Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬೊಲೇರೊ ಡಿಕ್ಕಿ: ರಿಕ್ಷಾ ಚಾಲಕ ಮೃತ್ಯು

ಕೋಟ: ನಂಬರ್ ಪ್ಲೇಟ್ ಅಳವಡಿಸದ ಬಿಳಿ ಬಣ್ಣದ ಬೊಲೇರೊ ವಾಹನ, ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಜ.11ರಂದು ರಾತ್ರಿ ಗಂಟೆ 7.15ಕ್ಕೆ ಬನ್ನಾಡಿ ಗ್ರಾಮದ ಇಟ್ಟಿಗೆ ಕಾರ್ಖಾನೆ ಬಳಿ ಸಂಭವಿಸಿದೆ.

ಶಂಕರ ಮರಕಾಲ ಮೃತ ದುರ್ದೈವಿ. ಇವರು ಸಾಯಿಬ್ರಕಟ್ಟೆ ಕಡೆಯಿಂದ ಕೋಟ ಹೈಸ್ಕೂಲ್ ಕಡೆಗೆ ಸಂಚರಿಸುತ್ತಿದ್ದಾಗ, ಕೋಟ ಹೈಸ್ಕೂಲ್ ಕಡೆಯಿಂದ ಬಂದ ಬೊಲೇರೊ ವಾಹನ ಎದುರಿನಿಂದ ಬಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು.

ಈ ಬಗ್ಗೆ ಬನ್ನಾಡಿ ಗ್ರಾಮದ ಉಪ್ಲಾಡಿ ಬಡಾಬೆಟ್ಟು ನಿವಾಸಿ ಗಣೇಶ್ ಅಮೀನ್ ನೀಡಿದ ದೂರಿನ ಆಧಾರದಲ್ಲಿ ಕೋಟ ಠಾಣೆಯ ಪೊಲೀಸರು ಬೊಲೇರೊ ವಾಹನ ಚಾಲಕನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

 

 

Leave a Reply

Your email address will not be published. Required fields are marked *