Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕೊರಂಗ್ರಪಾಡಿ: ಅಲೆವೂರು ಶ್ರೀಧರ ಶೆಟ್ಟಿ ಬಣಕ್ಕೆ ಬಹುಮತ, ಬೆಳ್ಳೆ ಮತ್ತು ಉಪ್ಪೂರು: ಕಾಂಗ್ರೆಸ್ ಬೆಂಬಲಿತ ಬಣಕ್ಕೆ ಬಹುಮತ

ಉಡುಪಿ: ಉಡುಪಿ ತಾಲೂಕಿನ ಪ್ರತಿಷ್ಠಿತ ಸಿ.ಎ.ಬ್ಯಾಂಕ್ ಗಳಲ್ಲಿ ಒಂದಾದ ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘ (ನಿ) ದ ಆಡಳಿತ ಮಂಡಳಿಗೆ ಫೆ.7 ರಂದು ಚುನಾವಣೆಯಲ್ಲಿ, ಹಿರಿಯ ಗುತ್ತಿಗೆದಾರರಾದ ಅಲೆವೂರು ಶ್ರೀಧರ ಶೆಟ್ಟಿ ನೇತೃತ್ವದ ಬಣದ 10 ಮಂದಿ ಮತ್ತು ಇನ್ನೊಂದು ಬಣದ ನೇತೃತ್ವ ವಹಿಸಿದ್ದ ಹಿರಿಯ ಗುತ್ತಿಗೆದಾರ ಅಲೆವೂರು ಶೇಖರ ಪೂಜಾರಿ ಜಯ ಸಾಧಿಸಿದ್ದಾರೆ. ಬಹುಮತದ 10 ಸ್ಥಾನ ಪಡೆದ ಬಣದ ಅಲೆವೂರು ಶ್ರೀಧರ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಇಲ್ಲಿ ಎರಡೂ ಬಣದವರೂ ರಾಜಕೀಯ ರಹಿತವಾಗಿ ಚುನಾವಣೆಗೆ ಇಳಿದಿದ್ದರು.

ಲಯನ್ಸ್ ಅಲೆವೂರು ಶ್ರೀಧರ ಶೆಟ್ಟಿ, ಹಿರಿಯ ಉದ್ಯಮಿ ಮತ್ತು ಅಲೆವೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಅಲೆವೂರು ಗಣಪತಿ ಕಿಣಿ, ಅಲೆವೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಹರೀಶ್ ಶೇರಿಗಾರ್, ಕಸ್ಟಮ್ಸ್ ಇಲಾಖೆಯ ನಿವೃತ್ತ ಅಧಿಕಾರಿಯಾಗಿರುವ ಗೋಪಾಲ್ ನಾಯಕ್, ಆಟೋ ನಿರ್ವಾಹಕರ ಸಹಕಾರಿ ಸಂಘದ ಕಾರ್ಯದರ್ಶಿಗಳಾದ ಶ್ರೀಧರ ದೇವಾಡಿಗ, ತಾಲೂಕು ಪಂಚಾಯಿತಿ ಸದಸ್ಯರಾದ ಪ್ರವೀಣ್ ಶೆಟ್ಟಿ, ಚಿದಾನಂದ ಕೋಟ್ಯಾನ್, ಸತೀಶ್ ದೇವಾಡಿಗ, ಸ್ವಾತಿ ಪ್ರಭು, ಸುಮತಿ ಶ್ರೀನಿವಾಸ್ ಹಾಗೂ ಅಲೆವೂರು ಶೇಖರ ಪೂಜಾರಿ ಆಡಳಿತ ಮಂಡಳಿ ಸದಸ್ಯರಾಗಿ ಚುನಾಯಿತರಾದವರು.

ಪರಾಜಯಗೊಂಡವರು: ಹಿರಿಯ ಉದ್ಯಮಿ ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ, ಮಾಜಿ ಉಡುಪಿ ನಗರಸಭೆಯ ಮಾಜಿ ಸದಸ್ಯ ಹಿಲಾರಿ ಅಗಸ್ಟಿನ್ ಜತ್ತನ್ನ ಇಂದಿರಾನಗರ, ನ್ಯಾಯವಾದಿ ದಿನೇಶ್ ಸಿ.ನಾಯಕ್, ರಫೀಕ್ ಇಂದಿರಾನಗರ, ರಾಮಚಂದ್ರ ತಂತ್ರಿ ಬೈಲೂರು, ಸದಾನಂದ ಕಾಂಚನ್ ಚಿಟ್ಪಾಡಿ ಬೈಲೂರು, ಸದಾನಂದ ಶೆಟ್ಟಿ ಕುಕ್ಕಿಕಟ್ಟೆ, ರಮಾದೇವಿ ಇಂದಿರಾನಗರ, ಪ್ರೇಮಾ ಪೂಜಾರ್ತಿ ಅಲೆವೂರು, ಸಚ್ಚಿದಾನಂದ ಶೆಟ್ಟಿ ಮೂಡು ಅಲೆವೂರು ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿದ ಗಣೇಶ್ ದೇವಾಡಿಗ (ಪೊಲ್ಲ), ನಿತ್ಯಾನಂದ ಒಳಕಾಡು ಸಹಿತ ಮೂವರು.

ಬೆಳ್ಳೆ ಮತ್ತು ಉಪ್ಪೂರು: ಕಾಂಗ್ರೆಸ್ ಬೆಂಬಲಿತ ಬಣಕ್ಕೆ ಬಹುಮತ

ಬೆಳ್ಳೆ ಸಹಕಾರಿ ವ್ಯವಸಾಯಿಕ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಶಿವಾಜಿ ಸುವರ್ಣ ಸಹಿತ ಕಾಂಗ್ರೆಸ್ ಬೆಂಬಲಿತ ಬಣದ 6 ಮಂದಿ ಹಾಗೂ ರಾಜೇಂದ್ರ ಶೆಟ್ಟಿ ನೇತೃತ್ವದ ಬಿಜೆಪಿ ಬೆಂಬಲಿತ ಬಣದ 4 ಮಂದಿ ಗೆದ್ದಿದ್ದು, ಬಹುಮತ ಪಡೆದ ಬಣದ ಶಿವಾಜಿ ಸುವರ್ಣ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಇಲ್ಲಿ ಕಾಂಗ್ರೆಸ್ ಬೆಂಬಲಿತ ಬಣದ ಶಿವಾಜಿ ಎಸ್.ಸುವರ್ಣ, ಸುಜಾತಾ ಸುವರ್ಣ, ದಯಾನಂದ, ಜಯ, ಹರೀಶ್ ಶೆಟ್ಟಿ, ಎ.ಜಿ.ಡಿ’ಸೋಜ ಹಾಗೂ ಬಿಜೆಪಿ ಬೆಂಬಲಿತ ಬಣದ ರಾಜೇಂದ್ರ ಶೆಟ್ಟಿ, ಲೀನಾ ನರೋನ್ಹಾ, ಕರುಣಾಕರ ಕರ್ಕೇರ, ಜಾರ್ಜ್ ಜೆರಾಲ್ಡ್ ಫೆರ್ನಾಂಡಿಸ್ ಚುನಾಯಿತರಾಗಿದ್ದಾರೆ.

ಪರಾಜಯಗೊಂಡವರು: ಕಾಂಗ್ರೆಸ್ ಬೆಂಬಲಿತ ಬಣದ ರಿಚ್ಚರ್ಡ್ ರೋಡ್ರಿಗಸ್, ಬೆನೆಡಿಕ್ಟ್ ಫಿಲೋಮಿನಾ ಆಲ್ವ, ಅಮೀರ್, ಸಯ್ಯದ್, ಬಿಜೆಪಿ ಬೆಂಬಲಿತ ಬಣದ ಅಶ್ರಫ್, ರಮೇಶ್ ಕೋಟ್ಯಾನ್, ಸುಧಾಕರ ಪೂಜಾರಿ, ಸುಕುಮಾರ, ಕೃಷ್ಣ ಆಚಾರ್ಯ, ಬೇಬಿ ಜತ್ತನ್ ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿದ ಶ್ರೀಮತಿ ರಂಜನಿ ಎಸ್.ಅಯ್ಯರ್ (ಹೆಗ್ಡೆ).

ಉಪ್ಪೂರು ಸಹಕಾರಿ ವ್ಯವಸಾಯಿಕ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಬಣದ 10 ಮಂದಿ ಹಾಗೂ ಬಿಜೆಪಿ ಬೆಂಬಲಿತ ಬಣದ ಒಬ್ಬರು ಜಯ ಸಾಧಿಸಿದ್ದಾರೆ. ಬಹುಮತ ಪಡೆದ ಕಾಂಗ್ರೆಸ್ ಬೆಂಬಲಿತ ಬಣದ ರಮೇಶ್ ಶೆಟ್ಟಿ ಅದ್ಯಕ್ಷರಾಗುವ ಸಾಧ್ಯತೆ ಇದೆ.

 

 

Leave a Reply

Your email address will not be published. Required fields are marked *