Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನಕ್ಸಲನೆಂಬ ಶಂಕೆ: ತೋಟದ ಮಾಲೀಕನ ವಿಚಾರಣೆ-ಬಿಡುಗಡೆ !

ಮುಳ್ಳೇರಿಯಾ(ಕಾಸರಗೋಡು): ಆಯುಧದಾರಿಯಾಗಿ ರಾತ್ರಿ ಹೊತ್ತು ತಿರುಗಾಡುತ್ತಿದ್ದ ವ್ಯಕ್ತಿಯನ್ನು ನಕ್ಸಲೀಯನೆಂಬ ಶಂಕೆಯ ಮೇಲೆ ವಶಕ್ಕೆ ಪಡೆದುಕೊಂಡ ಆದೂರು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿ, ಬಳಿಕ ಅಮಾಯಕನೆಂದು ತಿಳಿದು ಬಿಡುಗಡೆಗೊಳಿಸಿದ ವಿದ್ಯಾಮಾನ ನಡೆದು ಆದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಗೆ ಕಾರಣವಾಯಿತು.

ಫೆ. 3ರ ರಾತ್ರಿ ಮುಳ್ಳೇರಿಯಾ ಬಳಿಯ ಗಾಡಿಗುಡ್ಡೆ ಪರಿಸರದಲ್ಲಿ ಆಯುಧದಾರಿಯಾದ ವ್ಯಕ್ತಿಯೊಬ್ಬ ಕಂಡು ಬಂದನೆಂದು ನಾಗರಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದರ ಹಿನ್ನೆಲೆಯಲ್ಲಿ ಪೊಲೀಸರು ನಕ್ಸಲೀಯನಿರಬುದೆಂಬ ಶಂಕೆಯಲ್ಲಿ ರಾತ್ರಿಯಿಡೀ ತೀವ್ರ ಶೋಧ ನಡೆಸಿ ವ್ಯಕ್ತಿ ಪತ್ತೆಯಾಗದೆ ಮರಳಿದ್ದರು.

ಈ ನಡುವೆ, ಫೆ.4ರ ಬೆಳಿಗ್ಗೆ ಆದೂರು ಪೊಲೀಸ್ ಠಾಣೆಗೆ ಆಗಮಿಸಿದ ವ್ಯಕ್ತಿಯೊಬ್ಬರು, ಗಾಡಿಗುಡ್ಡೆಯಲ್ಲಿ ಕಂಡು ಬಂದ ವ್ಯಕ್ತಿ ತಾನೆಂದು ಸ್ವಯಂ ನಿರಾಯುಧನಾಗಿ ಠಾಣೆಗೆ ಬಂದಿದ್ದು, ಪೊಲೀಸರು ಸಂಜೆಯವರೆಗೆ ಅವರನ್ನು ತೀವ್ರ ತಪಾಸಣೆ, ವಿಚಾರಣೆಗ ಒಳಪಡಿಸಿ, ಬಳಿಕ ಇವರು ಅಮಾಯಕನೆಂದು ಖಚಿತವಾದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಿದರು.

ಠಾಣೆಗೆ ಆಗಮಿಸಿದವರು ನಾಟೆಕಲ್ಲಿನ ತೋಟವೊಂದರ ಮಾಲಕರಾಗಿದ್ದರೆಂದೂ, ಇವರ ತೋಟಕ್ಕೆ ಯರೋ ಕಿಚ್ಚಿಟ್ಟು ನಾಶಗೊಳಿಸುವ ಬೆದರಿಕೆ ಹಾಕಿದ್ದ ಕಾರಣ ಕಾವಲು ನಿಂತಿದ್ದುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ತಿಳಿದು ಬಂದಿದೆ. ಈ ನಡುವೆ ಘಟನೆಯ ಬಗ್ಗೆ ಸ್ಪಷ್ಟ ಅರಿವಿದ್ದರೂ ರಾಜಕೀಯ ಬಳಸಿ ಕೆಲವರು ಅಮಾಯಕ ವ್ಯಕ್ತಿಯನ್ನು ಬಲಿತೆಗೆಯಲು ಹವಣಿಸಿದ್ದರೆಂದು ನಾಗರಿಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *