Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಇಲ್ಲಿ ವಾಹನಗಳೇ ಸಮಸ್ಯೆ: ಪೊಲೀಸ್ ಕಾಲಹರಣ !

ಮಂಜೇಶ್ವರ(ಕಾಸರಗೋಡು): ಮಂಜೇಶ್ವರದ ಹೃದಯ ಭಾಗವಾದ ಹೊಸಂಗಡಿ ಪೇಟೆಯಲ್ಲಿನ ನಾಗರಿಕರು ವಾಹನ ದಟ್ಟನೆಯಿಂದಾಗಿ ರಸ್ತೆ ಬದಿಯಲ್ಲಿ ನಡೆದಾಡಲು ಹರ ಸಾಹಸ ಪಡುವಂಥ ಶೋಚನೀಯ ಪರಿಸ್ಥಿತಿ ಸೃಷ್ಟಿಯಾಗಿದೆ.

ಉದ್ಯೋಗಕ್ಕಾಗಿ ಮಂಗಳೂರು, ಕಾಸರಗೋಡು ಮುಂತಾದೆಡೆಗಳಿಗೆ ತೆರಳುವವರು ತಮ್ಮ ಬೈಕ್, ಕಾರುಗಳನ್ನು ಸಂಚಾರಕ್ಕೆ ತೊಂದರೆ ಉಂಟು ಮಾಡುವ ರೀತಿಯಲ್ಲಿ ರಸ್ತೆ ಬದಿಯಲ್ಲೇ ಪಾರ್ಕ್ ಮಾಡುವುದು ಕೂಡಾ ಇಲ್ಲಿನ ಸಮ್ಯೆಗಳಿಗೆ ಕಾರಣವಾಗಿದೆ.

ಅಲ್ಲಲ್ಲಿ ರಿಕ್ಷಾ ಪಾರ್ಕಿಂಗ್, ಟೆಂಪೋ ಪಾರ್ಕಿಂಗ್, ಗೂಡಂಗಡಿಗಳು, ರಸ್ತೆ ಬದಿಯಲ್ಲಿಯೇ ಮೀನು ಮಾರಾಟ ಮಾರಾಟ ಇವೆಲ್ಲವುಗಳಿಂದ ಹೊಸಂಗಡಿ ಪೇಟೆಯನ್ನು ಮುಕ್ತಿಗೊಳಿಸಲು ಮಂಜೇಶ್ವರ ಗ್ರಾಮ ಪಂಚಾಯತ್ ಮಾತ್ರ ಇನ್ನೂ ಮುಂದಾಗಲಿಲ್ಲ ಎಂಬುದು ಮಾತ್ರ ವಿಪರ್ಯಾಸ.

ಸಂಚಾರಿ ವ್ಯವಸ್ಥೆಯ ಸುಗಮಕ್ಕಾಗಿ ಹೊಸಂಗಡಿ ಪೇಟೆಯಲ್ಲಿ ಪೊಲೀಸರನ್ನು ನೇಮಿಸಬೇಕೆಂಬುದು ಇಲ್ಲಿನ ನಾಗರಿಕರ ಹಾಗೂ ವ್ಯಾಪಾರಿಗಳ ಬೇಡಿಕೆಯಾಗಿತ್ತು. ಇದರಂತೆ, ಇಲ್ಲಿಗೆ ಪೊಲೀಸ್ ಸಿಬ್ಬಂದಿಯೋರ್ವನನ್ನು ನೇಮಿಸಲಾಗಿದ್ದು, ಈತ ಮಾತ್ರ ಸಂಚಾರಿ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿರುವ ಬೈಕ್ ಗಳಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದಾರೆಂದು ಸ್ಥಳೀಯರು ದೂರುತ್ತಾರೆ.

Leave a Reply

Your email address will not be published. Required fields are marked *