Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬೆಂಕಿ ತಗಲಿ ಗೃಹಿಣಿ ಮೃತ್ಯು

ಕುಂಬಳೆ(ಕಾಸರಗೋಡು): ಬೆಂಕಿ ತಗಲಿ ಸುಟ್ಟ ಗಾಯಗಳೊಂದಿಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಕುಂಬಳೆಯ ಗೃಹಿಣಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕುಂಬಳೆ ಬಳಿಯ ಕಂಚಿಕಟ್ಟೆ ನಿವಾಸಿ ಅಚ್ಚುತ ಪೈ ಎಂಬವರ ಪತ್ನಿ ಆಶಾ ಪೈ (51) ಮೃತರಾದವರು. ಜ.22ರಂದು ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಒಲೆಯಿಂದ ಆಕಸ್ಮಿಕವಾಗಿ ಬಟ್ಟೆಗೆ ಬೆಂಕಿ ತಗಲಿ ಆಶಾ ಪೈ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಇವರನ್ನು ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆ.4ರ ರಾತ್ರಿ ಮೃತರಾದರು.

ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *