Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ವಿಮಾ ಕಾನೂನು (ತಿದ್ದುಪಡಿ) ಮಸೂದೆ ಸುಗ್ರೀವಾಜ್ಞೆ ಮತ್ತು ರಾಷ್ಟ್ರಪತಿಗಳ ಸಹಿ ಖಂಡಿಸಿ ಪ್ರತಿಭಟಟನೆ

ಉಡುಪಿ: ವಿಮಾ ಕಾನೂನು (ತಿದ್ದುಪಡಿ) ಮಸೂದೆ – 2008ನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ಎನ್.ಡಿ.ಎ. ಸರಕಾರ ಸುಗ್ರೀವಾಜ್ಞೆ ಹೊರಡಿಸಿರುವುದನ್ನು ವಿರೋಧಿಸಿ ಮತ್ತು ಸುಗ್ರೀವಾಜ್ಞೆಗೆ ಡಿ.26ರಂದು ರಾಷ್ಟ್ರಪತಿಗಳು ಸಹಿ ಹಾಕಿರುವುದನ್ನು ಖಂಡಿಸಿ ಜೀವವಿಮಾ ನಿಗಮ (ಎಲ್ ಐಸಿ) ಎಲ್ಲಾ ವರ್ಗದ ನೌಕರರು ಇಂದು ನಿಗಮದ ಉಡುಪಿ ವಿಭಾಗೀಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಾಮಾನ್ಯ ವಿಮಾ ಕ್ಷೇತ್ರದ ನಾಲ್ಕು ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದು ಮತ್ತು ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳವನ್ನು ಶೇ.26ರಿಂದ ಶೇ.49ಕ್ಕೆ ಹೆಚ್ಚಿಸುವ ವಿಮಾ ಕಾನೂನು (ತಿದ್ದುಪಡಿ) ಮಸೂದೆ – 2008 ನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಎನ್.ಡಿ.ಎ. ಸರಕಾರ ಸುಗ್ರೀವಾಜ್ಞೆ ಹೊರಿಡಿಸಿರುವುದಕ್ಕೆ ಪ್ರತಿಭಟನಾನಿರತರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಎಂ.ನಿತ್ಯಾನಂದ ಪೈ, ಆರ್.ಎಂ.ಸಾಮಗ, ಶ್ರೀಮತಿ ವಿನುತಾ ಬಿ.ಪಿ. ನಂದಕೃಷ್ಣ, ಯು.ಗುರುದತ್, ಮನೋಹರ ವೇಗಸ್, ಶ್ರೀಮತಿ ಕವಿತಾ ಉದಯಶಂಕರ್, ಶ್ರೀಮತಿ ಸುಲೋಚನಾ ರಮೇಶ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Leave a Reply

Your email address will not be published. Required fields are marked *