Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕುಖ್ಯಾತ ಭೂಗತದೊರೆ ಬನ್ನಂಜೆ ರಾಜಾ ಬಂಧನ: ಇಂಟರ್ ಪೋಲ್ ಪೊಲೀಸರಿಂದ ಆಫ್ರೀಕಾದಲ್ಲಿ ಕಾರ್ಯಾಚರಣೆ

ಉಡುಪಿ: ಕುಖ್ಯಾತ ಭೂಗತ ದೊರೆ ಬನ್ನಂಜೆ ರಾಜ ಅಲಿಯಾಸ್ ರಾಜೇಂದ್ರ ಪ್ರಸಾದ್ ನನ್ನು ಇಂಟರ್ ಪೋಲ್ ಪೊಲೀಸರು ಆಫ್ರೀಕಾ ದೇಶದ ಮೊರೊಕ್ಕೊದ ಕಾಸಾಬ್ಲಾಂಕಾ ಎಂಬಲ್ಲಿಂದ ಫೆಬ್ರವರಿ 9ರಂದು ವಶಕ್ಕೆ ಪಡೆದುಕೊಂಡು, ಇಂದು ಬೆಳಗ್ಗೆ 5 ಗಂಟೆಗೆ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

bannanje raja-2

ಉಡುಪಿ ನಗರದ ಬನ್ನಂಜೆ ನಿವಾಸಿಯಾಗಿದ್ದ ಬನ್ನಂಜೆ ರಾಜಾ ಪ್ರಸ್ತುತ ಆಫ್ರೀಕಾದಲ್ಲಿ ನೆಲೆಸಿದ್ದು, ಉಡುಪಿ ಮತ್ತು ಬೆಂಗಳೂರಿನಲ್ಲಿ ಈತನ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

ಕೊಲೆ, ಕೊಲೆ ಯತ್ನ, ಹಫ್ತಾ ವಸೂಲಿಗಾಗಿ ಉದ್ಯಮಿಗಳಿಗೆ ಬೆದರಿಕೆ ಒಡ್ಡುವುದು ಇತ್ಯಾದಿ ಅನೇಕ ಆರೋಪಗಳು ಬನ್ನಂಜೆ ರಾಜಾನ ಮೇಲೆ ಇದ್ದು, ಈ ಹಿನ್ನೆಲೆಯಲ್ಲಿ ಈತನ ವಿರುದ್ಧ ಈ ಇಂಡಿಯಾದ ಪೊಲೀಸರು ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ಆದೇಶ ಹೊರಡಿಸಿತ್ತು.

bannaje raja 3

ಇತ್ತೀಚೆಗೆ ಕರಾವಳಿ ಮೂಲದ ಉದ್ಯಮಿಯೊಬ್ಬರಿಗೆ ಬನ್ನಂಜೆ ರಾಜಾ ಬೆದರಿಕೆ ಹಾಕಿದ ಕಾರಣ, ಆ ಉದ್ಯಮಿಯ ದೂರಿನಂತೆ ಇಂಟತರ್ ಪೋಲ್ ಪೊಲೀಸರು ಬನ್ನಂಜೆ ರಾಜಾನನ್ನು ವಿಚಾರಣೆಗಾಗಿ ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ.

bannaje raja-1

ಎಡಿಜಿಪಿ ದರ್ಜೆಯ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಕರ್ನಾಟಕ ಪೊಲೀಸರ ತಂಡವೊಂದು ಈಗಾಗಲೇ ವಿದೇಶಕ್ಕೆ ತೆರಳಿದ್ದು, ಇಂಟರ್ ಪೋಲ್ ಪೊಲೀಸ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆನ್ನಲಾಗಿದೆ. ಎಲ್ಲಾ ಕೆಲಸ ಕಾರ್ಯಗಳು ಯಶಶ್ವಿಯಾದರೆ, ಮಾರ್ಚ್ ಅಂತ್ಯದೊಳಗೆ ಪೊಲೀಸರು ಬನ್ನಂಜೆ ರಾಜಾನನ್ನು ಕರ್ನಾಟಕಕ್ಕೆ ಕರೆತರಲಿದ್ದಾರೆನ್ನಲಾಗಿದೆ.

ಈ ಸುದ್ದಿ ಇಂದು ಬೆಳಗ್ಗೆಯಿಂದ ಭಾರೀ ದೊಡ್ಡ ಪ್ರಮಾಣದಲ್ಲಿ ಚರ್ಚೆಯಲ್ಲಿದ್ದು, ಪೊಲೀಸರು ಮಾತ್ರ ಈ ಮಾಹಿತಿಯನ್ನು ದೃಢಪಡಿಸುತ್ತಿಲ್ಲ.

bannaje raja

 

Leave a Reply

Your email address will not be published. Required fields are marked *