Realtime blog statisticsweb statistics
udupibits.in
Breaking News
ಮಾಹಿತಿ ಹಕ್ಕು ಪ್ರಕರಣ: ವಿಚಾರಣೆಗೆ ಖುದ್ದು ಹಾಜರಾಗಲು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕರ್ನಾಟಕ ಮಾಹಿತಿ ಆಯೋಗ ಆದೇಶ.

ಎಂಡೋ ಪರಿಹಾರ: ಆರೋಗ್ಯ ಕಾರ್ಯದರ್ಶಿ ಶಿವಶೈಲಂರಿಂದ ಹೈಕೋರ್ಟಿಗೆ ಸುಳ್ಳು ಅಫಿದಾವಿತ್- ಡಾ.ಶಾನುಭಾಗ್ ಆರೋಪ

ಉಡುಪಿ: ಎಂಡೋಸಲ್ಫಾನ್ ಸಂತ್ರಸ್ತರಿಗೆ ಸಂಬಂಧಪಟ್ಟಂತೆ ಹೈಕೋರ್ಟಿಗೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಶಿವಶೈಲಂ ಐಎಎಸ್ ಸುಳ್ಳು ಹೇಳಿದ್ದಾರೆ ಎಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಭಾಗ್ ಆರೋಪಿಸಿದ್ದಾರೆ.

health-1health-2

ಪ್ರತಿಷ್ಠಾನದ ಕಚೇರಿಯಲ್ಲಿ ಜ.13ರಂದು ಸಂಜೆ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಡೋಸಲ್ಫಾನ್ ಸಂತ್ರಸ್ತರೆಲ್ಲರಿಗೆ ಮಾಸಾಶನ ದೊರೆಯುತ್ತಿಲ್ಲ. ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಪ್ರತಿಷ್ಠಾನಕ್ಕೆ 620 ದೂರುಗಳು ಬಂದಿವೆ. ಕ್ಯಾನ್ಸರ್ ರೋಗಿಗಳಿಗೆ (ಶೇ. 25 ಕ್ಕಿಂತ ಕಡಿಮೆ ಅಂಗವೈಕಲ್ಯ) ಯಾವುದೇ ಪರಿಹಾರ ದೊರೆಯುತ್ತಿಲ್ಲ ಎಂದು ತಿಳಿಸಿದರು.

health-3

ಅಂಧ ಬಾಲಕಿಯಾಗಿದ್ದರೂ ಆಕೆಗೆ ಶೇ. 35 ಅಂಗ ವೈಕಲ್ಯ ದಾಖಲಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವೊಬ್ಬ ಸಂತ್ರಸ್ತನಿಗೂ ಬಸ್ ಪಾಸ್ ಕೊಡದಿದ್ದರೂ, ಕೊಟ್ಟಿದ್ದಾಗಿ ಅಫಿದಾವಿತ್‌ನಲ್ಲಿ ಸುಳ್ಳು ಹೇಳಲಾಗಿದೆ. ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ಕೊಡುತ್ತಿದ್ದರೂ ಔಷಧಿ ಉಚಿತವಾಗಿ ದೊರೆಯುತ್ತಿಲ್ಲ. 40 ಗ್ರಾಮಗಳಲ್ಲಿ ಎಂಡೋಸಲ್ಫಾನ್ ವೈಮಾನಿಕ ಸಿಂಪಡಣೆಯಾಗಿದ್ದರೂ ಪಕ್ಕದ ಗ್ರಾಮಗಳ ಸಂತ್ರಸ್ತರಿಗೆ ಯಾವುದೇ ಪರಿಹಾರ ಕೊಡುತ್ತಿಲ್ಲ ಎಂದು ಡಾ.ಶಾನುಭಾಗ್ ಆಪಾದಿಸಿದರು.

health-4

8 ಮಂದಿ ಎಂಡೋಪೀಡಿತರು ಸತ್ತರೂ ಪರಿಹಾರ ಕೊಡದ ಅಧಿಕಾರಿಗಳು; ‘ಜೀವಂತವಿದ್ದವರಿಗೆ ಪರಿಹಾರ ಕೊಡುತ್ತೇವೆ, ಸಂತ್ರಸ್ತರು ಸತ್ತ ಬಳಿಕ ಹೆತ್ತವರು ಪರಿಹಾರವನ್ನು ಯಾಕೆ ಎಂಜಾಯ್ ಮಾಡಬೇಕು’ ಎನ್ನುವ ಅಸಂಬದ್ಧ ಪ್ರಶ್ನೆಯನ್ನು ಮಂಗಳೂರಿನ ಸಭೆಯಲ್ಲಿ ಮುಂದಿಟ್ಟಿದ್ದಾರೆ. ಎಂಡೋ ಸಂತ್ರಸ್ತರಿಗಾಗಿ ಮೊಬೈಲ್ ಯುನಿಟ್ಸ್, ಡೇ ಕೇರ್ ಸೆಂಟರ್ ಇಲ್ಲ. ಶಾಶ್ವತ ಪುನರ್ವಸತಿ ಕೇಂದ್ರ ಬೇಕೆನ್ನುವ ಬೇಡಿಕೆಯನ್ನು ಆರೋಗ್ಯ ಇಲಾಖೆ ನಿರ್ಲಕ್ಷಿಸಿದೆ. ಹೈಕೋರ್ಟ್ ಏಪ್ರಿಲ್‌ನೊಳಗೆ ಅಂತಿಮ ತೀರ್ಪು ನೀಡಲಿದ್ದು ಆದಷ್ಟು ಬೇಗ ಸಂತ್ರಸ್ತರನ್ನು ಗುರುತಿಸದಿದ್ದರೆ ನೈಜ ಸಂತ್ರಸ್ತರಿಗೆ ಸರಕಾರದಿಂದ ನ್ಯಾಯ ದೊರೆಯುವ ಅವಕಾಶ ವಿರಳ ಎಂದು ಅವರು ಶಾನುಭಾಗ್ ಹೇಳಿದರು.health-5

‘ಪ್ರಕರಣ ಹೈಕೋರ್ಟಿನಲ್ಲಿದೆ’ ಎಂಬ ನೆಪ ಒಡ್ಡಿ ಇಲಾಖಾಧಿಕಾರಿಗಳು ಎನ್‌ಜಿಒಗಳಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಅಮಿಕಸ್ ಕ್ಯೂರಿ ವೈಶಾಲಿ ಹೆಗ್ಡೆ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಪ್ರತೀ ಜಿಲ್ಲೆಯಲ್ಲಿ ಸಮಿತಿ ರಚಿಸಿ ಪ್ರಕರಣಗಳ ಮೇಲೆ ನಿಗಾ ಇಡಲಿದೆ. ಸಮಿತಿಯಲ್ಲಿ ಇಬ್ಬರು ಆರೋಗ್ಯ ಇಲಾಧಿಕಾರಿ ಸದಸ್ಯರು, ಎನ್‌ಜಿಒ ಸದಸ್ಯ ಪ್ರತಿನಿಧಿಗಳು ಇರಲಿದ್ದು, ಇಲಾಖೆ ಸಮಿತಿಗೆ ವರದಿ ನೀಡಲಿದೆ. ಪ್ರತೀ ತಿಂಗಳೂ ಸಭೆ ನಡೆಸಿ, ಸರಕಾರ ಕೊಡುವ ಉತ್ತರದ ಅಡ್ಡ ಪರಿಶೀಲನೆಯನ್ನೂ ಮಾಡಲಾಗುವುದು ಎಂದು ಡಾ.ರವೀಂದ್ರನಾಥ ಶಾನುಭಾಗ್ ಮಾಹಿತಿ ನೀಡಿದರು.

dr.shanbhag

* ಡಾ.ರವೀಂದ್ರನಾಥ ಶಾನುಭಾಗ್

Leave a Reply

Your email address will not be published. Required fields are marked *