Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ವ್ಯಭಿಚಾರ ಮಾಡುವಾಗ ನಿರೋಧ್ ಶಿರ್ಕ್ ಎನಿಸುವುದಿಲ್ಲ, ಮದುವೆ ನಂತರ ಅದು ಹೇಗೆ ಶಿರ್ಕ್ ಆಗುತ್ತದೆ ?

# ಅಡಿಗಡಿಗೆ ಈ ದೇಶವನ್ನು ಜಾತ್ಯಾತೀತ ದೇಶವೆಂದು ನಮಗೆ ನೆನಪಿಸಲೆಂದೇ ಇರುವ ಮಾದ್ಯಮಗಳು, ಬುದ್ದಿಜೀವಿಗಳೆಂಬ ವಿಚಿತ್ರ ಜೀವಪ್ರಭೇದಗಳು, ಸೋಕಾಲ್ಡ್ ಸೆಕ್ಯುಲರ್ ಪಾರ್ಟಿಗಳು ಯಾವತ್ತೂ ಕೂಡ ಈ ದೇಶದಲ್ಲಿ ನಡೆಯುತ್ತಿರುವ ಕಾನೂನಿನ ತಾರತಮ್ಯದ ಬಗ್ಗೆ ದನಿ ಎತ್ತಿದ್ದನ್ನು ನಾನು ಕಂಡಿಲ್ಲ.

ಬಹುಸಂಖ್ಯಾತ ಹಿಂದೂ ಸಮಾಜದ ಜನಸಂಖ್ಯೆಯನ್ನು ನಿಯಂತ್ರಿಸಲು ಹಲವಾರು ವರ್ಷಗಳಿಂದ ನೂರಾರು ಯೋಜನೆಗಳನ್ನು ರೂಪಿಸುತ್ತಿರುವ ಆಳುವ ವರ್ಗ, ಅಲ್ಪಸಂಖ್ಯಾತರು ಎಂಬ ಮುಸುಕಿನ ಅಡಿಯಲ್ಲಿ ನಿರಂತರವಾಗಿ ತನ್ನ ಸಂಖ್ಯೆಯನ್ನು ಹೆಚ್ಚಿಸಲು ರಾತ್ರಿ ಹಗಲು ದುಡಿಯುತ್ತಿರುವ ಒಂದು ಕೋಮಿನ ವರ್ತನೆಗೆ ಕಡಿವಾಣ ಹಾಕಲು ಎಂದೂ ಕೂಡ ಮನಸ್ಸು ಮಾಡಿಲ್ಲ.

ಈ ತಾರತಮ್ಯದ ಹಿಂದಿನ ಉದ್ದೇಶವೇನು ? ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವ ಸಲುವಾಗಿ ಬಹುಸಂಖ್ಯಾತರನ್ನು ಬಲಿ ಕೊಡುವುದು ಯಾವ ಧರ್ಮ ? ಜಾತ್ಯಾತೀತ ವಾದಿಗಳು ಎನಿಸಿಕೊಂಡವರಲ್ಲಿ ನನ್ನದೊಂದು ನೇರ ಪ್ರಶ್ನೆ ಇದೆ. ನಿಮ್ಮ ಈ ಇಬ್ಬಂದಿತನದ ಅಂತಿಮ ಫಲಿತಾಂಶ ಏನಾಗಲಿದೆ ಎಂಬ ಕನಿಷ್ಠ ಕಲ್ಪನೆಯಾದರೂ ನಿಮಗಿದೆಯೇ ? ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರಾಗಿಸಿ ಬಹುಸಂಖ್ಯಾತರನ್ನು ಅಲ್ಪಸಂಖ್ಯಾತರಾಗಿಸುವುದೇ ನಿಮ್ಮ ಈ ಸಿದ್ಧಾಂತದ ಹಿಂದೆ ಅಡಗಿರುವ ಅಜೆಂಡಾವೇ ?

ಬಹುಸಂಖ್ಯಾತ ಹಿಂದೂ ಸಮಾಜ ತನ್ನ ಜನಸಂಖ್ಯೆಗೆ ಸ್ವಯಂ ನಿಯಂತ್ರಣ ಹೇರಿಕೊಂಡಿದೆ. ತನಗೆ ಮಗು ಒಂದಾದರೂ ಚಿಂತೆ ಇಲ್ಲ ಆ ಮಗುವಿಗೆ ಉತ್ತಮ ಭವಿಷ್ಯವನ್ನು ಕಲ್ಪಿಸಿಕೊಡಬೇಕು, ಆತ ಮುಂದೊಂದು ದಿನ ಸಮಾಜ ಘಾತುಕನಾಗದೆ ಸಮಾಜಪರನಾಗಿ ಕೆಲಸ ಮಾಡಬೇಕು, ಆತನ ಎಲ್ಲಾ ಚಟುವಟಿಕೆಯನ್ನು ನಾವು ಗಮನಿಸುತ್ತಿರಬೇಕು, ಆತನ ಎಲ್ಲಾ ಬೇಕು ಬೇಡಗಳನ್ನು ನೀಡಲು ನಾನು ಶಕ್ತನಾಗಿರಬೇಕು ಮೊದಲಾದ ಭಾವನೆ ಹಿಂದೂ ಸಮಾಜದ ಪ್ರತಿಯೊಬ್ಬರಲ್ಲಿದೆ.

ಹಾಗಾಗಿ ಪೊಲೀಸ್ ಠಾಣೆಯ ಪಟಿಂಗರ ಫಲಕದಲ್ಲಿ ಬಹುಸಂಖ್ಯಾತರೆನಿಸಿಕೊಂಡವರ ಸಂಖ್ಯೆ ಅಲ್ಪ ಪ್ರಮಾಣದಲ್ಲಿರುತ್ತದೆ. ಆದರೆ ಈ ದೇಶದಲ್ಲಿ ಅಲ್ಪಸಂಖ್ಯಾತರು ಎಂಬ ಮುಸುಕಿನಡಿಯಲ್ಲಿ ಹುಲುಸಾಗಿ ಬೆಳೆಯುತ್ತಿರುವ ಒಂದು ವರ್ಗ ಬೇಕಾಬಿಟ್ಟಿ ಮಕ್ಕಳು ಮಾಡುವುದು ತಮ್ಮ ಧಾರ್ಮಿಕ ಕರ್ತವ್ಯವೆಂದು ಭಾವಿಸಿ ಯುದ್ದೋಪಾದಿಯಲ್ಲಿ ತಮ್ಮ ವಂಶಾಭಿವೃದ್ಧಿಯಲ್ಲಿ ತೊಡಗಿದ್ದಾರೆ. ಇದೇನು ಇಂದು ಗುಟ್ಟಾಗಿ ಉಳಿದಿಲ್ಲ.

ಝಾಕಿರ್ ಎಂಬ ಆಧುನಿಕ ಇಸ್ಲಾಮಿನ ಸ್ವಯಂ ಘೋಷಿತ ಪ್ರವಾದಿಯೊಬ್ಬ ಕುರಾನಿನ ಆಯತಗಳನ್ನು ಉದಾಹರಣೆಯಾಗಿ ನೀಡಿ ಕಾಂಡೋಮು ಮತ್ತು ಗರ್ಭ ನಿರೋಧಕಗಳ ಬಳಕೆ ಇಸ್ಲಾಮಿನಲ್ಲಿ ನಿಷಿದ್ಧ ಎಂದು ವಾದಿಸುತ್ತಾನೆ. ಆದರೆ ನಾನು ನೋಡಿದ ಪ್ರಕಾರ ಕುರಾನ್ ಎಲ್ಲೂ ಕೂಡ ಊಟ ನಿದ್ರೆ ಬಿಟ್ಟು ಮಕ್ಕಳು ಮಾಡಿ ಎಂದು ಎಲ್ಲೂ ಆಗ್ರಹಿಸಿಲ್ಲ. ಅದ್ಯಾಯ 17ರ 31ನೇ ಆಯತದಲ್ಲಿ ಬಡತನದ ಕಾರಣ ಮಕ್ಕಳನ್ನು ಕೊಲ್ಲಬೇಡಿ ಎಂದು ಹೇಳಿದೆಯಷ್ಟೇ. ಅಲ್ ಬುಖಾರಿಯಲ್ಲಿ ಕೆಲವು ಮತಾಂಧ ಸಂಗತಿಗಳನ್ನು ಭೋದಿಸಿ ಬಡಪಾಯಿ ಮುಸಲ್ಮಾನರನ್ನು ದಾರಿ ತಪ್ಪಿಸಲಾಗಿದೆ.

ಮುಸಲ್ಮಾನರಲ್ಲಿ ಅಲ್ಲಾನ ಅನುಯಾಯಿಗಳು ಮತ್ತು ಮುಲ್ಲಾನ ಅನುಯಾಯಿಗಳು ಎಂಬ ಎರಡು ಗುಂಪುಗಳಿವೆ. ಈ ಮುಲ್ಲಾಗಳು ಜುಮ್ಮಾದ ನಮಾಜಿನ ನಂತರ ಭೋದಿಸುವ ಕೆಲವು ವಿಚಾರಗಳು ಈ ಎಲ್ಲಾ ಎಡವಟ್ಟುಗಳಿಗೆ ಮುಖ್ಯ ಕಾರಣ.

ನಮ್ಮ ಮನೆ ಪಕ್ಕದ ಒಬ್ಬ ಗುಜಿರಿ ವ್ಯಾಪಾರಿಗೆ ಒಟ್ಟು 14 ಮಕ್ಕಳು ! ಇದು ಒಂದನೇ ಹೆಂಡತಿಗೆ ಈ ಮಹಾಶಯರು ದಯಪಾಲಿಸಿದ ವರಪ್ರಸಾದ. ಇವರಿಗೆ ಗುರುಪುರದಲ್ಲಿ ಮತ್ತೊಬ್ಬಳು ಪತ್ನಿ ಇದ್ದಾಳೆ ಎಂಬ ಮಾಹಿತಿಯೂ ಇದೆ. ಇವರ 14 ಮಕ್ಕಳಲ್ಲಿ ಒಬ್ಬ ಮಾತ್ರ ಏಳನೇ ತರಗತಿಯವರೆಗೆ ಓದಿ, ಆ ಸಾಹೇಬರ ಕೀರ್ತಿಯನ್ನು ಬೆಳಗಿಸಿದ್ದಾನೆ. ಉಳಿದವರೆಲ್ಲರೂ ಐದನೇ ತರಗತಿಗೆ ವಿದಾಯ ಕೋರಿ ಸಣ್ಣಪುಟ್ಟ ಕೆಲಸ ಮಾಡುತ್ತಾ ಅಪ್ಪನ ಬೆನ್ನು ಬಿದ್ದಿರುವ ಬಡತನವೆಂಬ ಬೇತಾಳನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.

ಈ 14 ಮಕ್ಕಳಲ್ಲಿ 6 ಮಂದಿ ಹೆಣ್ಣು ಮಕ್ಕಳಿದ್ದಾರೆ. ಇದರಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಸರಿಯಾದ ವರ ಹುಡುಕಿ ಮದುವೆ ಮಾಡಲು ಸಾಹೇಬರಿಗೆ ಸಾಧ್ಯವಾಯಿತು. ಮಕ್ಕಳು ದುಡಿದ ಚಿಲ್ಲರೆ ಹಣವನ್ನು ಒಟ್ಟು ಮಾಡಿ ಅಷ್ಟೋ ಇಷ್ಟೋ ಬಂಗಾರ ಹಾಕಿ ಇಬ್ಬರು ಹೆಣ್ಣು ಮಕ್ಕಳನ್ನು ಹೊಸ್ತಿಲು ದಾಟಿಸುವಷ್ಟರಲ್ಲಿ ಅವರ ತಲೆಗೆ 5 ಲಕ್ಷ ರೂಪಾಯಿ ಸಾಲ ಸುತ್ತಿಕೊಂಡಿತು. ಉಳಿದ ಇಬ್ಬರನ್ನು ಐವತ್ತು ದಾಟಿದ ಇಬ್ಬರು ಅರೆ ಮುದುಕರಿಗೆ ಮದುವೆ ಮಾಡಿಕೊಟ್ಟರು. ಆ ಇಬ್ಬರು ತಲೆಮಾಸಿದ ವರಮಹಾಶಯರಿಗೆ ಇದು ಎರಡನೇ ಮದುವೆ. ಇನ್ನಿಬ್ಬರು ಹೆಣ್ಣು ಮಕ್ಕಳು ಮನೆಯಲ್ಲೇ ಇದ್ದಾರೆ. ವಯಸ್ಸು ಮೂವತ್ತು ದಾಟಿದೆ. ಅಣ್ಣಂದಿರೆಲ್ಲಾ ದಿಕ್ಕಾಪಾಲಾಗಿ ಹೋಗಿದ್ದಾರೆ. ವೃದ್ಧ ತಂದೆಯೊಂದಿಗೆ ಬೀಡಿ ಕಟ್ಟಿಕೊಂಡು ಈ ಕುಟುಂಬ ಜೀವನ ಸಾಗಿಸುತ್ತಿದೆ.

