Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

40 ಮಂದಿಯ ತಂಡದಿಂದ ವಿದ್ಯಾರ್ಥಿಗಳಿಗೆ ಹಲ್ಲೆ !

ಉಪ್ಪಳ(ಕಾಸರಗೋಡು): ಇಲ್ಲಿಗೆ ಸಮೀಪದ ಬಂದ್ಯೋಡು ಬಳಿಯ ಮುಟ್ಟಂ ನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ 40 ಮಂದಿಯ ತಂಡದ ಮದ್ಯೆ ನಡೆದ ಘರ್ಷಣೆಯಲ್ಲಿ 11 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಮೊಗ್ರಾಲ್ ಪುತ್ತೂರಿನ ಜಾಬಿರ್(15), ಬಂದ್ಯೋಡು ಅಡ್ಕದ ಮಹ್ಶೂಕ್(16), ಬಾಳಿಯೂರಿನ ನಿಯಾಝ್, ಅಫಾನ್, ತಲಂಗರೆಯ ಸಿರಾಜ್, ಬಂದ್ಯೋಡು ಪಚ್ಚಂಬಳದ ಮುಸ್ತಫಾ, ಕುಂಬಳೆ ಪೂಕಟ್ಟೆಯ ಮುಂಶೀರ್, ಏರಿಯಾಲಿನ ಅಜ್ಮಲ್, ಪಚ್ಚಂಬಳದ ಸಮಾನ್, ತಳಂಗರೆಯ ಅನಸ್, ಸಿರಾಜ್ ಗಾಯಾಳು ವಿದ್ಯಾರ್ಥಿಗಳಾಗಿದ್ದಾರೆ.

ಜಾಬಿರ್ ಹಾಗೂ ಮಹ್ಶೂಕ್ ಎಂಬಿಬ್ಬರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿಯೂ, ಉಳಿದ ವಿದ್ಯಾರ್ಥಿಗಳನ್ನು ಕುಂಬಳೆ ಸರಕಾರಿ ಆಸ್ಪತ್ರೆಗೂ ದಾಖಲಿಸಲಾಗಿದೆ.

ಕಳೆದ ದಿನ ಶಾಲೆ ಬಿಟ್ಟು ಮರಳುತ್ತಿದ್ದ ವೇಳೆ 40 ಮಂದಿಯ ತಂಡ ಹಲ್ಲೆ ನಡೆಸಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *