Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಲಾರಿ- ಬೈಕ್ ಡಿಕ್ಕಿ: ಮಗ ಮೃತ್ಯು, ತಂದೆ ಗಂಭೀರ

ಮುಳ್ಳೇರಿಯಾ(ಕಾಸರಗೋಡು): ಚೆರ್ಕಳ-ಜಾಲ್ಸೂರು ರಾಜ್ಯ ಹೆದ್ದಾರಿಯ ಕೊಟ್ಯಾಡಿ ಸೇತುವೆಯ ಬಳಿ ಇಂದು ಸಂಭವಿಸಿದ ಲಾರಿ ಮತ್ತು ಬೈಕ್ ಅಪಘಾತದಲ್ಲಿ ಓರ್ವ ಮೃತನಾಗಿ, ಮತ್ತೋರ್ವ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯಲ್ಲಿ ಸುಳ್ಯ ಬಳಿಯ ದೊಡ್ಡತೋಟದ ಸುನಿಲ್ ಮಣಿಯಾಣಿ (27) ಮೃತಪಟ್ಟಿದ್ದಾರೆ. ಇವರ ತಂದೆ ನಾರಾಯಣ ಮಣಿಯಾಣಿ (50) ಗಂಭೀರವಾಗಿ ಗಾಯಗೊಂಡಿದ್ದು, ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾರಾಯಣ ಮಣಿಯಾಣಿ ಹಾಗೂ ಇವರ ಪುತ್ರ ಸುನಿಲ್ ಸಂಚರಿಸುತ್ತಿದ್ದ ಬೈಕ್ ಗೆ, ಕೋಳಿ ಸಾಗಾಟದ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ.

ನಾರಾಯಣ ಮಣಿಯಾಣಿ ಬೈಕ್ ಚಲಾಯಿಸುತ್ತಿದ್ದು, ಪುತ್ರ ಸುನಿಲ್ ಹಿಂಬದಿ ಕುಳಿತಿದ್ದರು. ಬೆಳಿಗ್ಗೆ 9 ಗಂಟೆಗೆ ಅಪಘಾತ ನಡೆದಿದೆ. ಸುಳ್ಯದ ಜಾಲ್ಸೂರಿನಿಂದ ಮುಳ್ಳೇರಿಯಾ ಬಳಿಯ ಕಾನಕ್ಕೋಡು ತರವಾಡಿಗೆ ಆಗಮಿಸುತ್ತಿದ್ದ ವೇಳೆ ಕೊಟ್ಯಾಡಿ ಸೇತುವೆ ಬಳಿ ಮುಳ್ಳೇರಿಯಾದಿಂದ ಜಾಲ್ಸೂರಿಗೆ ಕೋಳಿ ಸಾಗಾಟ ನಡೆಸುತ್ತಿದ್ದ ಲಾರಿ ಡಿಕ್ಕಿ ಹೊಡೆಯಿತೆನ್ನಲಾಗಿದೆ. ಅಪಘಾತದ ವೇಳೆ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡು ರಕ್ತಸ್ರಾವವಾಗಿ ಸ್ಥಳದಲ್ಲೇ ಸುನಿಲ್ ಮೃತಪಟ್ಟಿದ್ದಾರೆ.

ಚೆರ್ಕಳ-ಜಾಲ್ಸೂರು ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳು !

ಚೆರ್ಕಳ-ಜಾಲ್ಸೂರು ರಾಜ್ಯ ಹೆದ್ದಾರಿಯ ಗಾಳಿಮುಖದಲ್ಲಿ ಜ.8ರಂದು ಅಪಘಾತವಾಗಿ ಒಬ್ಬರು ಮೃತಪಟ್ಟಿದ್ದರು. ಕಳೆದ ಡಿಸೆಂಬರ್ನಲ್ಲಿ ಪೂವಡ್ಕ ಎಂಬಲ್ಲಿ ಇಬ್ಬರು ಹಾಗೂ ಪಂಜಿಕಲ್ಲಿನಲ್ಲಿ ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಜಿಲ್ಲೆಯಲ್ಲೇ ಅತ್ಯಂತ ಸುಸ್ಥಿತಿಯಲ್ಲಿರುವ ರಸ್ತೆಯೆಂಬ ಹೆಗ್ಗಳಿಕೆ ಪಡೆದಿರುವ ಚೆರ್ಕಳ-ಜಾಲ್ಸೂರು ರಾಜ್ಯ ಹೆದ್ದರಿಯಲ್ಲಿ ನಿತ್ಯ ಅಪಘಾತಗಳು ನಡೆಯುತ್ತಿದ್ದು, ಕಡಿದಾದ ರಸ್ತೆ ಮತ್ತು ಭಾರೀ ತಿರುವುಗಳೇ ಅಪಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಮುಳ್ಳೇರಿಯಾದ ಬಳಿಕ ಜಾಲ್ಸೂರು ತನಕ ರಸ್ತೆಯ ಎರಡು ಪಕ್ಕದಲ್ಲೂ ಎತ್ತರವಾದ ಗುಡ್ಡ, ರಕ್ಷಿತಾರಣ್ಯ ಮತ್ತು ಕೃಷಿ ತೋಟಗಳಿದ್ದು, ತಿರುವುಗಳಲ್ಲಿ ಕಡಿದಾದ ರಸ್ತೆ ಮತ್ತು ತಿರುವುಗಳ ವಿವರಗಳಿಲ್ಲದೆ ವೇಗವಾದ ವಾಹನ ಚಲಾವಣೆ ನಡೆಸುವುದು ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಮುಳ್ಳೇರಿಯಾ ಕೇಂದ್ರೀಕರಿಸಿ ನಾಗರಿಕರ ರಸ್ತೆ ಸುರಕ್ಷಾ ಸಮಿತಿಯೊಂದನ್ನು ಶೀಘ್ರವೇ ರಚಿಸಲು ಚಿಂತಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *