Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕುಂಬಳೆ ಉಪಜಿಲ್ಲಾ ಮಟ್ಟದ ಸಂಸ್ಕೃತ ಶಿಬಿರ

ಕುಂಬಳೆ(ಕಾಸರಗೋಡು): ಕುಂಬಳೆ ಉಪಜಿಲ್ಲಾ ಮಟ್ಟದ ಮೂರು ದಿನಗಳ ಸಂಸ್ಕೃತ ಶಿಬಿರವು ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಡಿ.19ರಂದು ಪ್ರಾರಂಭಗೊಂಡಿದ್ದು, ಇಂದು ಸಮಾರೋಪಗೊಳ್ಳಲಿದೆ.

ಸಂಸ್ಕೃತವು ದೇವ ಭಾಷೆ, ಇದರ ಕಲಿಕೆಯು ಉತ್ತಮ ಸಂಸ್ಕೃತಿಯನ್ನು ಮೈಗೂಡಿಸುತ್ತದೆ. ಈ ನಿಟ್ಟಿನಲ್ಲಿ ಕಲಿಕೆಗೆ ಪೂರಕವಾದ ಇಂತಹ ಶಿಬಿರಗಳು ಅರ್ಥಪೂರ್ಣವಾಗಿದೆ ಎಂದು ಶಿಬಿರವನ್ನು ಉದ್ಘಾಟಿಸಿದ ಕುಂಬಳೆ ಉಪ ಜಿಲ್ಲಾ ವಿದ್ಯಾಧಿಕಾರಿ ಕೈಲಾಸ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಎಚ್.ಶಿವರಾಮ ಭಟ್ ಹಳೆಮನೆ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಾಮು ಯು,ಸಂಸ್ಕೃತ ಅಕಾಡೆಮಿ ರಾಜ್ಯಾಧ್ಯಕ್ಷ ಪ್ರದೀಪ್ ಕುಮಾರ್ ಕೆ, ಜಿಲ್ಲಾ ಸಂಸ್ಕೃತ ಅಕಾಡೆಮಿ ಕಾರ್ಯಾಧ್ಯಕ್ಷ ಸುನಿಲ್ ಕುಮಾರ್ ಕೆ, ಕುಂಬಳೆ ಉಪ ಜಿಲ್ಲಾ ಸಂಸ್ಕೃತ ಅಕಾಡೆಮಿ ಕೌನ್ಸಿಲರ್ ಶಿಜು ಮಾಸ್ಟರ್ ಶುಭಾಶಂಸನೆಗೈದರು.

ಕುಂಬಳೆ ಉಪ ಜಿಲ್ಲೆಯ ವಿವಿಧ ಶಾಲೆಗಳ 136 ವಿದ್ಯಾರ್ಥಿ-ವಿಧ್ಯಾರ್ಥಿನಿಯರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರಾದ ನರಹರಿ ಪಿ. ಸ್ವಾಗತಿಸಿದರು. ಸಂಸ್ಕೃತ ಅಧ್ಯಾಪಕ ಮೋಹನಚಂದ್ರ ಡಿ. ವಂದಿಸಿದರು. ಉಮೇಶ್ ಜಿ.ಎನ್. ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *