Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಯುವಜನತೆಯಲ್ಲಿ ಸಂಸ್ಕೖತಿಯ ದಾರಿದ್ರ್ಯ ಹೆಚ್ಚುತ್ತಿದೆ: ಬನ್ನಂಜೆ ಬಾಬು ಅಮೀನ್ ವಿಷಾದ

ಮೂಡುಬೆಳ್ಳೆ: ಇಂದಿನ ಯುವಜನತೆಯಲ್ಲಿ ಜಾತಿವಾದ ರೋಗದಂತೆ ಹರಡುತ್ತಿದೆ, ಆಧುನಿಕತೆ ಗೀಳಾಗಿ ಪರಿಣಮಿಸಿದೆ, ಜನರ ಆರ್ಥಿಕತೆ ಮಟ್ಟ ಸುಧಾರಿಸಿದೆ, ಆದರೇ ಸಂಸ್ಕೖತಿಯ ದಾರಿದ್ರ್ಯ ಹೆಚ್ಚಿದೆ ಎಂದು ಹಿರಿಯ ಜನಪದ ತಜ್ಞ ಬನ್ನಂಜೆ ಬಾಬು ಅಮೀನ್ ಆತಂಕ ವ್ಯಕ್ತಪಡಿಸಿದ್ದಾರೆ.

ಡಿ.24ರಂದು ಮೂಡುಬೆಳ್ಳೆ ಸಮೀಪದ ಗುಂಡುಪಾದೆಯ ಗೆಳೆಯರ ಬಳಗದ 20ನೇ ವಾರ್ಷಿಕೋತ್ಸವ ಮತ್ತು ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಯುವಜನತೆಯನ್ನು ಸರಿದಾರಿಗೆ ತರುವುದು ಬಹಳ ದೊಡ್ಡ ಕಷ್ಟದ ಕೆಲಸವೇನಲ್ಲ, ಹೆತ್ತವರು ಮೊದಲು ಸರಿ ದಾರಿಯಲ್ಲಿ ನಡೆಯುವುದನ್ನು ಕಲಿಯಬೇಕು, ಆಗ ಮಕ್ಕಳು ಕೂಡ ಅವರನ್ನೇ ಅನುಸರಿಸುತ್ತವೆ ಎಂದ ಅವರು, ಸಂಘ ಸಂಸ್ಥೆಗಳು ಕೂಡ ಯುವಜನತೆಯನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುವುದಕ್ಕೆ ಸಾಧ್ಯವಿದೆ ಎಂದರು.

ನೂತನ ಕಟ್ಟಡವನ್ನು ಸಮಾಜ ಸೇವಕಿ ಆಲಿಸ್ ಡಿಸೋಜ ಅವರು ಉದ್ಘಾಟಿಸಿದರು. ಅತಿಥಿಗಳಾಗಿ ನಿವೃತ್ತ ಆಕಾಶವಾಣಿ ಉದ್ಘೋಷಕ ಮುದ್ದು ಮೂಡುಬೆಳ್ಳೆ, ನಿವೖತ್ತ ರಾಷ್ಟ್ರ ಪ್ರಶಸ್ತಿ ಪುರಸ್ಕೖತ ಶಿಕ್ಷಕ ಪೀಟರ್ ರಫಾಯಲ್ ಅರಾನ್ಹ ಹಾಗೂ ಅಖಿಲ ಕರ್ನಾಟಕ ಜನಜಾಗೖತಿ ವೇದಿಕೆಯ ಅಧ್ಯಕ್ಷ ದೇವದಾಸ ಹೆಬ್ಬಾರ್ ಆಗಮಿಸಿದ್ದರು.

kattada udghaatane

ಇದೇ ಸಂದರ್ಭದಲ್ಲಿ ನಿವೖತ್ತ ಶಿಕ್ಷಕ ರಂಗಪ್ಪ ನಾಯಕ್, ಅಂಗನವಾಡಿ ಸಹಾಯಕಿ ಶಾರದಮ್ಮ ಹಾಗೂ ದಾನಿ ರಾಮಣ್ಣ ನಾಯಕ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ಗೌರವಾಧ್ಯಕ್ಷ ಸದಾನಂದ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ಉದಯ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ ಪ್ರಭು ವಂದಿಸಿದರು.

kattada udghatane

Leave a Reply

Your email address will not be published. Required fields are marked *