Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಶಾಲಾ ಕಟ್ಟಡ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ: ಹೋರಾಟದತ್ತ ನಾಗರಿಕರು !

ಮಂಜೇಶ್ವರ(ಕಾಸರಗೋಡು): ಇಲ್ಲಿಗೆ ಸಮೀಪದ ಉದ್ಯಾವರ ಗುಡ್ಡೆ ಸರಕಾರಿ ಹೈಸ್ಕೂಲಿಗೆ ಕೇಂದ್ರ ಸರಕಾರದ ಆರ್ ಎಂಎಸ್ ನಿಧಿಯಿಂದ ಮಂಜೂರಾದ ನೂತನ ಕಟ್ಟಡದ ಕಾಮಗಾರಿಯಲ್ಲಿ ಗುತ್ತಿಗೆದಾರ ಭಾರೀ ಅವ್ಯವಹಾರ ನಡೆಸಿರುವ ಬಗ್ಗೆ ಸಾರ್ವಜನಿಕರು ಆಕ್ರೋಶಿತರಾಗಿದ್ದಾರೆ.

ಆಕ್ರೋಶಿತ ವಿದ್ಯಾರ್ಥಿಗಳ ಪೋಷಕರು, ಸ್ಥಳೀಯರು ಹಾಗೂ ಶಾಲಾ ಅಧ್ಯಾಪಕರು ಇತ್ತೀಚೆಗೆ ಶಾಲಾ ಪರಿಸರದಲ್ಲಿ ಸಭೆ ನಡೆಸಿ ಗುತ್ತಿಗೆದಾರನ ಅವ್ಯವಹಾರದ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.

shala kattada-2

ಆರ್ಎಂಎಸ್ ನಿಧಿಯಿಂದ ಈ ಶಾಲೆಗೆ 5 ತರಗತಿ ಕೊಠಡಿಯನ್ನು ನಿರ್ಮಿಸಲು 52 ಲಕ್ಷ ರು. ಗಳನ್ನು ಮಂಜೂರುಗೊಳಿಸಲಾಗಿತ್ತು. ಯೋಜನೆಯ ಇ.ಟೆಂಡರ್ ಪ್ರಕ್ರೀಯೆಯಲ್ಲಿ ಗುತ್ತಿಗೆ ಪಡೆದವರು ಇತ್ತೀಚೆಗೆ ಕಾಮಗಾರಿಗೆ ಚಾಲನೆ ನೀಡಿದ್ದರು. ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಕಾಮಗಾರಿಯನ್ನು ಅವಲೋಕಿಸಿದ ಸ್ಥಳೀಯರು, ಕಾಮಗಾರಿಯ ಕಳಪೆ ಗುಣಮಟ್ಟವನ್ನು ಪತ್ತೆ ಹಚ್ಚಿ ಪ್ರತಿಭಟನೆಯ ರಂಗಕ್ಕಿಳಿದು ಕಾಮಗಾರಿ ತಡೆಯಲು ಸೂಚನೆ ನೀಡಿದ್ದಾರೆ.

ಕಾಮಗಾರಿ ನಡೆಯುತ್ತಿರುವ ಕಟ್ಟಡದ ಉತ್ತರ ಭಾಗದಲ್ಲಿ ಗ್ರಾಮ ಪಂಚಾಯತ್ ರಸ್ತೆ ಇದ್ದು, ಇದರ ಬದಿಯಲ್ಲಿ ಅವ್ಯವಸ್ಥಿತವಾಗಿ ಮಣ್ಣು ತುಂಬಿಸಿ ಸರಿಯಾಗಿ ಫಿಲ್ಲರ್ ಗೆ ಬೇಕಾದಷ್ಟು ಪಾಯ ತೆಗೆಯದೆ ಬೆಡ್ ಹಾಕಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಭದ್ರವಾದ ಪಾಯ ನಿರ್ಮಿಸದೆ ಫಿಲ್ಲರ್ ಹಾಕುವುದರಿಂದ ಕುಸಿದು ಬೀಳುವ ಅಪಾಯದ ಬಗ್ಗೆ ಪೋಷಕರು ಪ್ರಶ್ನಿಸಿದ್ದಾರೆ. ಕಗ್ಗಲ್ಲು ಕೋರೆಯಿಂದ ಉಪಯೋಗ ಶೂನ್ಯವಾದ ಮರಳು ಮಿಶ್ರಿತ ಧೂಳು ಜಲ್ಲಿಯನ್ನು ತಂದು ಕಾಮಗಾರಿ ನಡೆಸುತ್ತಿರುವ ಬಗ್ಗೆ ಆರೋಪಿಸಲಾಗಿದೆ.

shala kattada-1

ಆರ್ ಎಂಎಸ್ ಶಾಲೆಗಳು ಜಿಲ್ಲೆಯಾದ್ಯಂತ ಹಲವು ಕಾರಣಗಳಿಂದ ಸಮಸ್ಯಾತ್ಮಕವಾಗಿ ಪರಿಣಮಿಸಿದ್ದು, ನಾಗರಿಕರ ಪ್ರತಿಭಟನೆಗಳಿಗೆ ಕಾರಣವಾಗುತ್ತಿದೆ. ಉದ್ಯಾವರ ಗುಡ್ಡೆ ಶಾಲೆಯ ಆರ್ ಎಂಎಸ್ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲೆಯ ವಿಶೇಷ ಅನುದಾನವಾದ ಪ್ರಭಾಕರ ಕಮಿಷನ್ ನೀಡುವ ಮೊತ್ತದಿಂದ 24 ಲಕ್ಷ ರು.ಬಳಸಿ ಮೂರು ತರಗತಿ ಕೊಠಡಿಗಳ ನಿರ್ಮಾಣ ಹಾಗೂ ಕರ್ನಾಟಕ ರಾಜ್ಯ ಸಭಾ ಸದಸ್ಯೆ ಜಯಶ್ರೀ ಅವರ ಗಡಿ ಅಭಿವೃದ್ದಿ ನಿಧಿಯಿಂದ ಮಂಜೂರುಗೊಂಡ 30 ಲಕ್ಷ ರು.ಗಳನ್ನು ಬಳಸಿ 2 ಮಲ್ಟಿ ಮೀಡಿಯಾ ತರಗತಿ ಮತ್ತು ಒಂದು ಸಾಮಾನ್ಯ ತರಗತಿ ಕೊಠಡಿ ನಿರ್ಮಾಣದ ಕಾಮಗಾರಿ ಯಾವುದೇ ಅಡೆತಡೆಗಳಿಲ್ಲದೆ ಪ್ರತ್ಯೇಕ ಟೆಂಡರ್ದಾರರ ಮೂಲಕ ನಡೆಯುತ್ತಿರುವ ಮಧ್ಯೆ, ಆರ್ ಎಂಎಸ್ ಮೊತ್ತದ ಬಳಕೆಯ ಟೆಂಡರ್ದಾರನ ಅವ್ಯವಹಾರ ಸಾರ್ವಜನಿಕರನ್ನು ರೊಚ್ಚಿಗೆಬ್ಬಿಸಿದೆ.

ಈ ನಡುವೆ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು ಕಾಮಗಾರಿಯ ಅವ್ಯವಸ್ಥೆಯ ಬಗ್ಗೆ ಗುತ್ತಿಗೆದಾರನನ್ನು ಪ್ರಶ್ನಿಸಿದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮೇಲೇರಲು ಬಂದನೆಂದು ದೂರಿದ್ದಾರೆ.

shala kattada 3

‘ವಿಜಿಲೆನ್ಸ್ ಗೆ ದೂರು ನೀಡಲಾಗುವುದು’

# ಕಳಪೆ ಕಾಮಗಾರಿ ನಡೆಸುತ್ತಿರುವ ಆರ್ಎಂಎಸ್ ಕೊಠಡಿಯಲ್ಲಿ ಯಾವ ಧೈರ್ಯದಲ್ಲಿ ನಾವು ನಮ್ಮ ಮಕ್ಕಳನ್ನು ಕಳುಹಿಸುವುದು. ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಯೋಜನೆಯ ಎಸ್ಟಿಮೇಟ್ನ್ನು ಪಡೆದು ಗುತ್ತಿಗೆದಾರನ ವಿರುದ್ದ ವಿಜಿಲೆನ್ಸ್ ಅಧಿಕಾರಿಗಳಿಗೆ ದೂರು ನೀಡಲಾಗುವುದು.
– ಪಾಂಡುರಂಗ, ಶಾಲಾ ಮುಖ್ಯೋಪಾಧ್ಯಾಯರು.

ಸೂಕ್ತ ಕ್ರಮ: ಜಿ.ಪಂ.ಸದಸ್ಯೆ

# ಗುತ್ತಿಗೆದಾರನ ಕಳಪೆ ಕಾಮಗಾರಿಯ ಬಗ್ಗೆ ಜಿಲ್ಲಾ ಪಂಚಾಯತ್ ಅಭಿಯಂತರರಿಗೆ ಈಗಾಗಲೇ ಹಲವು ಬಾರಿ ಮಾಹಿತಿ ನೀಡಿದ್ದರೂ ನಿರ್ಲಕ್ಷ್ಯಿಸಿದ್ದಾರೆ. ಆದರೆ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಭರವಸೆ ನೀಡಿದ್ದು; ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಮಮತಾ ದಿವಾಕರ್, ಜಿಲ್ಲಾ ಪಂಚಾಯತ್ ಸದಸ್ಯೆ.

Leave a Reply

Your email address will not be published. Required fields are marked *