Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಟೆಂಪೋ ಸಹಿತ ಭಾರೀ ಮೌಲ್ಯದ ಅಕ್ರಮ ಸ್ಪಿರಿಟ್ ವಶ

ಮಂಜೇಶ್ವರ(ಕಾಸರಗೋಡು): ರಸ್ತೆ ಬದಿ ನಿಲ್ಲಿಸಲಾಗಿದ್ದ ಟೆಂಪೋದಿಂದ ಭಾರೀ ಮೌಲ್ಯದ ಅಕ್ರಮ ಸ್ಪಿರಿಟ್ನ್ನು ಮಂಜೇಶ್ವರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. 1400 ಲೀಟರ್ ಸ್ಪಿರಿಟ್ ಕ್ಯಾನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಜೇಶ್ವರ ಪೊಲೀಸ್ ಠಾಣೆಯ ಎಎಸ್ಐ ವಿಜಯ್ ಹಾಗೂ ಸಿಬ್ಬಂದಿಗಳು ಡಿ.18ರಂದು ರಾತ್ರಿ ಕೇರಳ-ಕರ್ನಾಟಕ ಗಡಿ ಪ್ರದೇಶವಾದ ಹೊಸಂಗಡಿ-ಕನ್ಯಾನ ರಸ್ತೆಯ ಆನೆಕಲ್ಲು ಬಳಿಯ ಗೂವೆದಪಡ್ಪು ಎಂಬಲ್ಲಿ ಗಸ್ತು ನಡೆಸುತ್ತಿದ್ದಾಗ ರಸ್ತೆ ಬದಿ ನಿಲ್ಲಿಸಲಾಗಿದ್ದ ಟೆಂಪೋವೊಂದನ್ನು ತಪಾಸಣೆ ನಡೆಸಿದಾಗ, ಅಕ್ರಮ ಸ್ಪಿರಿಟ್ ಪತ್ತೆಯಾಗಿದೆ.

ಟೆಂಪೋದಲ್ಲಿ ಯಾರೂ ಇಲ್ಲದಿದ್ದುದರಿಂದ ಸ್ಪಿರಿಟ್ ನ್ನು ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತ ಎಂಬ ಬಗ್ಗೆ ಪೊಲೀಸರಿಗೆ ಪತ್ತೆ ಮಾಡಲು ಮಾತ್ರ ಸಾಧ್ಯವಾಗಿಲ್ಲ. ಅಕ್ರಮ ಸ್ಪಿರಿಟ್ ಸಾಗಾಟದಾರರು ಪೊಲಿಸರನ್ನು ಕಂಡು ಟೆಂಪೋ ಉಪೇಕ್ಷಿಸಿ ಪಲಾಯನಗೈದಿರಬಹುದೆಂದು ಸಂಶಯಿಸಲಾಗಿದೆ.

tempo-2

ಟೆಂಪೋ ನಂಬರ್ ನಕಲಿಯಾಗಿರುವ ಸಾಧ್ಯತೆ ಇದೆ ಎಂದು ಪೊಲಿಸರು ಸಂಶಯಿಸಿದ್ದಾರೆ. ಪೊಲೀಸರು ಟೆಂಪೋ ಬಳಿ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದಾಗ ಇಬ್ಬರು ಅಪರಿಚಿತರು ಬೈಕ್ನಲ್ಲಿ ಸುತ್ತಾಡುತ್ತಿರುವುದನ್ನು ಗಮನಿಸಿದ ಪೊಲೀಸರು, ಅವರನ್ನು ಬೆನ್ನಟ್ಟಲು ಯತ್ನಿಸಿದರೂ ಅಪರಿಚಿತರು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುವಲ್ಲಿ ಯಶ್ವಿಯಾಗಿದ್ದರು.

35 ಲೀಟರ್ ಸ್ಪಿರಿಟ್ ನ್ನು 40 ಕ್ಯಾನ್ ಗಳಲ್ಲಾಗಿ ತುಂಬಿಸಿಡಲಾಗಿತ್ತು. ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು, ಟೆಂಪೋದ ಮಾಲೀಕರು ಹಾಗೂ ಆರೋಪಿಗಳ ಶೋಧದಲ್ಲಿ ತೊಡಗಿದ್ದಾರೆ.

Leave a Reply

Your email address will not be published. Required fields are marked *