ಮಕ್ಕಳು ದೇವರ ವರ, ಅದನ್ನು ತಿರಸ್ಕರಿಸಬಾರದು. ಹುಟ್ಟಿಸಿದ ದೇವರು ಖಂಡಿತ ಹುಲ್ಲು ಮೇಯಿಸಲಾರ ಎಂಬ ಮುಲ್ಲಾ ಮೌಲವಿಗಳ ಮಾತಿಗೆ ಮರುಳಾಗಿ ಒಂದು ಕ್ರಿಕೇಟ್ ಟೀಮನ್ನೇ ರೆಡಿ ಮಾಡಿದ ಸಾಹೇಬರು ಈಗ ಸಾವನ್ನು ಎದುರು ನೋಡುತ್ತಿದ್ದಾರೆ. ಮೊನ್ನೆ ಮತ್ತೊಬ್ಬಳು ಮಗಳು ಗಂಡನ ಮನೆ ಬಿಟ್ಟು ಗಂಟುಮೂಟೆ ಕಟ್ಟಿಕೊಂಡು ತಂದೆಯ ಮನೆಗೆ ಬಂದಿದ್ದಾಳೆ. ಅವಳನ್ನು ಮದುವೆಯಾದ ಅರೆ ಮುದುಕನ ನರದೌರ್ಬಲ್ಯವೋ ಅಥವಾ ಇವಳ ಆರೋಗ್ಯದ ಕೊರತೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಅವಳಿಗೆ ಮದುವೆಯಾಗಿ ಮೂರು ವರ್ಷ ದಾಟಿದರೂ ಮಕ್ಕಳಾಗಲಿಲ್ಲ. ಇದೇ ನೆಪವನ್ನಿಟ್ಟುಕೊಂಡು ಅವಳನ್ನು ಅವಳ ಗಂಡ ಮನೆಯಿಂದ ಹೊರದಬ್ಬಿದ್ದಾನೆ. ಇದು ನಾನು ನಿತ್ಯ ನೋಡುವ ಒಂದು ಕುಟುಂಬದ ಕತೆಯಾಯಿತು. ಇಂಥ ಲಕ್ಷಾಂತರ ಕುಟುಂಬಗಳಿವೆ.

ವಿಚಿತ್ರವೆಂದರೆ ಅಶಿಕ್ಷಿತ, ಮದ್ರಸಾಗಳನ್ನೇ ಅವಲಂಬಿಸಿರುವ ಮುಸ್ಲೀಮರೇ ಈ ಘೊರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮುಂದುವರಿದ ಮುಸಲ್ಮಾನರು ಮುಲ್ಲಾಗಳ ಬೊಗಳೆ ಮಾತುಗಳಿಗೆ ಮರುಳಾಗುವುದಿಲ್ಲ. ಆರಕ್ಕೆ ಏರದ, ಮೂರಕ್ಕೆ ಇಳಿಯದ ಕೆಳ ಮದ್ಯಮ ವರ್ಗದಲ್ಲಿ ಈ ಬಹುಪತ್ನಿತ್ವ ಮತ್ತು ಬೇಕಾಬಿಟ್ಟಿ ಮಕ್ಕಳು ನಮಗೆ ಕಂಡು ಬರುತ್ತಾರೆ. ವರದಕ್ಷಿಣೆ, ಬಡತನ ಮುಸ್ಲಿಂ ಸಮುದಾಯವನ್ನು ಹಿಂದೂ ಸಮಾಜಕ್ಕಿಂತಲೂ ಭೀಕರವಾಗಿ ಕಾಡುತ್ತಿದೆ.

ಮನೆ ತುಂಬಾ ಮಕ್ಕಳು, ಬೆನ್ನು ಬಿಡದ ಬಡತನ ಇದೆಲ್ಲ ಕಾರಣದಿಂದಾಗಿ ಮಕ್ಕಳ ತಂದೆ ತಾಯಂದಿರಿಗೆ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಹೆಚ್ಚು ಗಮನ ಕೊಡಲಾಗುವುದಿಲ್ಲ. ಸಹಜವಾಗಿಯೇ ಈ ಮಕ್ಕಳು ಬಡತನದಿಂದ ಹೊರ ಬರಲು ಅಡ್ಡದಾರಿ ಹಿಡಿಯುತ್ತಾರೆ. ಕಳ್ಳತನ, ಕೊಲೆ, ಸುಲಿಗೆ, ಗೋ ಸಾಗಾಟ, ಭಯೋತ್ಪಾದನೆಯಂಥ ದೇಶದ್ರೋಹಿ ಚಟುವಟಿಕೆಗಳಿಗೆ ಈ ಯುವಕರು ತಮಗರಿವಿಲ್ಲದಂತೆ ಪ್ರವೇಶಿಸಿ ಬಿಡುತ್ತಾರೆ. ಮುಸ್ಲೀಮ್ ಸಮುದಾಯದಲ್ಲಿ ಕ್ರೈಮ್ ರೇಟ್ ಹೆಚ್ಚಾಗಿರಲು ಇದು ಅತ್ಯಂತ ಪ್ರಮುಖ ಕಾರಣವಾಗಿದೆ.

ನೀವು ಒಪ್ಪುತ್ತೀರೋ ಬಿಡುತ್ತೀರೋ, ಆದರೆ ಇದು ಕಟು ವಾಸ್ತವ. ಎಸ್ಎಸ್ಎಫ್ ಮೊದಲಾದ ಸಂಘಟನೆಗಳು ಇದರ ವಿರುದ್ಧ ಸ್ವಲ್ಪ ಮಟ್ಟಗೆ ಕೆಲಸ ಮಾಡುತ್ತಿವೆ. ಆದರೆ ಮುಸ್ಲಿಂ ಸಮಾಜವನ್ನು ಈ ಬಡತನದ ಕೂಪಕ್ಕೆ ತಳ್ಳಿ ತಮ್ಮ ತೆವಲು ತೀರಿಸಿಕೊಳ್ಳುತ್ತಿರುವ ಮುಲ್ಲಾ ಮೌಲವಿಗಳು ಈ ಬಗ್ಗೆ ಅಪ್ಪಿ ತಪ್ಪಿಯೂ ತುಟಿ ಬಿಚ್ಚುವುದಿಲ್ಲ. ಬಹುಪತ್ನಿತ್ವ, ಕುಟುಂಬ ಯೋಜನೆಗೆ ವಿರೋಧ ಇದೆಲ್ಲವನ್ನು ಮುಸ್ಲೀಂ ಸಮುದಾಯದ ನಾಯಕರೆನಿಸಿಕೊಂಡವರು ಸಂವಿದಾನ ಬಾಹಿರವಾಗಿ ಮಾಡಿಕೊಂಡು ಬಂದಿದ್ದಾರೆ.

ಇದನ್ನು ತಡೆಯಲು ಕಾನೂನುಗಳು ಇವೆಯೋ ಇಲ್ಲವೋ ಎನ್ನುವುದು ನಂತರದ ಪ್ರಶ್ನೆ. ಆದರೆ ಸರ್ವರಿಗೂ ಏಕರೂಪ ಕಾಯ್ದೆ ಕಾನೂನುಗಳು ಜಾರಿಯಾಗಬೇಕು ಎನ್ನುವುದು ನಮ್ಮ ಸಂವಿದಾನದ ಬಹುಮುಖ್ಯ ಆಶಯ. ಜಾತ್ಯಾತೀತವಾದದ ಬಗ್ಗೆ ಬೊಗಳೆ ಬಿಡುವವರು ಸಂವಿದಾನದ ಈ ಅಡಿಗಲ್ಲನ್ನೇ ಕಿತ್ತು ಹಾಕಿದ್ದಾರೆ. ಈ ದೇಶದಲ್ಲಿ ಹಿಂದೂ ಬಹುಸಂಖ್ಯಾತರಾಗಿರುವ ರಾಜ್ಯಗಳಲ್ಲಿ ಒಂದು ಕಾನೂನಿದ್ದರೆ ಮುಸ್ಲಿಂ ಬಹುಸಂಖ್ಯಾತ ರಾಜ್ಯಗಳಲ್ಲಿ ಅದಕ್ಕೆ ವ್ಯತಿರಿಕ್ತವಾದ ಕಾನೂನುಗಳಿವೆ. ಈ ತಾರತಮ್ಯವೇಕೆ ?

ಕೇರಳ, ಉತ್ತರ ಪ್ರದೇಶ, ಬಂಗಾಳದ ಗಡಿಭಾಗಗಳಲ್ಲಿ ನಡೆಯುವ ಶರಿಯತ್ ಕೋರ್ಟುಗಳು 6ನೇ ಶತಮಾನದ ಹಳಸಲು ನ್ಯಾಯ ಪದ್ದತಿಯನ್ನು ಬಳಸಿ ಇಂದಿಗೂ ತೀರ್ಪು ನೀಡುತ್ತಿವೆ. ಉತ್ತರ ಪ್ರದೇಶದಲ್ಲಿ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಮಗನ ಹೆಂಡತಿ ಅಂದ್ರೆ ಸೊಸೆಯ ಮೇಲೆ ಮಾವನೊಬ್ಬ ಅತ್ಯಾಚಾರ ನಡೆಸಿ ಬಿಟ್ಟ. ಬುರ್ಖಾದಿಂದ ಹೊರ ಬಂದ ಆ ಮಹಿಳೆ ಈ ಘಟನೆಯನ್ನು ಬಹಿರಂಗಗೊಳಿಸಿದಳು. ಪ್ರಕರಣ ಶರೀಯತ್ ಕೋರ್ಟಿನ ಮೆಟ್ಟಿಲೇರಿತು. ಅಲ್ಲಿದ್ದ ನೀಳಗಡ್ಡದ ಕೂಪ ಮಂಡೂಕಗಳು ಆಕೆಗೆ ಮಾವನನ್ನೇ ಮದುವೆಯಾಗುವಂತೆ ತೀಪರ್ು ನೀಡಿ ಬಿಟ್ಟರು. ಆ ಮಹಿಳೆಯ ಪರಿಸ್ಥಿತಿಯನ್ನು ಒಮ್ಮೆ ಊಹಿಸಿ. ನಿನ್ನೆವರೆಗೆ ಮಾವ ಎಂದು ಗೌರವಿಸಿ ಅಪ್ಪನ ಸ್ಥಾನದಲ್ಲಿಟ್ಟಿದ್ದ ವ್ಯಕ್ತಿಯೊಂದಿಗೆ ನಾಳೆಯಿಂದ ಹಾಸಿಗೆ ಹಂಚಿಕೊಳ್ಳಬೇಕಾದ ದುರಂತ ಸ್ಥಿತಿ. ಒಂದು ದಿನ ಆತ ಮಾಡಿದ ಅತ್ಯಾಚಾರವನ್ನು ಮುಲ್ಲಾಗಳಿಗೆ ಹೇಳಿದ ತಪ್ಪಿಗೆ ಜೀವನ ಪೂರ್ತಿ ಆತನಿಂದ ಅತ್ಯಾಚಾರ ಅನುಭವಿಸುವ ಘೋರ ಶಿಕ್ಷೆ. ನಿನ್ನೆಯ ತನಕ ಯಾರನ್ನು ಆಕೆ ಗಂಡನೆಂದು ಸ್ವೀಕರಿಸಿ ಆತನಿಂದ ಒಂದು ಮಗನನ್ನೂ ಪಡೆದಿದ್ದಳೋ, ಆ ಗಂಡನಿಗೆ ಆಕೆ ಈಗ ತಾಯಿಯಾಗಿ ಬಿಟ್ಟಿದ್ದಳು !. ಇನ್ನು ಆಕೆಯ ಮಗುವಿನ ಪರಿಸ್ಥಿತಿಯೋ ಅದು ಅತೀ ಘೋರ. ಆ ಮಗು ತನ್ನ ತಾಯಿಯನ್ನು ತಾಯಿ ಎನ್ನಬೇಕೋ ಅಜ್ಜಿ ಅನ್ನಬೇಕೋ ಗೊತ್ತಿಲ್ಲದೆ ಗೊಂದಲದಲ್ಲಿ ಸಿಲುಕಿತ್ತು. ಇದು ಶರೀಯತ್ ಕಾನೂನಿನ ಒಂದು ಝಲಕ್.

