Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಟೀನೇಜರ್ಸ್ ಯಾಕ್ ಸರ್ ಹೀಗ್ ಮಾಡ್ತಾರೆ ?

* ಮನೋವಿಶ್ವಾಸ

manovishwaasa clinic-2 copy

* ಡಾ.ಪಿ.ವಿ.ಭಂಡಾರಿ

(ಕಳೆದ ವಾರದಿಂದ ಮುಂದುವರಿದುದು)

# ವಕೀಲ ರಾಮಪ್ರಸಾದ್ ತನ್ನ Infiuence ಉಪಯೋಗಿಸಿ ಲವ ಹಾಗೂ ಟ್ರೀಝಾರನ್ನು ಮಕ್ಕಳ ರಕ್ಷಣಾ ಘಟಕದಿಂದ ಬಿಡಿಸಿಕೊಂಡು ಬಂದರು. ಲವ, ತನ್ನ ಮರ್ಯಾದೆಯನ್ನು ಬೀದಿಗೆ ಎಳೆದನೆಂದು ರಾಮಪ್ರಸಾದ್ ಸಿಟ್ಟಿನಲ್ಲಿ ಕೆಂಡಮಂಡಳವಾದರು. ಆ ಸಂದರ್ಭದಲ್ಲೇ ಅವರಿಗೆ ನೆನಪಿಗೆ ಬಂದದ್ದು, ಅವರ ಶಾಲಾ ಮಿತ್ರ ಡಾ.ಶ್ರೀಗಣೇಶ್.

ಶ್ರೀಗಣೇಶ್, ಟೀನ್ ಏಜ್ ಮಕ್ಕಳಿಗಾಗಿ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆಂದು, ಅವರು ಶ್ರೀಗಣೇಶರ Facebook  Status ಗಳನ್ನು ನೋಡಿ ತಿಳಿದುಕೊಂಡಿದ್ದರು. ಆ ಕೂಡಲೇ ತನ್ನ ಸ್ನೇಹಿತನನ್ನು ಸಂದರ್ಶಿಸಿದರು. ಡಾ.ಶ್ರೀಗಣೇಶರ ”ಮನೋವಿಶ್ವಾಸ” ಕ್ಲಿನಿಕ್ ಗೆ ಮಗನನ್ನು ಕರೆದುಕೊಂಡು ಬಂದರು.

ಮಿ.ಲವ ಡಾ.ಶ್ರೀಗಣೇಶರೊಂದಿಗೆ ಒಬ್ಬನೇ ಕುಳಿತು ಮಾತನಾಡಲಾರಂಭಿಸಿದ…

ಮಿ.ಲವ ಹೇಳುವ ಪ್ರಕಾರ, ಲವ ಮತ್ತು ಟ್ರೀಝಾ ಇಬ್ಬರೂ ಕೂಡಾ ಗೋವಾದ ಹೆಸರಾಂತ POP Singer Remo Fermandes ನ ಅಭಿಮಾನಿಗಳಾಗಿದ್ದರು. ಇಬ್ಬರೂ ಕೂಡಾ ಆತನ ಹಾಡುಗಳನ್ನು ಕೇಳಿ ತುಂಬಾ ಖುಷಿ ಪಡುತ್ತಿದ್ದರು. ಆತನು ಇಬ್ಬರಿಗೂ ”ಆರಾಧ್ಯ ದೇವ”ನೇ ಆಗಿ ಹೋಗಿದ್ದ. ಇಬ್ಬರೂ ಯಾವಾಗಲೂ ಅವನ ಬಗ್ಗೆಯೇ ಮಾತನಾಡುತ್ತಿದ್ದರು.

lava-2

ಆತನನ್ನು ನೋಡಲೇಬೇಕು ಎಂಬ ತೀವ್ರ ಹಂಬಲ ಇಬ್ಬರನ್ನೂ ಬಹುವಾಗಿ ಕಾಡುತ್ತಿತ್ತು. ಇಬ್ಬರೂ ತಮ್ಮ Ipod ನಲ್ಲಿ remo fernandes ನ ಹಾಡುಗಳನ್ನು ಹಾಕಿಕೊಂಡು ಬಿಡುವಿನ ವೇಳೆಯಲ್ಲಿ ಕದ್ದು ಮುಚ್ಚಿ ಈ ಹಾಡುಗಳ ಬಗ್ಗೆ ಒಟ್ಟಿಗೆ ಕುಳಿತು ಚರ್ಚೆ ಮಾಡುತ್ತಿದ್ದರು. ಇತರ ಮಿತ್ರರಿಗೆ ಕೂಡಾ ಈ ಹಾಡುಗಳ ಬಗ್ಗೆ ತಿಳಿಯುವಂತೆ ಒತ್ತಾಯ ಮಾಡುತ್ತಿದ್ದರು. ಹಿಂದಿ ಸಿನಿಮಾ ”BOMBAY” ಇದರ ಪ್ರಖ್ಯಾತ ಹಾಡು ”ಹಮ್ಮಾ ಹಮ್ಮಾ…” ಇಬ್ಬರ ಪ್ರೀತಿಯ ಹಾಡಾಗಿತ್ತು.

ರೀಮೋನ 50 ನೇ ಹುಟ್ಟು ಹಬ್ಬದ ಆಚರಣೆ ಪಣಜಿಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ನಡೆಯುತ್ತದೆಂದು ಅವರು ಪತ್ರಿಕೆಗಳ ಮೂಲಕ ತಿಳಿದುಕೊಂಡರು. ಅದರಲ್ಲಿ ಭಾಗಿಯಾಗಲೇಬೆಂಕೆಂದು ಅಂದುಕೊಂಡು ಇಬ್ಬರೂ, ತಮ್ಮ ತಾಯಿ ತಂದೆಯರಲ್ಲಿ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದರು. ಇಬ್ಬರ ಮನೆಯಲ್ಲೂ ಇವರನ್ನು ಕರೆದುಕೊಂಡು ಹೋಗಲು ಹಿರಿಯರು ಒಪ್ಪಿರಲಿಲ್ಲ. ಆದರೆ ಇಂತಹ ”ಐತಿಹಾಸಿಕ” ದಿನವನ್ನು ತಪ್ಪಿಸಿಕೊಳ್ಳಲು ಟ್ರೀಝಾ ಮತ್ತು ಲವ ಇಬ್ಬರೂ ಸಿದ್ದರಿರಲಿಲ್ಲ.

ವಾಸ್ತವಾಂಶ ಇಷ್ಟೇ ಆಗಿತ್ತು…

ಲವ, ಟ್ರೀಝಾಳನ್ನು ತನ್ನ ತಂಗಿಯೆಂದೇ ಭಾವಿಸಿದ್ದನು. ಆದರೆ ಪತ್ರಿಕೆ, ಟಿವಿಗಳಲ್ಲಿ ಬಂದ ವಿಷಯಗಳು ಮತ್ತು ತನ್ನ ತಂದೆ ಆಡಿದ ಮಾತುಗಳಿಂದ ಲವ ಬೇಸತ್ತು ಹೋಗಿದ್ದನು. ಲವನ ತಂದೆ ರಾಮಪ್ರಸಾದ್, ಮಗನ ಐ ಪ್ಯಾಡ್, ಮೊಬೈಲ್ ಗಮನಿಸಿದನು. ಪತ್ರಿಕೆಗಳಲ್ಲಿ ಪ್ರಕಟವಾದಂತೆ ಅಲ್ಲಿ ಯಾವುದೇ ಅಶ್ಲೀಲ ಚಿತ್ರಗಳಗಲೀ, ವೀಡಿಯೋಗಳಾಗಲೀ ಇರಲಿಲ್ಲ. ಮಕ್ಕಳಿಬ್ಬರೂ ಆಗಾಗ ತಮ್ಮ ಐ ಪ್ಯಾಡ್ ಮತ್ತು ಮೊಬೈಲ್ ನಲ್ಲಿ ರೀಮೋನ ಹಾಡುಗಳು, ಚಿತ್ರಗಳನ್ನು ನೋಡಿಕೊಳ್ಳುತ್ತಿದ್ದರು. ಇತರ ಮಕ್ಕಳಿಗೂ ತೋರಿಸುತ್ತಿದ್ದರು. ಆದರೆ, ”ಗಾಳಿಸುದ್ದಿ” ಮಾತ್ರ ಬೇರೆಯೇ ಆಗಿತ್ತು.

lava-4

ನನ್ನ ತಾಯಿ ತಂದೆ ಯಾವಾಗಲೂ ಹೀಗೆ ಸರ್ !, ಅವರಿಗೆ ನಾನು ಸಣ್ಣವನಿರುವಾಗ ನನ್ನೊಂದಿಗೆ ಸಮಯ ಕಳೆಯಲು ಆಗಲಿಲ್ಲ. ನನ್ನನ್ನು ಪ್ರಿತಿಸಲಿಲ್ಲ. ಅಪ್ಪ ಯಾವಾಗಲೂ Case, Court ಇತ್ಯಾದಿ ಅದು ಇದು ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಅಮ್ಮ ತನ್ನ ಸ್ನೇಹಿತರೊಂದಿಗೆ Kitty Party, Cinema, Rotary Club ಎಂದು ಓಡಾಡುತ್ತಿದ್ದರು. ಯಾವಾಗಲೂ ನನ್ನನ್ನು ದೂರುತ್ತಿದ್ದರು.

ನನ್ನ Friends ಮನೆಗೆ ಬಂದರೆ, ಅವರ ಅಪ್ಪ ಯಾರು ?, ಅಮ್ಮ ಯಾರು ? ಅವರ ಮನೆ ಎಲ್ಲಿದೆ ? ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದರಿಂದ ನನ್ನ Friends ಮನೆ ಬರುತ್ತಿರಲಿಲ್ಲ. ಶಾಲೆಯಲ್ಲಿ ನಾನು B + Grade ತೆಗೆಯುತ್ತಿದ್ದೆ. ಅದಕ್ಕೆ, ನನ್ನ Friends ಕಾರಣ ಎಂದು ಅಮ್ಮ ದೂರುತ್ತಿದ್ದರು. ನಾನು, ಬೇಡ ಬೇಡ ಎಂದರೂ ಕರೆದುಕೊಂಡು ಬಂದು ಊಟಿಯಲ್ಲಿ Blue Valley School ಗೆ ಹಾಕಿದರು.

lava-5

ನನ್ನ ಅಪ್ಪ, ಯಾವಾಗಲೂ ನನ್ನನ್ನು ಧ್ವೇಷಿಸುತ್ತಾರೆ. ನಾನು ಅವರ ಮಗನೇ ಅಲ್ಲವಂತೆ. ಆಸ್ಪತ್ರೆಯಲ್ಲಿ Exchange ಆಗಿದ್ದೇನೆ ಎಂದು ಪದೇ ಪದೇ ಹೇಳುತ್ತಾರೆ. ಇಂತಹ ಅಪ್ಪ, ಅಮ್ಮನನ್ನು ನೀವು ನೋಡಿದ್ದೀರಾ ಸರ್ .. ? ಇದು ಲವ ತನ್ನ ತಂದೆ ತಾಯಿಯರ ಬಗ್ಗೆ ಹೇಳಿದ ಮಾತುಗಳು !

ಡಾ.ಶ್ರೀಗಣೇಶರಿಗೆ ಟೀನೇಜರ್ಸ್ ರೊಂದಿಗೆ ಆಪ್ತ ಸಮಾಲೋಚನೆಯಲ್ಲಿ ಭಾಗವಹಿಸುವುದು ಒಂದು Challenging ವಿಷಯವಾಗಿತ್ತು. ಮಿ. ಲವನ ಮಾತುಗಳು, ಅವರು ಓದಿದ ಪಠ್ಯ ಪುಸ್ತಕಗಳ ಸಾರಾಂಶವನ್ನು ಸಾರುತ್ತಿತ್ತು.

Teen Age ಅಂದರೆ, ಒಂದು ವಿಚಿತ್ರ ದ್ವಂದ್ವಗಳ ಕಾಲ. Teenagers – Rebellious ಆಗಿರುತ್ತಾರೆ. ತಾಯಿ ತಂದೆ, ಟೀಚರ್ಸ್ ಗಳನ್ನು ವಿರೋಧಿಸುತ್ತಾರೆ. ಅವರಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಹಿರಿಯರು ಹೇಳುವುದೊಂದು, ಮಾಡುವುದು ಇನ್ನೊಂದು ಎಂಬುದನ್ನು ಗಮನಿಸುತ್ತಾರೆ.

ಟೀನ್ ಏಜ್ ನಲ್ಲಿ Peer Pressure ಮಿತ್ರರ ಒತ್ತಡ ಬಹಳ ಮುಖ್ಯವಾದ ಪ್ರಭಾವ. ಸಮಾನ ಮನಸ್ಕ ಮಕ್ಕಳು ಒಟ್ಟಾಗುತ್ತಾರೆ. ಸಮಾನ ಆಸಕ್ತಿಗಳನ್ನು ಬೆಳೆಸಿಕೊಂಡ ಮಕ್ಕಳು ತಮ್ಮ ಆಸಕ್ತಿಗಳನ್ನು ಬೇರೆ ಮಕ್ಕಳ ಮೇಲೂ ಹೇರಲು ಬಹಳ ಪ್ರಯತ್ನ ಮಾಡುತ್ತಾರೆ.

ಈ ಮಕ್ಕಳು ಯಾವಾಗಲೂ ಕುತೂಹಲ ಮತ್ತು ಪ್ರಯೋಗ ಮನೋಭಾವದವರಾಗಿರುತ್ತಾರೆ. Opposite Sex Attraction (ಅನ್ಯ ಲಿಂಗ ಅಕರ್ಷಣೆ) ಸಹಜವಾಗಿ ಇವರಲ್ಲಿ ಕಂಡುಬರುತ್ತದೆ.

Modelling and Idol Worship ಮಾದರಿಗಳನ್ನು ಹುಡುಕುವುದು, ಅವರ ಹಾಗೆ ನಾವು ಆಗಬೇಕೆಂದು ಯೋಚನೆ ಮಾಡುವುದು, ಸಿನೆಮಾ ತಾರೆಯರು, ಕ್ರಿಕೇಟ್ ತಾರೆಯರು, POP ಸ್ಟಾರ್ ಗಳು ಹೀಗೆ Celebrities ಗಳನ್ನು ಆರಾಧಿಸುವುದು ಈ ಪ್ರಾಯದಲ್ಲಿ ಸರ್ವೇ ಸಾಮಾನ್ಯ.

ಈ ಎಲ್ಲಾ ವಿಷಯಗಳು ಡಾ.ಶ್ರೀಗಣೇಶರವರ ತಲೆಯಲ್ಲಿ ಬಂದಿತು. ಡಾ.ಶ್ರೀಗಣೇಶ್ ಮುಗುಳ್ನಕ್ಕರು…..

(ಮುಂದಿನ ವಾರ ಮುಂದುವರಿಯುತ್ತದೆ)

ಚಿತ್ರ ಕೃಪೆ: ಅಂತರ್ಜಾಲ.

Leave a Reply

Your email address will not be published. Required fields are marked *