Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ಶಬರಿಮಲೆಗೆಂದು ಹೊರಟ ಅಯ್ಯಪ್ಪ ವೃತಾಧಾರಿ ಕಾಣೆ: FIR ದಾಖಲಿಸದ ಪಡುಬಿದ್ರಿ ಪೊಲೀಸ್ !

ಉಡುಪಿ: ಶಬರಿಮಲೆಗೆ ಹೋಗಿ ಬರುವುದಾಗಿ ಹೇಳಿ ಜ. 5ರಂದು ಮನೆಯಿಂದ ಹೊರಟ ವ್ಯಕ್ತಿಯೋರ್ವರು ಮನೆಗೆ ಮರಳದೆ ನಿಗೂಢವಾಗಿ ಕಾನೆಯಾದ ಪ್ರಕರಣ ನಡೆದಿದೆ.

ಪಡುಬಿದ್ರಿ ಬ್ರಹ್ಮಸ್ಥಾನ ರಸ್ತೆಯ ನರಸಿಂಹ ಸಾಲ್ಯಾನ್ (57) ಎಂಬವರು ಕಾಣೆಯಾದವರು. ಜ.5ರಂದು ನರಸಿಂಹ ಸಾಲ್ಯಾನ್ ಮನೆಯಿಂದ ಹೊರಟಿದ್ದು, ಬಳಿಕ ಕಾಣೆಯಾಗಿದ್ದರು. ಈ ಬಗ್ಗೆ ಅವರ ಪುತ್ರ ಅವಿನಾಶ್ ಅವರು ಮೊದಲಿಗೆ ಮೌಖಿಕವಾಗಿ ಪಡುಬಿದ್ರಿ ಪೊಲೀಸ್ ಠಾಣಾಧಿಕರಿಯವರಿಗೆ ದೂರು ನಿಡಿದ್ದಾರೆ. ನಂತರ ಜ. 17ರಂದು ಲಿಖಿತ ದೂರು ನೀಡಿದ್ದಾರೆ. ಆದರೆ ಪಡುಬಿದ್ರಿ ಠಾಣಾಧಿಕಾರಿಯವರು ಅವಿನಾಶ್ ನೀಡಿದ ದೂರನ್ನು ದಾಖಲಿಸಿಕೊಳ್ಳದೆ ಕರ್ತವ್ಯಲೋಪವೆಸಗಿದ್ದಾರೆ ಎಂದು ದೂರಲಾಗಿದೆ.

ಬಳಿಕ ಅವಿನಾಶ್ ಅವರು, ಜ. 19ರಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿರುವ ಸ್ಪಂದನ ವಿಭಾಗಕ್ಕೆ ಹೋಗಿ ಅಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಸ್ಪಂದನ ವಿಭಾಗದ ಅಧಿಕೃತರು ಅವಿನಾಶ್ ನೀಡಿದ ದಲಿಖಿತ ದೂರಿಗೆ ಸಹಿ ಮತ್ತು ಇಲಾಖಾ ಸೀಲ್ ಹಾಕಿ ಪಡುಬಿದ್ರಿ ಠಾಣೆಗೆ ಹೋಗಿ ಕೊಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅವಿನಾಶ್ ಅವರು ಮತ್ತೆ ಪಡುಬಿದ್ರಿ ಪೊಲೀಸ್ ಠಾಣೆಗೆ ತೆರಳಿ ಕೊಟ್ಟರೂ ಸಹ ಠಾಣಾಧಿಕಾರಿಯವರು ಎಫ್ಐಆರ್ ದಾಖಲಿಸಿಕೊಂಡಿಲ್ಲವೆಂದು ನರಸಿಮಹ ಸಾಲ್ಯಾನ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಪಡುಬಿದ್ರಿ ಠಾಣಾಧಿಕಾರಿಯವರು ಹಾಗೂ ಎಸ್ಪಿ ಕಚೇರಿಯ ಸಪಂದನ ವಿಭಾಗದಿಂದಲೂ ನ್ಯಾಯ ಲಭಿಸದ ಹಿನ್ನಲೆಯಲ್ಲಿ ಅಂತಿಮವಾಗಿ ನರಸಿಮಹ ಸಾಲ್ಯಾನ್ ಕುಟುಂಬಸ್ಥರು ಎಸ್ಪಿ ಅಣ್ಣಾಮಲೈ ಅವರಿಗೆ ಇಂದು ಸಂಜೆ ದೂರು ನೀಡಿದ್ದಾರೆ. ಎಸ್ಪಿಯವರು ಪ್ರಕರಣವನ್ನು ಗಂಭಿರವಾಗಿ ಪರಿಗಣಿಸುವುದಾಗಿ ಕುಟುಂಬದ ಮೂಲಗಳಿಗೆ ಭರವಸೆ ನೀಡಿದ್ದಾರೆ.

One Comment

  1. Chethupdb123@gmail.com'

    Chethan

    January 21, 2015 at 11:00 pm

    Thank u diwanre.

Leave a Reply

Your email address will not be published. Required fields are marked *