ಇಂಥ ಶರೀಯತ್ ಕೋರ್ಟುಗಳು ಬಡ ಮುಸಲ್ಮಾನರನ್ನು ದೊಣ್ಣೆ ನಾಯಕರ ಹಾಗೆ ಬಹುಕಾಲದಿಂದ ನಿಯಂತ್ರಿಸಿಕೊಂಡು ಬಂದಿವೆ. ಈ ಕಾನೂನು ಬಾಹಿರ ವ್ಯವಸ್ಥೆಯನ್ನು ನಡೆಸುವವರ ಕೈಯಲ್ಲಿ ಭಾರೀ ಓಟ್ ಬ್ಯಾಂಕ್ ಇದೆ. ಹಾಗಾಗಿ ಸೆಕ್ಯುಲರ್ ಜೀವಿಗಳು ಈ ಮನೆಹಾಳರ ಕಾಲು ನೆಕ್ಕಿ ಅವರ ಸೇವೆ ಮಾಡಿ ಪುನೀತರಾಗುತ್ತಾರೆ.

ಇನ್ನು ತಮ್ಮನ್ನು ತಾವು ಜಾತ್ಯಾತೀತವಾದಿಗಳು ಎನ್ನಿಸಿಕೊಂಡವರು ಕಾನೂನಿನ ಈ ಕಗ್ಗೊಲೆಯನ್ನು ತಡೆಯುವ ಯತ್ನ ಮಾಡಿಲ್ಲ. ಯಾರಾದರೂ ಮುಂದೆ ಬಂದರೆ ಬಾಲಕ್ಕೆ ಬೆಂಕಿ ಹಚ್ಚಿದಂತೆ ಹಾರಾಡುತ್ತಾರೆ. ನಿರೋಧ್ ಬಳಸಬೇಡಿ, ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳ ಬೇಡಿ, ಗರ್ಭ ನಿರೋಧಕ ಮಾತ್ರೆ ನುಂಗಬೇಡಿ ಎಂದು ಫತ್ವಾ ಜಾರಿ ಮಾಡುವ ಹಿಂದಿರುವ ಉದ್ದೇಶವಾದರೂ ಏನು ? ವ್ಯಭಿಚಾರ ಮಾಡುವಾಗ ನಿರೋಧ್ ಶಿರ್ಕ್ ಎನಿಸುವುದಿಲ್ಲ. ಯಾಕೆಂದರೆ ಏಡ್ಸ್ ಬಂದು ಸಾಯುವ ಭಯವಿರುತ್ತದೆ. ಕಾಲೇಜು ದಿನಗಳಲ್ಲಿ ಮುಸ್ಲಿಂ ಯುವಕರು ಅನೈತಿಕವಾಗಿ ಸಂಭಂದ ಬೆಳೆಸುವಾಗ ನಿರೋಧ್ ಶಿರ್ಕ್ ಎನಿಸುವುದಿಲ್ಲ. ಆದರೆ ಮದುವೆಯಾದ ನಂತರ ಅದು ಹೇಗೆ ಶಿರ್ಕ್ ಆಗುತ್ತದೆ ? ಉದ್ದೇಶ ಸ್ಪಷ್ಟವಿದೆ.

nirodh

ಧರ್ಮದ ಮುಸುಕಿನಡಿಯಲ್ಲಿ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಷ್ಟೇ ಇದರ ಹಿಂದೆ ಅಡಗಿರುವ ಉಪಾಯ. ನಾಲ್ಕು ದಶಕದ ಹಿಂದೆ ಹಿಂದೂ ಸಮಾಜದಲ್ಲಿಯೂ ಬಹುಪತ್ನಿತ್ವವಿತ್ತು. 7-8 ಮಕ್ಕಳೂ ಹುಟ್ಟುತ್ತಿದ್ದವು. ಆದರೆ 1951ರ ನಂತರ ಸರಕಾರ ವಿಧಿಸಿದ ಒಂದಷ್ಟು ಕಾನೂನುಗಳಿಗೆ ಹಿಂದೂ ಸಮಾಜ ತಲೆ ತಗ್ಗಿಸಿತು. ಒಬ್ಬ ಹಿಂದೂ ಏಕಕಾಲದಲ್ಲಿ ಎರಡು ಪತ್ನಿಯರನ್ನು ಹೊಂದುವುದು ಕಾನೂನು ಪ್ರಕಾರ ಅಪರಾಧ. ಆದರೆ ಮುಸಲ್ಮಾನನೊಬ್ಬನಿಗೆ ಈ ಕಾನೂನು ಅನ್ವಯಿಸುವುದಿಲ್ಲ. ಆತ ಎಷ್ಟು ಮದುವೆಯಾಗಬಹುದು, ಎಷ್ಟು ಮಕ್ಕಳು ಮಾಡಬಹುದು, ಯಾವಾಗ ಹೇಗೆ ಹೆಂಡತಿಗೆ ತಲಾಖ್ ಕೊಡಬಹುದು, ಇದೆಲ್ಲಾ ಆತನ ವೈಯುಕ್ತಿಕ ವಿಚಾರಗಳು. ಇದರಲ್ಲಿ ಸರಕಾರ ಮೂಗು ತೂರಿಸುವಂತಿಲ್ಲ. ಇದರ ಅರ್ಥ ಸ್ಪಷ್ಟ. ಭಾರತದ ಮುಸಲ್ಮಾನ ಇಂದಿಗೂ ಈ ಕಾನೂನಿಗೆ ಒಳಪಟ್ಟಿಲ್ಲ. ಆತ ಇಂದಿಗೂ ಈ ದೇಶದ ವ್ಯವಸ್ಥೆಯಿಂದ ಹೊರಗೆ ನಿಂತುಕೊಂಡಿದ್ದಾನೆ. ಆತನಿಗಾಗಿ ಇಲ್ಲಿ ಮುಸ್ಲಿಂ ವೈಯುಕ್ತಿಕ ಕಾನೂನು ಸಮಿತಿ ರಚಿಸಲಾಗುತ್ತದೆ. ಇದು ಇತರ ಯಾವುದೇ ಜಾತಿಗಳಿಗಿಲ್ಲ.

1951ರಲ್ಲಿ ಪ್ರಧಾನಿ ಜವಾಹರ ಲಾಲ್ ನೆಹರು ಹಿಂದೂ ಕೋಡ್ ಬಿಲ್ ಜಾರಿಗೆ ತರಲು ಮುಂದಾದರು. ಭಾರತದ ಎಲ್ಲಾ ಮೂಲ ನಿವಾಸಿಗಳನ್ನು ಈ ಕಾನೂನಿನಡಿಯಲ್ಲಿ ತರಲಾಯಿತು. (ಹೊರದೇಶದಿಂದ ಆಮದಾಗಿರುವ ಇಸ್ಲಾಂ, ಕ್ರೈಸ್ತ, ಪಾರ್ಸಿ ಮೊದಲಾದ ಮತಗಳನ್ನು ಹೊರತುಪಡಿಸಿ) ಈ ಕಾನೂನು ಹಿಂದೂಗಳ ವಿವಾಹ, ಆಸ್ತಿ ವಿತರಣೆ, ಕೌಟುಂಬಿಕ ಹಕ್ಕುಗಳು, ವಿಚ್ಛೇದನದ ಹಕ್ಕು, ದತ್ತು ಸ್ವೀಕಾರ ಮೊದಲಾದ ವಿಚಾರಗಳನ್ನು ನಿರ್ದೇಶಿಸುತ್ತದೆ. ಈ ಕಾನೂನು ಅಂದಿನ ಕಾನೂನುಮಂತ್ರಿ ಅಂಬೇಡ್ಕರ್ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಹಿಂದೂ ಸಮಾಜವನ್ನು ಏಕ ಸೂತ್ರದಲ್ಲಿ ಒಗ್ಗೂಡಿಸಲು ಈ ಕಾನೂನು ನೆರವಿಗೆ ಬಂತು. ಈ ಕಾನೂನು ಭಾರತದಲ್ಲಿ ಹಿಂದೂಗಳು ಎಂದರೆ ಯಾರು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತದೆ. ಯಾರು ಮುಸ್ಲಿಂ, ಕ್ರೈಸ್ತ, ಪಾರ್ಸಿ ಮತ್ತು ಯಹೂದಿಯಲ್ಲವೋ, ಅವರೆಲ್ಲಾ ಹಿಂದೂಗಳು ಎಂದು ಈ ಕಾನೂನು ಘೋಷಿಸಿತು.

dr.b.r.ambedkar

ಸಿಖ್ಖ್, ಜೈನ, ಬೌದ್ಧರೂ ಈ ಕಾನೂನಿನ ಅಡಿಯಲ್ಲಿ ಹಿಂದೂಗಳಾಗಿ ಗುರುತಿಸಲ್ಪಟ್ಟಿದ್ದರು. ಈ ಕಾನೂನನ್ನು ಅಂದಿನ ಸಿಖ್ಖ್ ನಾಯಕ ಸರದಾರ್ ಹುಕುಂ ಸಿಂಗ್ ಕಟುವಾಗಿ ವಿರೋಧಿಸಿದ್ದರು. ಅವರು ಈ ಕಾನೂನು ಸಿಕ್ಖರನ್ನು ಹಿಂದೂ ಧರ್ಮದೊಂದಿಗೆ ವಿಲೀನಗೊಳಿಸುವ ಷಡ್ಯಂತ್ರವೆಂದು ಕಿಡಿಕಾರಿದ್ದರು. ಕೆಲವು ಜಿಗುಟು ಹಿಂದೂ ಕಟ್ಟರ್ವಾದಿಗಳೂ ಇದನ್ನು ತೀವ್ರವಾಗಿ ವಿರೋಧಿಸಿದರು. ನೆಹರೂ ಸರಕಾರ ಹಿಂದೂಗಳ ಆಂತರಿಕ ವಿಚಾರದಲ್ಲಿ ಅನಾವಶ್ಯಕ ಮೂಗು ತೂರಿಸುತ್ತಿದೆ ಎಂಬ ಆಕ್ರೋಶ ಅವರಲ್ಲಿತ್ತು. ಸ್ವಾಮಿ ಕರಪಾತ್ರಿ ಮಹಾರಾಜ್, ಆರ್ ಎಸ್ಎಸ್, ಹಿಂದೂ ಮಹಾಸಭಾ, ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಮೊದಲಾದವರ ನೇತೃತ್ವದಲ್ಲಿ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯಿತು. ಅಲ್ಲಲ್ಲಿ ನೆಹರು ಮತ್ತು ಅಂಬೇಡ್ಕರ್ ಅವರ ಪ್ರತಿಕೃತಿ ದಹಿಸಲಾಯಿತು. ಸ್ವತಃ ಕಾಂಗ್ರೇಸಿಗರಾದ ಬಾಬು ರಾಜೇಂದ್ರ ಪ್ರಸಾದ್ ಅವರೂ ಈ ಕಾನೂನಿಗೆ ವಿರೋಧ ವ್ಯಕ್ತಪಡಿಸಿದ್ದರು. ಕೇವಲ ಈ ಮಸೂದೆಯನ್ನು ಖಂಡಿಸುವ ಉದ್ದೇಶದಿಂದ ಪ್ರಭುದತ್ತ ಬ್ರಹ್ಮಚಾರಿ ಎಂಬ ಸಂತರೊಬ್ಬರು ಇಲಹಾಬಾದಿನ ಪುಲ್ಪುರ್ ಕ್ಷೇತ್ರದಲ್ಲಿ ನೆಹರು ವಿರುದ್ಧ ಚುನಾವಣೆಗೂ ಸ್ಪರ್ಧಿಸಿದ್ದರು.

ಅದು 1950ರ ಅವಧಿ. ನೆಹರು ಸಂಪುಟ ಚುನಾವಣೆಯ ಮೂಲಕ ಆಯ್ಕೆಯಾಗಿ ಬಂದಿರಲಿಲ್ಲ. ಅದೊಂದು ತಾತ್ಕಾಲಿಕ ವ್ಯವಸ್ಥೆಯಾಗಿತ್ತು ಅಷ್ಟೆ. ಜನರಿಂದ ಚುನಾಯಿತರಾಗದ ಕೇವಲ ರಾಷ್ಟ್ರಪತಿಗಳಿಂದ ನಿಯೋಜಿತರಾದ ಜನಪ್ರತಿನಿಧಿಗಳು ಲೋಕಸಭೆಯಲ್ಲಿದ್ದರು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ಐತಿಹಾಸಿಕ ಕಾನೂನು ಜಾರಿ ಮಾಡುವುದು ಅಷ್ಟೊಂದು ಸುಲಭವಿರಲಿಲ್ಲ. ಸ್ವತಃ ಕಾಂಗ್ರೇಸಿನ ಹಲವಾರು ನಾಯಕರು ಇದನ್ನು ಕಟುವಾಗಿ ಖಂಡಿಸಿದರು. ಕೊನೆಗೆ ನೆಹರು ಮಹಾಶಯರು ಈ ಮಸೂದೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಲೋಕಸಭೆಯಲ್ಲಿ ಮಂಡಿಸಬೇಕಾಯಿತು. ಸಮಸ್ಯೆ ಇದಲ್ಲ. ನೆಹರು ಸರಕಾರ ಕೇವಲ ಹಿಂದೂ ಸಮಾಜಕ್ಕೆ ಮಾತ್ರ ಮೂಗುದಾರ ಹಾಕಲು ಮುಂದಾಗಿತ್ತು. ವಾಸ್ತವದಲ್ಲಿ ಇಂಥ ಕಠಿಣ ಕಾನೂನಿನ ಅಗತ್ಯ ಯಾರಿಗಿತ್ತೋ, ಅವರನ್ನು ಈ ಕಾನೂನಿನಿಂದ ಉಪಾಯವಾಗಿ ಹೊರಗಿಡಲಾಗಿತ್ತು.

ಈ ಬಗ್ಗೆ ಸಂಸತ್ತಿನಲ್ಲಿ ಮಹಾವೀರ್ ತ್ಯಾಗಿಯವರು ಪ್ರಶ್ನಿಸಿದಾಗ ನೆಹರು ನೀಡಿದ ಉತ್ತರ ಅತ್ಯಂತ ವಿಲಕ್ಷಣವಾಗಿತ್ತು. ಏಕರೂಪ ನಾಗರೀಕ ಕಾಯ್ದೆ ಜಾರಿಯಾಗಬೇಕು ಎಂಬ ನಿಮ್ಮ ಬೇಡಿಕೆಗೆ ನನ್ನ ಸಹಮತವಿದೆ. ಆದರೆ ಈ ದೇಶದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಇದಕ್ಕೆ ಮಾನಸಿಕವಾಗಿ ಸಿದ್ಧವಾಗಿಲ್ಲ. ಈಗ ಅವರನ್ನು ಕಾನೂನಿನ ಬಲದಲ್ಲಿ ನಾವು ನಿಯಂತ್ರಿಸಲು ಹೊರಟರೆ ಅವರಿಗೆ ಅಭದ್ರತೆ ಕಾಡುತ್ತದೆ. ನಾವು ಇದಕ್ಕೆ ಅವಕಾಶ ನೀಡಬಾರದು. ಇದು ನೆಹರು ಮಹಾಶಯರ ಅಮೃತ ನುಡಿಗಳು. ಸರಕಾರಗಳು ಅಂದಿನಿಂದ ಇಂದಿನವರೆಗೂ ಇದೇ ಗಿಣಿಪಾಠವನ್ನು ಒಪ್ಪಿಸುತ್ತಾ ಮುಸ್ಲೀಂ ಸಮುದಾಯವನ್ನು ಕಾನೂನಿನ ಹಿಡಿತಕ್ಕೆ ತರುವುದರಿಂದ ತಪ್ಪಿಸಿಕೊಳ್ಳುತ್ತಿವೆ.

neharu

ಉಗ್ರಗಾಮಿಗಳು ಬಾಂಬಿಟ್ಟು ಅಮಾಯಕ ಜನರ ರಕ್ತದ ಓಕುಳಿ ಹರಿಸಿದ ಸಂದರ್ಭದಲ್ಲೂ ಕೆಲವು ನಾಲಾಯಕ್ಕುಗಳು ಇದೇ ಡೈಲಾಗು ಹೊಡೆಯುತ್ತಾರೆ. ಅವರು ಅಭದ್ರತೆಯ ಕಾರಣದಿಂದಾಗಿ ಇದೆಲ್ಲ ಮಾಡುತ್ತಾರೆ ಎಂಬ ಮಾತನ್ನು ಕೆಲವು ಎಬಡಗಳು ಹೇಳಿದ ನೆನಪಿದೆ. ಬಹುಸಂಖ್ಯಾತ ಹಿಂದೂ ಸಮುದಾಯದ ವಿರೋಧ ಕಟ್ಟಿಕೊಂಡು ಹಿಂದೂ ಕೋಡ್ ಬಿಲ್ ಜಾರಿ ಮಾಡಿದ ನೆಹರುವಿಗೆ ಅಲ್ಪಸಂಖ್ಯಾತರ ವಿರೋಧವನ್ನು ಸಹಿಸುವ ತಾಕತ್ತಿರಲಿಲ್ಲವೇ ? ಇತ್ತು. ಆದರೆ ಮುಸಲ್ಮಾನ ಸಮುದಾಯವನ್ನು ಒಂದು ಪ್ರಬಲ ಓಟ್ ಬ್ಯಾಂಕ್ ಮಾಡಿಕೊಂಡು ಭವಿಷ್ಯದಲ್ಲಿ ತನ್ನ ಪಕ್ಷ ಮತ್ತು ತನ್ನ ಕುಟುಂಬವನ್ನು ದಿಲ್ಲಿಯ ಗದ್ದುಗೆಯಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಲು ಈ ಎಲ್ಲಾ ಗಿಮಿಕ್ಕುಗಳು.

ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದಕರು ಎಂದು ಪೋಸು ನೀಡಿದ ಬಿಜೆಪಿಯವರೂ, ಅಧಿಕಾರಕ್ಕೆ ಬಂದು ಈ ವಿಚಾರದಲ್ಲಿ ಮಾಡಿದ್ದು ಮಣ್ಣೂ ಇಲ್ಲ. ಹಿಂದೂ ಸಮಾಜ ಆತ್ಮಾವಲೋಕನ ಮಾಡಬೇಕಿದೆ. ಅವರು ಗುಣಿಸುತ್ತಾ ಹೋಗುತ್ತಿದ್ದಾರೆ. ನಾವು ಕಳೆಯುತ್ತಾ ಬರುತ್ತಿದ್ದೇವೆ. ಹಿಂದೂ ಸಮಾಜ ಕನಿಷ್ಟ ಎರಡು ಮಕ್ಕಳಾದರೂ ಪಡೆಯದೇ ಹೋದರೆ ಈ ದೇಶ ಜಾತ್ಯಾತೀತವಾಗಿ ಉಳಿಯುವುದಿಲ್ಲ. ಜಾತ್ಯಾತೀತತೆಯನ್ನು ಗುತ್ತಿಗೆಗೆ ಪಡೆದುಕೊಂಡ ಎಲ್ಲಾ ಬುದ್ದಿಜೀವಿಗಳು ಮುಸ್ಲಿಂ ಮೊಹಲ್ಲಾಗಳಲ್ಲಿ ಬದುಕುವುದಿಲ್ಲ. ಅವರಿರೋದು ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ.

ಕಾಶ್ಮೀರ, ಮಲಬಾರ್, ಮೀರತ್, ಹೈದರಾಬಾದ್, ಭಟ್ಕಳ ಮೊದಲಾದ ಕಡೆ ಈ ಬುದ್ದಿಜೀವಿಗಳು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಬುರುಡೆ ಬಿಡೋದಿಲ್ಲ. ಬಿಟ್ಟರೆ ಇವರ ಬುರುಡೆ ಒಡೆಯುತ್ತಾರೆ. ಕೇರಳದ ಟಿ ಜೋಸೇಪನಿಗೆ ಆದ ಗತಿ ಇವರಿಗೂ ಅಗುತ್ತದೆ. ಇತಿಹಾಸದ ಪ್ರಖರ ಬೆಳಕಿನಲ್ಲಿ ನಾನು ಕಂಡುಕೊಂಡಿರುವ ಒಂದು ಕಟು ಸತ್ಯ, ಹಿಂದೂ ಸಹಿಷ್ಣು ಆತ ಎಲ್ಲವನ್ನೂ ಕೇಳುವ ಸಹನೆ ಹೊಂದಿರುತ್ತಾನೆ. ಆತ ಎಲ್ಲರ ವಿಚಾರಗಳನ್ನೂ ಸ್ವೀಕರಿಸುತ್ತಾನೆ. ಆದರೆ ಸೆಮೆಟಿಕ್ ಮತಗಳು ಹಾಗಲ್ಲ. ಅವುಗಳು ಇನ್ನೊಬ್ಬನನ್ನು ಸಹಿಸಿಕೊಳ್ಳುವುದಿಲ್ಲ. ಜಾಗತಿಕ ವಿದ್ಯಾಮಾನಗಳು ಮತ್ತು ನೂರಾರು ದೇಶಗಳು ಈ ಮಾತಿಗೆ ನಿಚ್ಚಳ ಉದಾಹರಣೆ. ಜಾತ್ಯಾತೀತತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಮಹಿಳಾ ಹಕ್ಕುಗಳು, ಮಾನವ ಹಕ್ಕುಗಳು, ಪರಧರ್ಮ ಸಹಿಷ್ಣುತೆ ಮೊದಲಾದ ಬುದ್ದಿಜೀವಿಗಳ ಮೆರವಣಿಗೆಯ ಸರಕುಗಳು ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ಟಾರ್ಚು ಹಾಕಿ ಹುಡುಕಿದರೂ ಸಿಗುವುದಿಲ್ಲ. ಈ ಪರಿಸ್ಥಿತಿ ಭಾರತಕ್ಕೆ ಬಾರದಿರಲಿ ಅನ್ನೋದೇ ನನ್ನಂತ ರಾಷ್ಟ್ರವಾದಿಗಳ ಆಸೆ. ಎಷ್ಟೆಂದರೂ ಈ ಬುದ್ದಿಜೀವಿಗಳ ಡೊಂಬರಾಟದಲ್ಲಿ ಸಿಗುವ ಪುಕ್ಕಟೆ ಮನೋರಂಜನೆ ಬೇರೆ ಎಲ್ಲೂ ಸಿಗುವುದಿಲ್ಲ.

Leave a Reply

Your email address will not be published. Required fields are marked *