Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪಾಂಬೂರು ಬಾಲಕನ ಅಸ್ಥಿಪಂಜರ ಪತ್ತೆ ಪ್ರಕರಣ: DNA ವರದಿ ಬರುವವರೆಗೆ ಮರುತನಿಖೆಯಿಲ್ಲ !

ಉಡುಪಿ: ಹತ್ತು ತಿಂಗಳ ಹಿಂದೆ ನಿಗೂಢವಾಗಿ ಕಣ್ಮರೆಯಾಗಿ, ಕಾಣೆಯಾದ 2 ವಾರಗಳ ಬಳಿಕ ಅಷ್ಟೇ ನಿಗೂಢವಾಗಿ ಅಸ್ಥಿಪಂಜರವಾಗಿ ಪತ್ತೆಯಾದ ಮೂಡುಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳೆ ಗ್ರಾಮದ ಪಡುಬೆಳ್ಳೆ ಪಾಂಬೂರು ನಿವಾಸಿ ಶ್ರೀಮತಿ ಆಶಾರವರ ಪುತ್ರ ನವೀನ್ (9 ವರ್ಷ) ಗೆ ಸಂಬಂಧಿಸಿದಂತೆ 2015ರ ಎಪ್ರಿಲ್ 22ರಂದು ಡಿಎನ್ಎ (DNA) ವರದಿ ಬರಲಿದ್ದು, ಅಲ್ಲಿಯವರೆಗೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರು ತನಿಖೆ ನಡೆಸದಿರಲು ಪೊಲೀಸ್ ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ನವೀನನದು ಎನ್ನಲಾದ ಅಸ್ಥಿಪಂಜರ ಪಾಂಬೂರು ಪರಿಸರದಲ್ಲಿ ಪತ್ತೆಯಾದ ಸಂದರ್ಭದಲ್ಲಿ ಡಿಎನ್ ಎ ಪ್ರಯೋಗಕ್ಕೆ ಬೇಕಾದ ವಸ್ತುಗಳನ್ನು ಮತ್ತು ನವೀನನ ತಂದೆ-ತಾಯಿಯವರ ರಕ್ತದ ಮಾದರಿಗಳನ್ನು ಸಂಗ್ರಹಿಸಿರುವ ಪೊಲೀಸ್ ಅಧಿಕಾರಿಗಳು, ಇವುಗಳನ್ನೆಲ್ಲ ಹೈದರಾಬಾದ್ ಗೆ ಉನ್ನತ ಮಟ್ಟದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದೆ. ಹೈದರಾಬಾದ್ ನಿಂದ ಡಿಎನ್ ಎ ವರದಿ ಬರುವುದು 2015ರ ಎಪ್ರಿಲ್ 22ಕ್ಕೆ. ಹಾಗಾಗಿ ಎಇಎನ್ ಎ ವರದಿ ಬರುವವರೆಗೆ ಕಾಯಲು ಮತ್ತು ಮರು ತನಿಖೆ ನಡೆಸದಿರಲು ಪೊಲೀಸ್ ಅಧಿಕಾರಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಮಾರ್ಚ್ 9ರಂದು ಪಾಂಬೂರು ಪರಿಸರದಲ್ಲಿ ಪತ್ತೆಯಾದ ಅಸ್ಥಿಪಂಜರ ನಮ್ಮ ಮಗ ನವೀನನದು ಅಲ್ಲ. ನಮ್ಮ ಮಗ ನವೀನ್ ಇನ್ನೂ ಜೀವಂತವಿದ್ದಾನೆ. ಮಗನನ್ನು ಯಾರೋ ಅಪಹರಿಸಿ ಮಾರಾಟ ಮಾಡಿದ್ದಾರೆ ಎಂಬ ಸಂಶಯದೊಂದಿಗೆ, ಇತ್ತೀಚೆಗೆ ನವೀನನ ಕುಟುಂಬಸ್ಥರು ಹಾಗೂ ಊರಿನವರು ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ನಡೆಸಿದ ವಿಶೇಷ ಮಹಿಳಾ ಗ್ರಾಮಸಭೆಯಲ್ಲಿ ಮರು ತನಿಖೆ ನಡೆಸಿ ನ್ಯಾಯ ಒದಗಿಸಿಕೊಡುವಂತೆ ಕೋರಿ ಮನವಿ ಸಲ್ಲಿಸಿದ್ದರು.

ಈ ಮನವಿಯ ಮೇಲೆ ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ಆಡಳಿತವು ನಿರ್ಣಯ ತೆಗೆದುಕೊಂಡು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿಯನ್ನು ಸಲ್ಲಿಸಿತ್ತು. ಈ ಮನವಿಗೆ ಉತ್ತರವಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಗ್ರಾಮ ಪಂಚಾಯಿತಿಗೆ ಪತ್ರ ಬರೆದು 22.04.2014ರಂದು ಪತ್ತೆಯಾದ ಅಸ್ಥಿ ಪಂಜರದ ಡಿಎನ್ಎ ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಮದು ಸ್ಪಷ್ಟಪಡಿಸಿದ್ದಾರೆ.

 

 

 

 

Leave a Reply

Your email address will not be published. Required fields are marked *