Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

‘ನಮ್ಮ ಭೂಮಿ’ಯಿಂದ ಅಪ್ರಾಪ್ತ ಬಾಲಕರು ನಾಪತ್ತೆ

ಉಡುಪಿ: ಕುಂದಾಪುರ ತಾಲೂಕು ಹಟ್ಟಿಯಂಗಡಿ ಕ್ರಾಸ್ ನಲ್ಲಿರುವ ಸರಕಾರೇತರ ಸ್ವಯಂಸೇವಾ ಸಂಸ್ಥೆಯಾಗಿರುವ ‘ನಮ್ಮ ಭೂಮಿ’ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಭಿಷೇಕ್ (12) ಹಾಗೂ ಚೌಡಪ್ಪ ಚೌಡೇಶ್ (9) ಎಂಬವರು ಜನವರಿ 2 ರಂದು ಬೆಳಿಗ್ಗೆ 9 ಗಂಟೆಗೆ ಹಟ್ಟಿಯಂಗಡಿ ಬಾಚಿನಕೊಡ್ಲು ನಾಳಂದ ವಿದ್ಯಾಪೀಠ ಶಾಲೆಗೆ ಹೋದವರು ಸಂಸ್ಥೆಗೆ ಮರಳದೆ ಕಾಣೆಯಾಗಿದ್ದಾರೆ.

ನಾಲ್ಕಡಿ ಎತ್ತರದ ಅಭಿಷೇಕ್ ಕನ್ನಡ ಭಾಷೆ ಬಲ್ಲವನಾಗಿರುತ್ತಾನೆ. ಎಣ್ಣೆ ಕಪ್ಪು ಮೈಬಣ್ಣದ, ದೃಢಕಾಯ ಶರೀರದ ದುಂಡುಮುಖದ, ಕಪ್ಪು ತಲೆ ಕೂದಲು ಹೋದಿರುವ ಅಭಿಷೇಕ್, ಕಾಣೆಯಾದ ದಿನದಂದು ಖಾಕಿ ಬಣ್ಣದ ಪ್ಯಾಂಟ್ ಮತ್ತು ನೀಲಿ ಬಿಳಿ ಬಣ್ಣದ ಚಕ್ಸ್ ಶರ್ಟ್ಸ್ ಧರಿಸಿರುತ್ತಾನೆ.

abhishek

ಮೂರಡಿ ಎತ್ತರದ ಚೌಡಪ್ಪ ಯಾನೆ ಚೌಡೇಶ್, ಕನ್ನಡ ಭಾಷೆ ಬಲ್ಲವನಾಗಿರುತ್ತಾನೆ. ಎಣ್ಣೆ ಕಪ್ಪು ಮೈಬಣ್ಣದ ಕೋಲುಮುಖದ, ಕಪ್ಪು ತಲೆ ಕೂದಲಿನ ಚೌಡಪ್ಪ ಕಾಣೆಯಾದ ದಿನದಂದು ಕಂದು ಬಣ್ಣದ ಹಾಪ್ ಪ್ಯಾಂಟ್ ಮತ್ತು ಕಂದು ಬಣ್ಣದ ಚಕ್ಸ್ ಶರ್ಟ್ಸ ಧರಿಸಿರುತ್ತಾನೆ.

choudappa

ಕಾಣೆಯಾದ ಇವರಿಬ್ಬರ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಉಡುಪಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *