Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಉಡುಪಿ ಡಿಸಿ ಡಾ.ವಿಶಾಲ್ ವಿರುದ್ಧ ಜನಪ್ರತಿನಿಧಿಗಳ ಸಮರ !

ವಿಶೇಷ ವರದಿ : ಶ್ರೀರಾಮ ದಿವಾಣ.

ಉಡುಪಿ: ಎಸ್.ಎಸ್.ಪಟ್ಟಣಶೆಟ್ಟಿಯವರ ಬಳಿಕ ಉಡುಪಿ ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ಡಾ.ಆರ್.ವಿಶಾಲ್ ವಿರುದ್ಧ ಇದೀಗ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸಮರವನ್ನೇ ಸಾರಿದ್ದು, ಇನ್ನೊಂದೆರಡು ತಿಂಗಳೊಳಗೆ ಡಾ.ವಿಶಾಲ್ ಜಿಲ್ಲೆಯಿಂದ ವರ್ಗಾವಣೆಗೊಂಡರೂ ಆಶ್ಚರ್ಯವಿಲ್ಲ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ.

ಕುಂದಾಪುರ ತಾಲೂಕು ಪಂಚಾಯತ್ ಸಾಮಾನ್ಯಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪಚಂದ್ರ ಶೆಟ್ಟಿಯವರ ಪ್ರಶ್ನೆಯೊಂದಕ್ಕೆ ಉತ್ತರ ನೀಡುವ ಸಂದರ್ಭದಲ್ಲಿ ವಾರಾಹಿ ಜಲ ವಿದ್ಯುತ್ ಯೋಜನೆಯ ಇಂಜಿನಿಯರ್ ಗಳ ನಿಲುವನ್ನು ಸಮರ್ಥಿಸಿಕೊಮಡಿದ್ದು, ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಪ್ರತಾಪಚಂದ್ರ ಶೆಟ್ಟಿಯವರು, ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳಿಗೆ ಅಗೌರವ ತೊರಿಸಿದರೆಂದು ಆರೋಪಿಸಿ ವಿಧಾನಮಂಡಲ ಕಾರ್ಯಕಲಾಪದಲ್ಲಿ ಡಾ.ವಿಶಾಲ್ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದು ಪ್ರಸ್ತುತ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳ ಮೂಲವಾಗಿದೆ.

pratap chandra shetty mlc

ಈ ನಡುವೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಹಶಿಲ್ದಾರರು ಸಹಿತ ರಾಜ್ಯ ಯೋಜನಾ ವಲಯದ ವ್ಯಾಪ್ತಿಗೆ ಬರುವ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಹೊರತುಪಡಿಸಿ, ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಮತ್ತು ತಾಲೂಕು ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಭಾಗವಹಿಸುವ ಅಗತ್ಯವಿಲ್ಲ ಎಂಬ ಒಕ್ಕಣೆ ಇರುವ ಸುತ್ತೋಲೆಯೊಂದನ್ನು ಪ್ರತ್ಯೇಕವಾಗಿ ಜಿಲ್ಲಾಧಿಕಾರಿ ಡಾ.ವಿಶಾಲ್ ಅವರು ಹೊರಡಿಸಿದ್ದಾರೆ ಎನ್ನುವುದು, ಜಿಲ್ಲೆಯಾದ್ಯಂತದ ಜನಪ್ರತಿನಿಧಿಗಳನ್ನು ಪ್ರಸ್ತುತ ಕೆರಳಿಸಿದೆ.

ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ತಿಂಗಳ ಸಾಮಾನ್ಯಸಭೆಯಲ್ಲಿ ಯಾವ ಅಧಿಕಾರಿಗಳು ಭಾಗವಹಿಸಬಹುದು, ಯಾವ ಮಟ್ಟದ ಅಧಿಕಾರಿಗಳು ಭಾಗವಹಿಸುವ ಅಗತ್ಯ ಇಲ್ಲ, ಯಾವ ಸಂದರ್ಭದಲ್ಲಿ ಭಾಗವಹಿಸಬಹುದು ಎಂಬ ಬಗ್ಗೆ ಪಂಚಾಯತ್ ರಾಜ್ ಕಾಯ್ದೆಯ 143 ನೇ ಪ್ರಕರಣದಲ್ಲಿ ವಿವರಗಳಿದ್ದು, ಇದರ ಬಗ್ಗೆ ಇದೀಗ ಜನಪ್ರತಿನಿಧಿಗಳು ಭಾರೀ ಚರ್ಚೆ ನಡೆಸುತ್ತಿದ್ದಾರೆ.

ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ವಿರುದ್ಧ ಅಧಿಕೃತವಾಗಿ ಮತ್ತು ಕಾನೂನು ಬದ್ಧವಾಗಿಯೇ ತಿರುಗಿ ಬೀಳಲು ಜಿಲ್ಲೆಯ ಜನಪ್ರತಿನಿಧಿಗಳು ವ್ಯವಸ್ಥಿತವಾಗಿ ಮುಂದಾಗಿದ್ದು, ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಶೀತಲ ಸಮರಕ್ಕೆ ನಾಂದಿಯಾಗುವ ಸಾಧ್ಯತೆಗಳೂ ಇದೆ.

ಜಿಲ್ಲಾಧಿಕಾರಿ ಡಾ.ವಿಶಾಲ್ ವಿರುದ್ಧದ ಪ್ರತಾಪಚಂದ್ರ ಶೆಟ್ಟಿಯವರ ಯುದ್ಧಕ್ಕೆ ಕುಂದಾಪುರ ತಾಲೂಕು ಪಂಚಾಯತ್ ಮೊತ್ತ ಮೊದಲ ಸಾಥ್ ನೀಡಿದೆ. ಈಗಾಗಲೇ ವಿಶೇಷ ಸಾಮಾನ್ಯ ಸಭೆ ಕರೆದಿರುವ ಕುಂದಾಪುರ ತಾಲೂಕು ಪಂಚಾಯತ್, ಸಾಮಾನ್ಯ ಸಭೆಯಲ್ಲಿಯೇ ಡಾ.ವಿಶಾಲ್ ವಿರುದ್ಧ ನಿರ್ಣಯ ಅಂಗೀಕರಿಸಿ, ಸರಕಾರಕ್ಕೆ ರವಾನಿಸಿದೆ.

ಕುಂದಾಪುರ ತಾಲೂಕು ಪಂಚಾಯತ್ ನ ಅದೇ ದಾರಿಯನ್ನು ಉಡುಪಿ ತಾಲೂಕು ಪಂಚಾಯತ್ ಸಹ ಅನುಕರಣೆ ಮಾಡುವ ಪ್ರಕ್ರಿಯೆ ನಡೆಯಿತಾದರೂ, ಇಲ್ಲಿ ಬಹುತೇಕ ಜನಪ್ರತಿನಿಧಿಗಳೂ ಜಿಲ್ಲಾಧಿಕಾರಿಯವರ ವಿರುದ್ಧ ನಿರ್ಣಯ ತೆಗೆದುಕೊಳ್ಳುವ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸದ ಕಾರಣ, ಕೇವಲ ಚರ್ಚೆಗಷ್ಟೇ ವಿಶೇಷ ಸಾಮಾನ್ಯ ಸಭೆ ಸೀಮಿತವಾಗಿ ಮುಕ್ತಾಗೊಂಡಿತು. ಇದು ಎಂಎಲ್ ಸಿ ಪ್ರತಾಪಚಂದ್ರ ಶೆಟ್ಟಿಯವರಿಗೆ ಒಂದು ಹಿನ್ನೆಡೆ ಎನ್ನಲಾಗುತ್ತಿದೆ.

ಈ ಪ್ರಕ್ರಿಯೆಯ ಮುಂದಿನ ಭಾಗವಾಗಿ ಶೀಘ್ರವೇ ಕಾರ್ಕಳ ತಾಲೂಕು ಪಂಚಾಯತ್ ಕೂಡಾ ವಿಶೇಷ ಸಾಮಾನ್ಯ ಸಭೆಯನ್ನು ಕರೆಯಲಿದೆ. ಈ ಸಭೆಯಲ್ಲಿಯೂ 143ನೇ ಪ್ರಕರಣದ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಮಾತ್ರವಲ್ಲ, ಮುಮದಿನ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲೂ ಈ ವಿಷಯ ಗಂಭೀರ ಚರ್ಚೆಗೆ ಬರಲಿದೆ ಎನ್ನಲಾಗಿದೆ. ಆದರೆ, ಇಲ್ಲಿನ ಜನಪ್ರತಿನಿಧಿಗಳು ಡಿಸಿ ಡಾ.ವಿಶಾಲ್ ಅವರ ವಿರುದ್ಧ ನಿರ್ಣಯ ತೆಗೆದುಕೊಳ್ಳುವ ಮಟ್ಟಕ್ಕೆ ಹೋಗಲಿದ್ದಾರೋ, ಅಥವಾ ನಿರ್ಣಯ ತೆಗೆದುಕೊಳ್ಳದೆ ಕೇವಲ ಚರ್ಚೆಗಷ್ಟೇ ವಿಶೇಷ ಸಾಮಾನ್ಯ ಸಭೆಯನ್ನು ಸೀಮಿತಗೊಳಿಸಲಿದ್ದಾರೆಯೋ ಎಂಬುದನ್ನು ಕಾದುನೋಡಬೇಕಷ್ಟೆ.

ಭ್ರಷ್ಟ ಎಂಬ ಆರೋಪವನ್ನಾಗಲೀ, ಕಳಂಕವನ್ನಾಗಲೀ ಇದುವರೆಗೂ ಅಂಟಿಸಿಕೊಳ್ಳದ ಯುವ ಐಎಎಸ್ ಅಧಿಕಾರಿಯಾಗಿರುವ ಡಾ.ಆರ್. ವಿಶಾಲ್ ಅವರು, ಸಿಬ್ಬಂದಿಗಳ ಜೊತೆಗೆ ಸ್ವಲ್ಪ ಖಾರವಾಗಿ ನಡೆದುಕೊಳ್ಳುತ್ತಾರೆ ಎಂಬ ಅಸಮಾಧಾನ ಹಲವು ಮಂದಿ ನೌಕರರಿಗಿದೆ. ಇದು ಬಿಟ್ಟರೆ, ಇದುತನಕ ಇವರ ವಿರುದ್ಧ ಗಂಭೀರವೆನ್ನಬಹುದಾದ ಯಾವುದೇ ದೂರುಗಳೂ ಕೇಳಿಬಂದುದಿಲ್ಲ. ಕಾನೂನುಗಳು, ಸರಕಾರೀ ಸುತ್ತೋಲೆಗಳನ್ನು ಜ್ಯಾರಿಗೊಳಿಸುವುದರಲ್ಲಿ ಯಾವುದೇ ರಿಯಾಯಿತಿ ತೋರಿಸದಿರುವುದು ಸಹ ಇವರ ವಿರುದ್ಧ ಜನಪ್ರತಿನಿಧಿಗಳಿಗೆ ಅಸಮಾಧಾನ ವ್ಯಕ್ತವಾಗಲು ಕಾರಣವೆನ್ನಲಾಗುತ್ತಿದೆ.

vishal ias

Leave a Reply

Your email address will not be published. Required fields are marked *