Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಾಸರಗೋಡು: ಸಂವಿಧಾನಬದ್ದ ಹಕ್ಕುಗಳಿಗಾಗಿ ಕನ್ನಡ ಮಾಧ್ಯಮ ಅಧ್ಯಾಪಕರಿಂದ ಧರಣಿ

ಬದಿಯಡ್ಕ(ಕಾಸರಗೋಡು): ಮಲೆಯಾಳಿಗರ ಬಗ್ಗೆ ಕನ್ನಡಿಗರಿಗೆ ಯಾವುದೇ ಭಾಷಾ ಧ್ವೇಷಗಳಿಲ್ಲ. ಆದರೆ ಕನ್ನಡಿಗರ ಮೇಲಾಗುತ್ತಿರುವ ಅವಹೇಳನ, ಕಡ್ಡಾಯ ಮಲೆಯಾಳ ಹೇರಿಕೆಯನ್ನು ಯಾವುದೇ ಬೆಲೆ ತೆತ್ತಾದರೂ ವಿರೋಧಿಸಬೇಕಾಗಿದೆ. ಸಂವಿಧಾನಬದ್ದವಾದ ಹಕ್ಕುಗಳಿಗಾಗಿ ನಾವಿಂದು ರಸ್ತೆ ಗಿಳಿಯಬೇಕಾದ ಅನಿವಾರ್ಯತೆಯಿದೆಯೆಂದು ಧರ್ಮತ್ತಡ್ಕದ ಎಸ್ಡಿಪಿಎಚ್ ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ಸುಬ್ಬಣ್ಣ ಭಟ್ ಹೇಳಿದರು.

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಇಂದು ಆಯೋಜಿಸಿದ ಧರಣಿ ಮುಷ್ಕರದ ಭಾಗವಾಗಿ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಸಮಿತಿ ಬದಿಯಡ್ಕ ಪೇಟೆಯಲ್ಲಿ ನಡೆಸಿದ ಧರಣಿ ಮುಷ್ಕರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಚಾತುರ್ಯಗಳ ಕಾರಣಗಳಿಂದ ಕೇರಳಕ್ಕೆ ಸೇರಿಹೋದ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರು ಹಿಂದಿನಿಂದಲೂ ಮಲೆಯಾಳೀಕರಣದ ಕರಾಳ ಹಸ್ತದ ಬೆದರಿಕೆಗೊಳಗಾಗಿದೆ. ಕನ್ನಡ ಮಾಧ್ಯಮ ಅಧ್ಯಾಪಕ ಸಂಘವು ವಿವಿಧ ಹಂತಗಳಲ್ಲಿ ಭಾಷಾತಿಕ್ರಮಣದ ಮೂಲಕ ದಮನಕಾರಿ ನೀತಿ ಅನುಸರಿಸಿದಾಗಲೆಲ್ಲ ಹೋರಾಟದ ಮೂಲಕ ಕಾನೂನು ರೀತ್ಯಾ ಪಡೆಯಬೇಕಾದ ನ್ಯಾಯವನ್ನು ಪಡೆದುಕೊಂಡಿದೆಯೆಂದು ಭಟ್ ತಿಳಿಸಿದರು.

ಶಿಕ್ಷಣ ಪ್ರಾರಂಭಗೊಳ್ಳುವ ಅಂಗನವಾಡಿಯ ಹಂತದಿಂದಲೂ ಗಡಿನಾಡ ಕನ್ನಡಿಗರ ಮೇಲೆ ಕಡ್ಡಾಯ ಪರ ಭಾಷಾ ಹೇರಿಕೆಯ ಮೂಲಕ ಧಮನಕಾರಿ ನೀತಿ ಪ್ರಾರಂಭಗೊಳ್ಳುತ್ತದೆ. ಮುಂದಿನ ವಿದ್ಯಾಭ್ಯಾಸಕ್ಕೆ ತೊಡಕಾಗುವ ರೀತಿಯಲ್ಲಿ ಅಂತಹ ಪ್ರಕ್ರೀಯೆಗಳು ಮುಂದುವರಿಯುತ್ತಿದೆಯೆಂಬ ಆತಂಕವನ್ನು ಸುಬ್ಬಣ್ಣ ಭಟ್ ವ್ಯಕ್ತಪಡಿಸಿದರು.

ಸರಕಾರದ ಸುತ್ತೋಲೆ, ಅರ್ಜಿಫಾರಂ, ಮಾಹಿತಿ ಪತ್ರಗಳನ್ನು ಕನ್ನಡದಲ್ಲಿ ವಿತರಿಸಬೇಕು, ಹೊಸದುರ್ಗದ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸರಕಾರಿ ಶಿಕ್ಷಕನೋರ್ವನನ್ನು ಕನ್ನಡಿಗನೆಂಬ ಕಾರಣ ನೀಡಿ ಹುದ್ದೆಯನ್ನೇ ತೆರವುಗೊಳಿಸಿದ ಆದೇಶ ಹಿಂಪಡೆಯಬೇಕು, ಕನ್ನಡ ಶಿಕ್ಷಕರಿಗೆ ವಿತರಿಸಬೇಕಾದ ಕೈಪಿಡಿಗಳನ್ನು ಕೂಡಲೇ ವಿತರಿಸಬೇಕು, ಭಾಷಾಂತರಗೊಳ್ಳದ ಕೈಪಿಡಿಗಳೂ ಶೀಘ್ರ ಭಾಷಾಂತರಗೊಳ್ಳಬೇಕು, ಎಲ್ಲಾ ಕನ್ನಡ ಶಿಕ್ಷಕರಿಗೂ ಅಂತರ್ಜಾಲ ಜೋಡಣೆಯ ಬ್ಲ್ಲೆಂಡ್ ತರಬೇತಿಯನ್ನು ನೀಡಬೇಕು, ಬಿ.ಆರ್.ಸಿಗಳಲ್ಲಿ ಕನ್ನಡ ತರಬೇತುದಾರರನ್ನು ಶೀಘ್ರ ನೇಮಕಮಾಡಬೇಕು ಮತ್ತು ಆರ್.ಎಂ.ಎಸ್ ಶಾಲೆಗಳಿಗೆ ಸೌಕರ್ಯಗಳನ್ನು ಒದಗಿಸಬೇಕೆಂದು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಂಘದ ಕೇಂದ್ರ ಸಮಿತಿ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಒತ್ತಾಯಿಸಿದರು.

ಕುಂಬಳೆ ಉಪಜಿಲ್ಲಾ ಘಟಕದ ಅಧ್ಯಕ್ಷ ರಾಜಾರಾಮ ಕೆ.ವಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಕರುಣಾಕರ ಅನಂತಪುರ ಉಪಸ್ಥಿತರಿದ್ದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್, ಕುಂಬಳೆ ಉಪಜಿಲ್ಲಾ ಘಟಕದ ಉಪಾಧ್ಯಕ್ಷ ರಾಜೇಶ್, ಕೇಂದ್ರ ಸಮಿತಿ ಸದಸ್ಯ ಕೃಷ್ಣೋಜಿ ರಾವ್, ಕೇಂದ್ರ ಸಮಿತಿ ಸದಸ್ಯೆ ಪ್ರಭಾವತಿ ಕೆದಿಲಾಯ ಪುಂಡೂರು ಮೊದಲಾದವರು ಶುಭಹಾರೈಸಿದರು.

ಉಪಜಿಲ್ಲಾ ಘಟಕದ ಕಾರ್ಯದಶರ್ಿ ಅಬ್ದುಲ್ ರಹಿಮಾನ್ ಎನ್. ಸ್ವಾಗತಿಸಿದರು. ಕೋಶಾಧಿಕಾರಿ ಪ್ರದೀಪ್ ಶೆಟ್ಟಿ ವಂದಿಸಿದರು. ಘಟಕದ ಉಪಾಧ್ಯಕ್ಷ ಗುರುಪ್ರಸಾದ್ ರೈ ನಿರೂಪಿಸಿದರು.

Leave a Reply

Your email address will not be published. Required fields are marked *