Realtime blog statisticsweb statistics
udupibits.in
Breaking News
ಉಡುಪಿ: ಶಿರ್ವ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿ ನರಸಿಂಹ ಶೆಟ್ಟಿ ಅಧಿಕಾರ ಸ್ವೀಕಾರ.

‘ಉಜ್ವಾಡು’ ಕೊಂಕಣಿ ಚಲನಚಿತ್ರದ ಡಿವಿಡಿ ಬಿಡುಗಡೆ

ಮಂಜೇಶ್ವರ(ಕಾಸರಗೋಡು): ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ.ಭಾಷಿಗರ ಸಂಸ್ಕೃತಿಯನ್ನು ಉಳಿಸಿಕೊಂಡರೆ ಭಾಷೆಯೂ ಗಟ್ಟಿಯಾಗಿ ಉಳಿಯುತ್ತದೆ ಎಂದು ಕರ್ನಾಟಕ ರಾಜ್ಯ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ವಿಜೇತ ನಟ ಕಾಸರಗೋಡು ಚಿನ್ನಾ ಅಭಿಪ್ರಾಯಪಟ್ಟರು.

ಮಂಜೇಶ್ವರದ ಅನಂತೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಏರ್ಪಡಿಸಿದ ರಾಜ್ಯ ಪ್ರಶಸ್ತಿ ವಿಜೇತ ‘ಉಜ್ವಾಡು’ (ಬೆಳಕು) ಕೊಂಕಣಿ ಚಲನಚಿತ್ರದ ಡಿವಿಡಿ ಲೋಕಾರ್ಪಣೆ ಸಮಾರಂಭದಲ್ಲಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಜಿಎಸ್ ಬಿ ಸಮಾಜದವರ ಸಂಸ್ಕೃತಿಯನ್ನು ಬಿಂಬಿಸುವ ‘ಉಜ್ವಾಡು’ ಹೃದಯಸ್ಪರ್ಶಿಯಾಗಿದೆ. 35 ವರ್ಷಗಳ ಸತತ ಪ್ರಯತ್ನದ ಫಲದಿಂದ ಈ ಚಿತ್ರ ಮೂಡಿಬಂದಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟಿರುವುದು ಹೆಮ್ಮೆ ತಂದಿದೆ ಎಂದು ಚಿನ್ನಾ ಹೇಳಿದರು.

ಅನಂತೇಶ್ವರ ಕ್ಷೇತ್ರದ ಪೇಟೆಯ ಪ್ರತಿನಿಧಿ, ಗರ್ಭಗುಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ವಿಠಲದಾಸ್ ಭಟ್ ಅವರು ‘ಉಜ್ವಾಡು’ ಚಲನಚಿತ್ರದ ಡಿವಿಡಿಯನ್ನು ಬಿಡುಗಡೆಗೊಳಿಸಿ, ಪ್ರಥಮ ಡಿವಿಡಿಯನ್ನು ದೇವಳದ ಮೊಕ್ತೇಸರ ಎಂ.ಉಮೇಶ್ ಕಿಣಿಯವರಿಗೆ ಹಸ್ತಾಂತರಿಸಿದರು.
ಕಾಶೀಮಠದ ಅಧ್ಯಕ್ಷ ಎಂ.ಜೆ ಕಿಣಿ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ವತಿಯಿಂದ ಕಾಸರಗೋಡು ಚಿನ್ನಾರನ್ನು ಸಂತ ಮಂಟಪದಲ್ಲಿ ಸನ್ಮಾನಿಸಲಾಯಿತು. 100 ವರ್ಷಗಳ ಹಿಂದೆ ಮತ್ತು 50 ವರ್ಷಗಳ ಹಿಂದೆ ಹೀಗೆ ಇಬ್ಬರನ್ನು ಸಂತ ಮಂಟಪದಲ್ಲಿ ಗೌರವಿಸಲಾಗಿದೆ. ಇದೀಗ ಮೂರನೆಯವರನ್ನಾಗಿ ಚಿನ್ನಾ ಅವರನ್ನು ಸಂತ ಮಂಟಪದಲ್ಲಿ ಸನ್ಮಾನಿಸಲಾಗಿದೆ ಎಂದು ಕಿಣಿ ತಿಳಿಸಿದರು.

ವೇದಮೂರ್ತಿ ಪುರುಷೋತ್ತಮ ಆಚಾರ್ಯರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು, ವೇದಮೂರ್ತಿ ಸುರೇಶ್ ವಾಮನ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾಸರಗೋಡು ಚಿನ್ನಾರನ್ನು ಅಧ್ಯಾಪಕ ಪುಂಡಲೀಕ ನಾಯಕ್ ಪರಿಚಯಿಸಿದರು. ಮಾಧವ ನಾಯಕ್, ಅನಿಲ್ ಬಾಳಿಗಾ, ಸುಭಾಸ್ ಭಟ್, ಶಶಿಭೂಷಣ್ ಉಡುಪಿ ಮೊದಲಾದವರು ಉಪಸ್ಥಿತರಿದ್ದರು. ದೇವಸ್ಥಾನದ ಉಪಾಧ್ಯಕ್ಷ ಎಂ.ಉಮೇಶ್ ಶೆಣೈ ಸ್ವಾಗತಿಸಿ, ವಂದಿಸಿದರು. ಮಾಧವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಎಂ.ಅನಂತೇಶ್ವರ ಮಲ್ಯರ ನಿರ್ದೇಶನದಲ್ಲಿ ಭಕ್ತಿ ಭಾವಗೀತೆ ಪ್ರಸ್ತುತಗೊಂಡಿತು. ಸ್ಥಳೀಯ ಪ್ರತಿಭೆಗಳಾದ ಮೇಘನಾ ಭಟ್, ತೃಪ್ತಿ ನಾಯಕ್, ಪ್ರಕೃತಿ ನಾಯಕ್, ಪಲ್ಲವಿ ಪ್ರಭು, ಗಣೇಶ್ ಭಕ್ತ ಮೊದಲಾದವರು ಹಾಡಿದರು. ಕೀಬೋರ್ಡ್ ನಲ್ಲಿ ಪ್ರವೀಣ್ ಪ್ರಭು, ರಿದಂ ಪ್ಯಾಡ್ ನಲ್ಲಿ ಎಂ.ಅಖಿಲೇಶ್ ವಾಜಿ ಪ್ರಭು, ತಬ್ಲಾದಲ್ಲಿ ಎಂ.ಕೃಷ್ಣಾನಂದ ಪ್ರಭು ಸಹಕರಿಸಿದರು.

dvd chinna sanmana

Leave a Reply

Your email address will not be published. Required fields are marked *