Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉಪ ಖಜಾನೆ ಅಧಿಕಾರಿಯ ಕಾರಿಗೆ ಬೆಂಕಿ !

ಕಾಸರಗೋಡು: ಕಾಸಗೋಡು ಉಪ ಖಜಾನಾಧಿಕಾರಿ ಎ.ಬಾಲಕೃಷ್ಣನ್ ನಾಯರ್ ಅವರ ಕಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ನಾಶಗೊಳಿಸಲು ಯತ್ನಿಸಿದ ಘಟನೆ ನಡೆದಿದೆ.

ಕಾಸರಗೋಡು ಉಪಖ ಜಾನಾಧಿಕಾರಿಗಳ ಮಾರುತಿ 800 ಕಾರಿಗೆ ಅವರ ಕೋಳಿಯಡ್ಕದಲ್ಲಿರುವ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದಾಗ ಬೆಂಕಿ ಹಚ್ಚಲಾಗಿದೆ. ಇಂದು ನಸುಕಿನ 1.30ರ ವೇಳೆಗೆ ಹೊರಗಡೆಯಿಂದ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಮನೆಯವರು ಹೊರಗಡೆ ಬಂದು ನೋಡಿದಾಗ ಕಾರು ಉರಿಯುತ್ತಿರುವುದು ಕಂಡು ಬಂದಿದೆ.

ಕಾರಿನ ಹಿಂಬಾಗ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಮೂಲತಃ ಕೋಟ್ಟಯಂ ನಿವಾಸಿಯಾದ ಎಂ.ಬಾಲಕೃಷ್ಣನ್ ಅವರು ಊರಿಗೆ ತೆರಳಿದ್ದವರು, ಫೆ.4ರಂದು ರಾತ್ರಿಯಷ್ಟೇ ಕೋಳಿಯಡ್ಕದಲ್ಲಿರುವ ಮನೆಗೆ ಮರಳಿದ್ದರು. ಘಟನೆಗೆ ಕಾರಣ ತಿಳಿದುಬಂದಿಲ್ಲ. ವಿದ್ಯಾನಗರ ಪೊಲೀಸರು ದೂರು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *