Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ವಿಜ್ಞಾನ ಮಾದರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಉಪ್ಪಳ(ಕಾಸರಗೋಡು): ಕೊಚ್ಚಿಯ ಭವನ್ಸ್ ವಿದ್ಯಾ ಮಂದಿರದಲ್ಲಿ ಜನವರಿ 29ರಿಂದ 31ರ ವರೆಗೆ ನಡೆದ ಸಿ.ಬಿ.ಎಸ್.ಸಿ ವಲಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ತಯಾರಿಸಿದ ಎರಡೂ ವಿಜ್ಞಾನ ಮಾದರಿಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ.

ಶಾಲಾ ವಿದ್ಯಾರ್ಥಿಗಳಾದ ದಿಗ್ನಾಗ್, ಪ್ರಜ್ವಲ್, ಅಪೂರ್ವ ಹಾಗೂ ಧನ್ಯಲಕ್ಷ್ಮಿ ಇವರು ವಿಜ್ಞಾನ ಮಾದರಿಗಳನ್ನು ತಯಾರಿಸಿದ್ದರು. ಇವರಿಗೆ ಮಾರ್ಗದರ್ಶಕರಾಗಿ ವಿಜ್ಞಾನ ಶಿಕ್ಷಕ ವಾಮನನ್ ಹಾಗೂ ಸಹಾಯಕರಾಗಿ ಶಿಕ್ಷಕಿ ಜ್ಯೋತಿಲಕ್ಷ್ಮಿ ಸಹಕರಿಸಿದ್ದರು. ಪ್ರಶಾಂತಿ ವಿದ್ಯಾಕೇಂದ್ರದ ಆಡಳಿತ ಮಂಡಳಿ ಮತ್ತು ಶಿಕ್ಷಕ-ಶಿಕ್ಷಕಿಯರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *