Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಎಕೆಎಂಎಸ್ ಬಸ್- ಟೂರಿಸ್ಟ್ ಮಿನಿ ಬಸ್ ಮಧ್ಯೆ ಅಪಘಾತ: ನಂದಳಿಕೆಯ ಯುವಕ ಮೃತ್ಯು

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಮತ್ತು ಬಲಾಯಿಪಾದೆ ನಡುವೆ ಇಂದು ಪೂರ್ವಾಹ್ನ ಗಂಟೆ 11ರಿಂದ 11.30ರ ನಡುವೆ ಟೂರಿಸ್ಟ್ ಮಿನಿ ಬಸ್ ಮತ್ತು ಖಾಸಗೀ ಬಸ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮಿನಿ ಬಸ್ ಪ್ರಯಾಣಿಕನೋರ್ವ ದಾರುಣವಾಗಿ ಮೃತಪಟ್ಟು ಸುಮಾರು 10 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

miny bus olagade copy

ನಂದಳಿಕೆ ಬಳಿಯ ಗೋಳಿಕಟ್ಟೆ ನಿವಾಸಿ ವೃತ್ತಿಯಲ್ಲಿ ಇಲೆಕ್ಟ್ರಿಶಿಯನ್ ಆಗಿರುವ ಸಂತೋಷ್ ಪೂಜಾರಿ (23) ಮೃತ ದುರ್ದೈವಿ. ಟೂರಿಸ್ಟ್ ಮಿನಿ ಬಸ್ ಚಾಲಕನೂ ಸೇರಿದಂತೆ ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಹೆಚ್ಚಿನವರನ್ನೂ ನಗರದ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದ್ದರೆ, ಒಂದಿಬ್ಬರನ್ನು ಟಿ.ಎ.ಪೈ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ.

ಮಂಗಳೂರಿನಿಂದ ಉಡುಪಿಗೆ ಆಗಮಿಸುತ್ತಿದ್ದ ಕೆಎ 20 ಬಿ 5929 ನಂಬ್ರದ ಎ.ಕೆ.ಎಂ.ಎಸ್. ಬಸ್ ಮತ್ತು ಬೆಳ್ಮಣ್ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಬೆಳ್ಮಣ್ ನ ಶ್ರೀ ದೇವಿ ಟೂರಿಸ್ಟ್ ಮಿನಿ ಬಸ್ ನಡುವೆ ಅಪಘಾತ ಸಂಭವಿಸಿದೆ.

akms copy

ಟೂರಿಸ್ಟ್ ಮಿನಿ ಬಸ್ ಹೊಸದಾಗಿದ್ದು, ಬಾಡಿಗೆಗೆ ಉಪಯೋಗಿಸಲು ಇತ್ತೀಚೆಗಷ್ಟೇ ಖರಿದಿಸಲಾಗಿತ್ತು. ನಂಬರ್ ಪ್ಲೇಟ್ ಇನ್ನಷ್ಟೇ ಆಗಬೇಕಾಗಿದ್ದು, ಪಾಸಿಂಗ್ ಅಷ್ಟೇ ಆಗಿತ್ತು. ಹೊಸದಾಗಿ ವಾಹನ ಖರೀದಿಸಿದ ಹಿನ್ನೆಲೆಯಲ್ಲಿ ಸಂತೋಷಾರ್ಥವಾಗಿ ಮಿನಿ ಬಸ್ ನಲ್ಲಿ ತಮ್ಮೂರಿನ ರಿಕ್ಷಾ ಚಾಲಕರು ಮತ್ತಿತರ ತನ್ನ ಮಿತ್ರರನ್ನು ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡಿಗೆ ಕರೆದೊಯ್ಯುವ ಉದ್ಧೇಶದೊಂದಿಗೆ ಮಿನಿ ಬಸ್ ಮಾಲೀಕ ಬೆಳಗ್ಗೆ ನಂದಳಿಕೆ, ಬೆಳ್ಮಣ್ ನಿಂದ ಹೊರಟಿದ್ದರು. ಮಾರ್ಗ ಮಧ್ಯೆ ಅಪಘಾತ ಘಟಿಸಿದೆ. ಸೈಂಟ್ ಮೇರೀಸ್ ದ್ವೀಪದಲ್ಲಿ ಮಧ್ಯಾಹ್ನದ ಊಟಕ್ಕೆ ಉಪಯೋಗಿಸುವ ಸಲುವಾಗಿ ಚಿಕನ್ ಇತ್ಯಾದಿಗಳನ್ನು ಕೊಂಡೊಯ್ಯಲಾಗುತ್ತಿತ್ತು. ಅಪಘಾತದ ಭೀಕರತೆಗೆ ಸಾಕ್ಷಿಯಾಗಿ ಬಸ್ ನೊಳಗಡೆ ಕೋಳಿ ಮಾಂಸ ಮತ್ತು ಚಪ್ಪಲಿಗಳು ಅಲ್ಲಲ್ಲಿ ಬಿದ್ದುಕೊಂಡಿದೆ.

ಮಿನಿ ಬಸ್ ಚಾಲಕ ಓವರ್ ಟೇಕ್ ಮಾಡಿಕೊಂಡು ಬಂದುದೇ ಅಪಘಾತಕ್ಕೆ ಕಾರಣವೆಂದು ಎಕೆಎಂಎಸ್ ಬಸ್ ನ  ಕಡೆಯವರು ಆರೋಪಿಸಿದರೆ, ಎಕೆಎಂಎಸ್ ಬಸ್ ಚಾಲಕನ ಅಜಾಗರೂಕತೆ, ಅತೀ ವೇಗ ಮತ್ತು ಬೇಜಾವ್ದಾರಿಯ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಟೂರಿಸ್ಟ್ ಮಿನಿ ಬಸ್ ನಲ್ಲಿದ್ದವರು ದುರಿದ್ದಾರೆ.

ಉಡುಪಿ ಸಂಚಾರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಅಪಘಾತದಿಂದಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

Leave a Reply

Your email address will not be published. Required fields are marked *