Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬೈಲಹೊಂಗಲ ಶಬರಿಮಲೆ ಯಾತ್ರಿಕರ ಬಸ್ ಡಿಕ್ಕಿ: ಕಾಸರಗೋಡಿನ ಬೈಕ್ ಸವಾರ ತಂದೆ-ಮಗ ಮೃತ್ಯು

ಮುಖಳ್ಳೇರಿಯಾ(ಕಾಸರಗೋಡು): ಬೈಕ್ ಮತ್ತು ಮಿನಿ ಬಸ್ ಡಿಕ್ಕಿಯಾಗಿ ತಂದೆ ಮತ್ತು ಮಗ ಮೃತಪಟ್ಟ ದಾರುಣ ಘಟನೆ ಇಂದು ಬೆಳಿಗ್ಗೆ ಆದೂರು ಸಮೀಪದ ಗಾಳಿಮುಖದಲ್ಲಿ ಸಂಭವಿಸಿದೆ.

apaghata-1

ಮೃತಪಟ್ಟವರನ್ನು ಅಡೂರು ಅಡ್ಕಮೂಲೆಯ ಅಬ್ದುಲ್ ರಹಮಾನ್ (55) ಹಾಗೂ ಇವರ ಪುತ್ರ ಸಿದ್ದೀಖ್ (22) ಎಂದು ಗುರುತಿಸಲಾಗಿದೆ.

ಗುರುವಾರ ಮುಂಜಾನೆ 5.30ರ ಸುಮಾರಿಗೆ ಗಾಳಿಮುಖದಲ್ಲಿ ಅಪಘಾತ ನಡೆದಿದೆ. ಮನೆಯಿಂದ ಬೈಕ್ ನಲ್ಲಿ ಆದೂರಿನತ್ತ ಬರುತ್ತಿದ್ದಾಗ, ಚೆರ್ಕಳ ಕಡೆಯಿಂದ ಪುತ್ತೂರು ಕಡೆಗೆ ಸಾಗುತ್ತಿದ್ದ ಶಬರಿಮಲೆ ಯಾತ್ರಾರ್ಥಿಗಳ ಮಿನಿ ಬಸ್ ಡಿಕ್ಕಿ ಹೊಡೆದು ಅಪಘಾತ ನಡೆಯಿತು. ಕರ್ನಾಟಕದ ಬೈಲಹೊಂಗಲದಿಂದ ಹೊರಟು ಶಬರಿಮಲೆ ಯಾತ್ರೆ ಮುಗಿಸಿ ಊರಿಗೆ ಮರಳುತ್ತಿದ್ದಾಗ ಅಪಘಾತ ನಡೆದುದಾಗಿದೆ.

ಅಪಘಾತದ ರಭಸಕ್ಕೆ ಮಿನಿ ಬಸ್, ಬೈಕ್ ನ್ನು 15 ಮೀಟರ್ನಷ್ಟು ದೂರ ಎಳೆದೊಯ್ದಿದ್ದು, ಸಿದ್ದೀಖ್ ಸ್ಥಳದಲ್ಲೇ ಮೃತಪಟ್ಟರೆ, ಅಬ್ದುಲ್ ರಹಮಾನ್ ಕಾಸರಗೋಡು ಆಸ್ಪತ್ರೆಯಲ್ಲಿ ಮೃತಪಟ್ಟರು. ಮೃತ ಅಬ್ದುಲ್ ರಹಮಾನ್ ಅವರು ಅಡೂರು ಅಡ್ಕದ ಸಿಪಿಐಎಂ ಬ್ರಾಂಚ್ ಕಾರ್ಯದರ್ಶಿಯಾಗಿದ್ದರು. ಪುತ್ರ ಸಿದ್ದೀಖ್ ಎರ್ನಾಕುಳಂನಲ್ಲಿ ಟೆಕ್ಸ್ಟೈಲ್ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದನು. ಈ ನಡುವೆ ಸಿದ್ದೀಖ್ ಗಲ್ಫ್ ಗೆ ತೆರಳುವ ಸಿದ್ದತೆಯಲ್ಲಿದ್ದನು ಎನ್ನಲಾಗಿದೆ.

apaghata thandeapaghatha maga

ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದ ವಿಷಯ ತಿಳಿದು ಸಂಬಂಧಿಕರು, ಸಿಪಿಐಎಂ ಕಾರ್ಯಕರ್ತರು ಹಾಗೂ ನಾಗರಿಕರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಉದುಮ ಶಾಸಕ ಪಿ.ಕುಞಿರಾಮನ್ ಆಸ್ಪತ್ರೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ಮೃತ ಅಬ್ದುಲ್ ರಹಿಮಾನ್ ಪತ್ನಿ ಖದೀಜ, ಮಕ್ಕಳಾದ ಅಬ್ದುಲ್ಲ, ಮುಸ್ತಫ, ಖಾಸೀಂ, ಸಾದಿಕ್, ಫಸೀಲಾ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಆದೂರು ಪೊಲೀಸರು, ಬಳಿಕ ಅಪಘಾತ ನಡೆದ ಸ್ಥಳ ದ.ಕ.ಜಿಲ್ಲೆಯ ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಸ್ಥಳವೆಂದು ಗೊತ್ತಾದ ಹಿನ್ನೆಲೆಯಲ್ಲಿ ಸಂಪ್ಯ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

Leave a Reply

Your email address will not be published. Required fields are marked *