Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಕವಿ ಕಯ್ಯಾರರು ಸಾರಸ್ವತ ಲೋಕದ ಮಹಾನ್ ಸಾಧಕ: ಏರ್ಯ ಲಕ್ಷ್ಮೀನಾರಾಯಣ ಆಳ್ವ

ಬದಿಯಡ್ಕ(ಕಾಸರಗೋಡು): ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆಯ ನೇತೃತ್ವದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಆಶ್ರಯದಲ್ಲಿ ನಾಡೋಜ, ಶತಾಯುಷಿ ಕಯ್ಯಾರ ಕಿಞಿಣ್ಣ ರೈ ಅವರಿಗೆ ನಮನ ಕಾರ್ಯಕ್ರಮ ಡಿ.21ರಂದು ಕಯ್ಯಾರರ ನಿವಾಸ ಪೆರಡಾಲದ ಕವಿತಾ ಕುಟೀರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕಯ್ಯಾರರನ್ನು ಅಭಿನಂದಿಸಿ ಮಾತನಾಡಿದ ಡಾ.ಏರ್ಯಲಕ್ಷ್ಮೀನಾರಾಯಣ ಆಳ್ವ, ಗಡಿನಾಡಿನ ಸಾರಸ್ವತ ಲೋಕದ ಮಹಾನ್ ಸಾಧಕ, ಶತಮಾನದ ಜೀವಿತದೊಡನೆ ನಮ್ಮೊಡನಿರುವುದು ಹೆಮ್ಮೆ. ಸಾಹಿತಿಯಾಗಿ, ಶಿಕ್ಷಣ ತಜ್ಞರಾಗಿ, ಕರ್ನಾಟಕ ಏಕೀಕರಣ ಹೋರಾಟದ ಮುಂಚೂಣಿಯ ನಾಯಕರಾಗಿ, ಗಡಿನಾಡ ಹೋರಾಟವೂ ಸೇರಿದಂತೆ ರಾಜಕೀಯ ನೇತಾರರಾಗಿ ವೈವಿದ್ಯಮಯ ಬದುಕಿನ ಕಯ್ಯಾರರು ಕನ್ನಡ ನಾಡು ಸಹಿತ ರಾಷ್ಟ್ರಕ್ಕೇ ಮಾದರಿಯಾದವರು. ಆಧುನಿಕ ಯುವ ಜನಾಂಗಕ್ಕೆ ಕಯ್ಯಾರರ ಬದುಕು ಮತ್ತು ಜೀವನ ಪೂರ್ಣ ಪ್ರಮಾಣದ ಪಾಠವೆಂದು ಅಭಿಪ್ರಾಯಪಟ್ಟರು.

ಸಾಹಿತಿ, ಸಂಶೋಧಕ ಪ್ರೊ.ಅಮೃತಸೋಮೇಶ್ವರ ಅವರು ಕಯ್ಯಾರರನ್ನು ಸನ್ಮಾನಿಸಿದರು. ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ಅಬ್ಬಕ್ಕ ಉತ್ಸವ ಸಮಿತಿ ಕಾರ್ಯದರ್ಶಿ ದಿವಾಕರ ಉಳ್ಳಾಲ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ರಹೀಂ ಉಚ್ಚಿಲ್, ತಾರಾನಾಥ ರೈ, ರಾಘವ, ಅಬ್ದುಲ್ ಅಸೀಸ್, ಸುಹಾಸಿನಿ, ರತ್ನಾವತಿ, ಲಕ್ಷ್ಮೀನಾರಾಯಣ ರೈ ,ನಮಿತಾ, ಲೋಕನಾಥ, ಅನುಪಮಾ, ಶಶಿಕಲಾ, ದೇವಕಿ, ಪದ್ಮಾವತಿ,ವಿಜಯಲಕ್ಷ್ಮೀ ಮೊದಲಾದವರು ಶುಭ ಹಾರೈಸಿದರು. ದುರ್ಗಾಪ್ರಸಾದ್ ರೈ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *