Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅಬಕಾರಿ ಅಧಿಕಾರಿಗಳಿಂದ ಅಕ್ರಮ ಮದ್ಯ ವಶ

ಮುಳ್ಳೇರಿಯಾ(ಕಾಸರಗೋಡು): ಬದಿಯಡ್ಕ ಅಬಕಾರಿ ವಿಭಾಗಕ್ಕೊಳಪಟ್ಟ ಅಧಿಕಾರಿಗಳಿಗೆ ಮುಳ್ಳೇರಿಯಾದಿಂದ ದೊರಕಿದ ರಹಸ್ಯ ಮಾಹಿತಿಯ ಮೇರೆಗೆ ಜ.16ರಂದು ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 396 ಬಾಟಲಿಗಳಲ್ಲಿದ್ದ 180 ಲೀಟರ್ ವಿವಿಧ ರೀತಿಯ ಮದ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮುಳ್ಳೇರಿಯಾ ಪರಿಸರದ ತೋಡಿನ ಬಳಿಯಿಂದ ಅಬಕಾರಿ ವಿಸೇಷ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಡೆಸಿದ ದಾಳಿಯಲ್ಲಿ 20 ಪೆಟ್ಟಿಗೆಗಳಲ್ಲಿ ಬಚ್ಚಿಡಲಾಗಿದ್ದ 500 ಮಿ.ಲೀ.ನ ಗೋವಾ ಸೂಪರ್ ಸ್ಟ್ರಾಂಗ್ 234 ಬಾಟಲಿಗಳು, 375 ಮೀ.ಲೀ. ನ ಮೆಜೆಸ್ಟಿಕ್ ಫೈನ್ ಬ್ರಾಂಡಿನ 144 ಬಾಟಲಿಗಳು, 500 ಮೀ.ಲೀ. ನ ಗೋವಾ ಮೆಜೆಸ್ಟಿಕ್ ಫೈನ್ ಬ್ರಾಂಡಿನ 18 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಾಂಡಿಚೇರಿಯಲ್ಲಿ ಮಾತ್ರ ಮಾರಾಟ ಮಾಡಬಹುದಾದ ಮದ್ಯಗಳು ಇವಾಗಿವೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ವೇಳೆ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದು, ಅಧಿಕಾರಿಗಳು ಬಾಂಬೆ ಮನು ಯಾನೆ ಮನೋಹರ ಹಾಗೂ ಎಂ. ವಿನು ಎಂಬವರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. ಅಬಕಾರಿ ಹೆಚ್ಚುವರಿ ಕಮಿಷನರ್ ಪಿ.ವಿ. ಸುರೇಂದ್ರನ್ ಅವರಿಗೆ ದೊರಕಿದ ರಹಸ್ಯ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿತ್ತು.

Leave a Reply

Your email address will not be published. Required fields are marked *