Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಟೀನೇಜರ್ಸ್ ಯಾಕ್ ಸರ್ ಹೀಗ್ ಮಾಡ್ತಾರೆ ?

* ಮನೋವಿಶ್ವಾಸ

manovishwaasa clinic-2 copy

* ಡಾ.ಪಿ.ವಿ.ಭಂಡಾರಿ

(ಕಳೆದ ವಾರದಿಂದ ಮುಂದುವರಿದುದು)

# ಡಾ.ಶ್ರೀಗಣೇಶ್ ಯೋಚಿಸುತ್ತಿದ್ದರು. ಟೀನ್ ಏಜ್ Brain ಬಗ್ಗೆ  ಶ್ರೀಗಣೇಶ್ ಯೋಚಿಸಲಾರಂಭಿಸಿದರು…

ಟೀನ್ ಏಜ್ ಮಕ್ಕಳ ಮಿದುಳಿನ ಬೆಳವಣಿಗೆಯೇ ವಿಚಿತ್ರ. ಮಿದುಳಿನ ನರಕೋಶಗಳು ಐದನೇ ವರ್ಷದಿಂದ 14-15 ವರ್ಷದ ವರೆಗೆ ಒಂದೇ ಸಮನೇ ಬೆಳೆಯಲಾರಂಭಿಸುತ್ತದೆ. ನಂತರ lwan ಒಂದನ್ನು Gardener  ”PRUNE” ಮಾಡಿದಂತೆ ಹಲವು ನರಕೋಶಗಳು ಬಿದ್ದುಹೋಗುತ್ತವೆ.

‘ಹದಿಹರೆಯ’ದ ಮಿದುಳು, ಯೋಚನೆ ಮಾಡುವ ರೀತಿಯೇ ಬೇರೆ. ಹದಿಹರೆಯದ ಮಿದುಳಿನ ಯೋಚನೆ ”Race Car” ನ ಹಾಗೆ. ಇಲ್ಲಿ Thrll ಮುಖ್ಯ, Speed ಮುಖ್ಯ, Fast ಆಗಿ ಹೋಗಬೇಕು, Risk ತೆಗೆದುಕೊಳ್ಳಲು ಯಾವಾಗಲೂ Ready. ಮುಂದಿನ ಯೋಚನೆ ಇಲ್ಲ.

ಆದರೆ, ತಾಯಿ ತಂದೆಯರು, ನಾವು ನಮ್ಮ ಮಿದುಳು ಯೋಚನೆ ಮಾಡುವ ರೀತಿಯೇ ಬೇರೆ. ”Ambassadar Car” ನ ಹಾಗೆ. Mileage ಮುಖ್ಯ. Space ಮುಖ್ಯ. Safty ಮುಖ್ಯ. ಆದಷ್ಟು ಕಡಿಮೆ ದರವಿರಬೇಕು. ಮನೆಯಲ್ಲಿ ಈ ಎರಡು ವಿಭಿನ್ನ ”ಮಿದುಳು” ಗಳ ನಡುವೆ ತಾಕಲಾಟ. ಇದು ರಾಮಪ್ರಸಾದ್ ರವರ ಮನೆಯಲ್ಲೂ ಸಮಸ್ಯೆಯುಂಟುಮಾಡಿತ್ತು.

car

ತಾಯಿ ತಂದೆಯರು ದುಡಿಯುವುದು ಮಕ್ಕಳಿಗಾಗಿ. ಮಕ್ಕಳನ್ನು ಹುಟ್ಟಿಸುವುದು ಪ್ರತಿಷ್ಠೆಗಾಗಿ. ನನ್ನ ಮಗನೇ ಮುಂದೆ ಐಎಎಸ್ ಅಧಿಕಾರಿಯಾಗಬೇಕು, ಡಾಕ್ಟರ್ ಆಗಬೇಕು, ಇಂಜಿನಿಯರ್ ಆಗಬೇಕು, ಹೀಗೆ ಯೋಚನೆ ಮಾಡುವ ತಾಯಿ ತಂದೆ ಮಕ್ಕಳ ಮೇಲೆ ಸಾಕಷ್ಟು ಒತ್ತಡ ಹಾಕುತ್ತಾರೆ. ಮಕ್ಕಳಿಗೆ ಸಾಕಷ್ಟು ಬುದ್ಧಿ ಹೇಳುತ್ತಾರೆ.

ರಾಮಪ್ರಸಾದ್ ಒಂದು ಬಡ ಕುಟುಂಬದಲ್ಲಿ ಬೆಳೆದು, ಕಷ್ಟದಿಂದ ನ್ಯಾಷನಲ್ ಲಾ ಸ್ಕೂಲಿನಲ್ಲಿ Law Degree ಮಾಡಿದವರು. ಯಾವಾಗಲೂ ಮಗನಿಗೆ ತಾವು ತುಳಿದು ಬಂದ ಕಷ್ಟದ ಹಾದಿಯ ಬಗ್ಗೆ ಭಾಷಣ ಮಾಡುತ್ತಿದ್ದರು. ನೀನು ”ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದಿಯಾ”, ಕಷ್ಟವನ್ನು ಎಂದೂ ತಿಳಿದಿಲ್ಲ ಎನ್ನುತ್ತಿದ್ದರು. ತಾನು ಹೋಟೇಲೊಂದರಲ್ಲಿ ಕೆಲಸ ಮಾಡಿ PUC ಓದಿದ ಬಗ್ಗೆ, National Law College ಗೆ Select ಆದ ಕೆಲವೇ ಹಳ್ಳಿ ಹುಡುಗರಲ್ಲಿ ತಾನು ಒಬ್ಬ ಎಂಬ ಬಗ್ಗೆ ಸಾರಿ ಸಾರಿ ಮಗನಿಗೆ ಹೇಳುತ್ತಿದ್ದರು. ಲವ ಇದನ್ನು ಕೇಳಿಯೇ ಕಿವಿ ಮುಚ್ಚಿಕೊಳ್ಳುತ್ತಿದ್ದ.

ಹಾಗೆಯೇ ತಮ್ಮ ಸ್ನೇಹಿತ ಅರವಿಂದರ ಮಗಳು, ವೇದ ಪಡೆಯುತ್ತಿದ್ದ ಮಾರ್ಕ್ ನ ಬಗ್ಗೆ ಯಾವಾಗಲೂ ಪದೇ ಪದೇ ಹೇಳುತ್ತಿದ್ದರು. ಕೇಮದ್ರೀಯ ವಿದ್ಯಾಲಯದಲ್ಲಿ ವೇದ 9.8 ಮಾರ್ಕ್ ತೆಗೆದು ಹತ್ತನೇ ತರಗತಿಯಲ್ಲಿ ಕೇರಳ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಳು. ಅರವಿಂದ ಇವರ ಸಹ ವಕೀಲರಾಗಿದ್ದರು. ಆದರೆ, ರಾಮಪ್ರಸಾದರಷ್ಟು ಖ್ಯಾತಿ ಪಡೆದಿರಲಿಲ್ಲ. ಅಂತಹ ಕಡಿಮೆ ಅಂತಸ್ತಿನ ವಕೀಲರ ಮಗಳು ತನ್ನ ಮಗನಿಗಿಂತ ಶಾಲೆಯಲ್ಲಿ ಉತ್ತಮ ಮಾರ್ಕ್ ಪಡೆಯುವುದು- ಇದು ರಾಮಪ್ರಸಾದರ ಮರ್ಯಾದೆಗೆ ಕಡಿಮೆಯಾಗಿತ್ತು.

ಪದೇ ಪದೇ ಲವನನ್ನು ವೇದಳೊಂದಿಗೆ Compare ಮಾಡುತ್ತಿದ್ದರು. ಆತನು ಉತ್ತಮ POP ಪದ್ಯಗಳನ್ನು ಮಾಡುತ್ತಿದ್ದ. ಇಂಗ್ಲೀಷ್  ”POP” ಪದ್ಯಗಳನ್ನು ಬರೆಯುತ್ತಿದ್ದ. ಓದಿನಲ್ಲಿ ಕೂಡಾ Average ವಿದ್ಯಾರ್ಥಿಯಾಗಿದ್ದ. ಆತನಲ್ಲಿರುವ ಯಾವುದೇ ಒಳ್ಳೆಯ ಗುಣಗಳನ್ನು ರಾಮಪ್ರಸಾದ್ ದಂಪತಿಗಳು ಹೊಗಳುತ್ತಿರಲಿಲ್ಲ. ಆತನು ಹೆಚ್ಚಿನ ಮಾರ್ಕ್ ತೆಗೆಯಬೇಕೆಂದು ಆತನನ್ನು Blue Valley ಶಾಲೆಗೆ ಹಾಕಿದ್ದರು. ಆತನಿಗೆ ಶಾಲೆಯ ನಂತರ ಓದಿನಲ್ಲಿ ಸಹಾಯಕ್ಕಾಗಿ ಇನ್ನೊಂದು Tution Teacher ನ್ನು ಹಾಸ್ಟೆಲ್ ನಲ್ಲೇ ನೇಮಿಸಿದ್ದರು. ಆತನಿಗೆ ಬಿಡುವಿನ ವೇಳೆ ಎಂಬುದು ಸಿಗುವುದೇ ಕಷ್ಟವಾಗಿತ್ತು.

ಆತನಿಗೆ Blue Valley ಶಾಲೆ ಒಂದು ಬಂಗಾರದ ಪಂಜರದಂತೆ ಆಗಿತ್ತು. ಶಾಲೆಯಲ್ಲಿ ಕೂಡಾ ಶಾಲೆಯ ಪ್ರಾಂಶುಪಾಲರು ಲವನ ಮೇಲೆ ತೀವ್ರ ನಿಗಾ ವಹಿಸಿದ್ದರು. ಆತನಿಗೆ ಇಷ್ಟವಾದ POP, RAP ಪದ್ಯಗಳನ್ನು ಆತನಿಂದ ದೂರ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಿಕ್ಕಿದವಳೇ ಟ್ರೀಝಾ. ಟ್ರೀಝಾಳಿಗೂ ಆಸಕ್ತಿಯ ವಿಷಯವಾಗಿದ್ದುದು pop – Remo Fernandes ಮತ್ತು RAP.

ಸಮಾನ ಮನಸ್ಕರಿಬ್ಬರೂ ಜೊತೆಯಾಗಿ ಮಾತನಾಡುವಾಗ ಲವನ ಮನಸ್ಸು ಪುಲಕಿತಗೊಳ್ಳುತ್ತಿತ್ತು. ಆದರೆ, ಯಾವುದೇ ಒಂದು ಕೆಟ್ಟ ರೀತಿಯ ಸಂಬಂಧಗಳಾಗಲೀ, ಯೋಚನೆಗಳಾಗಲೀ ಈ ಎಳೆ ಮನಸ್ಸುಗಳಲ್ಲಿ ಇರಲಿಲ್ಲ. ಒತ್ತಡ ಭರಿತ ”ಹಾಸ್ಟೆಲ್” ಜೀವನದಲ್ಲಿ ಟ್ರೀಝಾಳೊಂದಿಗೆ ಕಳೆಯುವ ಮಧುರ ಕ್ಷಣಗಳು ಲವನಿಗೆ ಒತ್ತಡ ನಿಭಾಯಿಸುವ ಒಂದು ರೀತಿಯಾಗಿ ಬೆಳೆದಿತ್ತು.

ಡಾ.ಶ್ರೀಗಣೇಶ್ ಗಾಢವಾಗಿ ಯೋಚಿಸುತ್ತಿದ್ದರು. ಇಂದು ತಾನು ಮನೋವೈದ್ಯನಾಗಿ TEENAGE ಸಮಸ್ಯೆಗಳನ್ನು ನೋಡಲು ಪ್ರಮುಖ ಕಾರಣಗಳೇನು ?

* ತಾಯಿ ತಂದೆಯ ”Comparisen” ಮನೋಭಾವ- ತಮ್ಮ ಮಕ್ಕಳ ಅಭಿರುಚಿ, Capacity ಲೆಕ್ಕಿಸದೆ ಕೇವಲ ಪ್ರತಿಷ್ಠೆಗಾಗಿ ಸಾಮಾಜಿಕ ಘನತೆಗಾಗಿ, ಇಲ್ಲವೇ Seevrity ಗಾಗಿ ಮಕ್ಕಳನ್ನು ಓದಿಸುವುದು.

* ತಾಯಿ ತಂದೆ, Teachers ಗಳ ”Criticisem”. ಮಕ್ಕಳಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸದೇ ಬರೀ ಅವರಲ್ಲಿರುವ ನಕಾರಾತ್ಮಕ ಅಂಶಗಳನ್ನು ಪದೇ ಪದೇ ಹೇಳುವುದು, ಅವರನ್ನು ಕೀಳಾಗಿ ನೋಡುವುದು.

* ಶಾಲೆಗಳಲ್ಲಿರುವ ವಾತಾವರಣ- ಇವತ್ತು ಶಾಲೆಗಳಲ್ಲಿ ಶಿಕ್ಷಣ ಎಂದರೆ ಶಿಕ್ಷೆ ಮತ್ತು ಹಣ. ಇವೆರಡೂ ತಾಂಡವವಾಡುತ್ತಿದೆ. ಶಾಲೆಗಳೆಂದರೆ ಮಾರ್ಕ್ ತೆಗೆಯುವ ಮಕ್ಕಳನ್ನು ನಿರ್ಮಿಸುವ ಕಾರ್ಖಾನೆಯಾಗಿದೆ. IIT ಸೀಟ್  ಗಿಟ್ಟಿಸುವ ಶಾಲೆಗಳು, MBBS ಸೀಟ್ ತೆಗೆದುಕೊಳೊಳ್ಳುವಂತೆ ಮಾಡುವ ಶಾಲೆಗಳು, IAS ಪರೀಕ್ಷೆ ಪಾಸ್ ಮಾಡುವಂತ ಶಾಲೆಗಳು, ಹೀಗೆ Superior Achiever ಶಾಲೆಗಳನ್ನೇ ಇಂದು ನಾವು ನೋಡುತ್ತಿರುವುದು ಸಾಮಾನ್ಯವಾಗಿದೆ.

ಈ ಶಾಲೆಗಳಲ್ಲಿ ಅಂಕಗಳಿಗೆ ಹೆಚ್ಚು ಪ್ರಾಮುಖ್ಯತೆ. ಮಾನವೀಯತೆ, ಸರಳತೆ, ಮೌಲ್ಯಗಳ ವೃದ್ಧಿ ಇದರತ್ತ ಗಮನ ಕಡಿಮೆಯಾಗಿದೆ…..

ಮುಂತಾದ ಯೋಚನೆಗಳು ಶ್ರೀಗಣೇಶರ ತಲೆಯಲ್ಲಿ ಒಂದೇ ಸಮನೇ ಬರುತ್ತಿತ್ತು. ಅಷ್ಟರಲ್ಲಿ ಫೋನ್ ರಿಂಗಿಣಿಸಿತು. ಡಾ. ಶ್ರೀಗಣೇಶ್ ರವರ ಯೋಚನಾ ಲಹರಿಗೆ ಬ್ರೇಕ್ ಹಾಕಿತು.

(ಮುಂದಿನ ಶುಕ್ರವಾರಕ್ಕೆ ಮುಂದುವರಿಯಲಿದೆ)

@ ಲೇಖಕರು ಉಡುಪಿ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ನಿರ್ದೇಶಕರು.

 

Leave a Reply

Your email address will not be published. Required fields are marked *