Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಟ್ಯಾಂಕರ್, ಬೈಕ್ ಗೆ ಡಿಕ್ಕಿ: ಮಹಿಳೆ ಮೃತ್ಯು

ಕೋಟ: ಉಡುಪಿ ಕಡೆಯಿಂದ ಕೋಟ ಕಡೆಗೆ ಸಂಚರಿಸುತ್ತಿದ್ದ ಟ್ಯಾಂಕರ್ ಲಾರಿ, ರಾಷ್ಟ್ರೀಯ ಹೆದ್ದಾರಿ 66ರ ಸಾಲಿಗ್ರಾಮ ರಥಬೀದಿ ಬಳಿ ಬಜಾಜ್ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಹಿಂಬದಿಯಲ್ಲಿ ಕುಳಿತು ಪ್ರಯಾಣಸುತ್ತಿದ್ದ ಮಹಿಳೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಬಳಿಕ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಗ ಮೃತಪಟ್ಟಿದ್ದಾರೆ.

ವಾರಂಬಳ್ಳಿ ಗ್ರಾಮದ ಬಿರ್ತಿ ಶಾಂತಿನಗರ 6ನೇ ಅಡ್ಡಿರಸ್ತೆಯ ಬಿಂದು ನಿಲಯದ ಸುಮನಾ ಅಡಿಗ ಮೃತ ಮಹಿಳೆ. ಬೈಕ್ ಸವಾರರಾದ ವೆಂಕಟರಮಣ ಸೂರ್ಯ ಗಾಯಗೊಂಡಿದ್ದಾರೆ.

ವೆಂಕಟರಮಣ ಸೂರ್ಯ ಹಾಗೂ ಸುಮನಾ ಅಡಿಗ ಇವರು ಬನ್ನಾಡಿ ಗ್ರಾಮದ ಉಪ್ಲಾಡಿ ಎಂಬಲ್ಲಿಗೆ ಹೋಗುವ ಉದ್ಧೇಶದಿಂದ ಬ್ರಹ್ಮಾರದಿಂದ ಕೋಟ ಕಡೆಗೆ ಬೈಕ್ ನಲ್ಲಿ ಸಂಚರಿಸುತ್ತಿದ್ದಾಗ ಜ.11ರಂದು ಸಂಜೆ ಗಂಟೆ 5.45ಕ್ಕೆ ಅಪಘಾತ ಸಂಭವಿಸಿತು. ರಾತ್ರಿ ಗಂಟರ 9.45ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಸುಮನಾ ಆಸ್ಪತ್ರೆಯಲ್ಲಿ ಮೃತರಾದರು.

ಈ ಬಗ್ಗೆ ವೆಂಕಟರಮಣ ಸೂರ್ಯ ನೀಡಿದ ದೂರಿನ ಪ್ರಕಾರ ಟ್ಯಾಂಕರ್ ಚಾಲಕನ ವಿರುದ್ಧ ಕೋಟ ಟಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *