ಷವು ಈ ಶಾಸಕರನ್ನು ಉಚ್ಛಾಟಿಸಬೇಕು. ವಿಧಾನ ಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪನವರು ಇವರುಗಳನ್ನು ಅಮಾನತುಪಡಿಸಬೇಕು ಎಂದು ಕರ್ನಾಟಕ ಸಾಬೂಬು ನಿಗಮದ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ ಆಗ್ರಹಿಸಿದ್ದಾರೆ.

pratibhatane-1 copy

ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪರಿಸರದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಇಂದು ಸಂಜೆ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಸದನದಲ್ಲಿ ಬಿಜೆಪಿ ಶಾಸಕರ ಅನುಚಿತ ವರ್ತನೆ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಶಾಸಕರ ಅಸಭ್ಯ ನಡವಳಿಕೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಕ್ಷದ ನಾಯಕರುಗಳಾದ ಎಂ.ಎ.ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಅಮೃತ್ ಶೆಣೈ, ಕೆ.ಜನಾರ್ದನ ಭಂಡಾರ್ಕರ್, ಐಡಾ ಗಿಬ್ಬ ಡಿ’ಸೋಜಾ, ಡಾ.ಸುನೀತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ರೋಶನಿ ವಲಿವೆರಾ, ಜ್ಯೋತಿ ಹೆಬ್ಬಾರ್, ಯತೀಶ್ ಕರ್ಕೇರ, ಗಣೇಶ್ ನೆರ್ಗಿ, ಸುಪ್ರಿತಾ ಪ್ರಮೋದ್ ಮಧ್ವರಾಜ್, ಗೀತಾ ವಾಗ್ಲೆ, ಸೆಲಿನಾ ಕರ್ಕಡ, ಕೇಶವ ಕೋಟ್ಯಾನ್, ಅಲೆವೂರು ಹರೀಶ್ ಕಿಣಿ, ವಿಕಾಸ್ ಶೆಟ್ಟಿ, ಪ್ರಥ್ವಿರಾಜ್ ಶೆಟ್ಟಿ, ಹಬೀಬ್ ಅಲಿ, ಕೀರ್ತಿ ಶೆಟ್ಟಿ, ರಮೇಶ್ ಕಾಂಚನ್, ಶಶಿರಾಜ್ ಕುಂದರ್, ಚಂದ್ರಿಕಾ ಶೆಟ್ಟಿ, ಸುಲೋಚನಾ ದಾಮೋದರ್, ಹಸನ್ ಅಜ್ಜರಕಾಡು, ಭಾಸ್ಕರ ರಾವ್ ಕಿದಿಯೂರು ಮೊದಲಾದವರು ಪ್ರತಿಭಟನಾ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

pratibhatane-3 copy

 

Leave a Reply

Your email address will not be published. Required fields are marked *