Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಹಿಳಾ ಜಾಗೃತಿಗೆ ಮನೆಯಂಗಳದಲ್ಲಿ ಮಾಹಿತಿ

ಉಡುಪಿ: ಮಹಿಳೆಯರ ಅಭಿವೃದ್ಧಿ ಮತ್ತು ಮಹಿಳಾ ಮೀಸಲಾತಿಯ ಅರಿವು ಮೂಡಿಸುವ ಮನೆಯಂಗಳದಲ್ಲಿ ಮಾಹಿತಿ ಮಹಿಳಾ ಜಾಗೃತಿ ಕಾರ್ಯಕ್ರಮವು ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನ್ನಪೂರ್ಣ ಹಾಗೂ ಮಮತ ಗಣೇಶ್ ಅವರ ಮನೆಯಂಗಳದಲ್ಲಿ ಇತ್ತೀಚೆಗೆ ನಡೆಯಿತು.

ಮಹಿಳೆಯರು ಜಾಗೃತರಾಗಿ ಒಗ್ಗೂಡಿ ಕಾರ್ಯವೆಸಗಿದರೆ ಆದರ್ಶ ಕುಟುಂಬ, ಸಂಪೂರ್ಣ ಸ್ವಚ್ಛ ಮಾದರಿ ಮನೆ – ಮಾದರಿ ಗ್ರಾಮ ನಿರ್ಮಾಣದ ಸಾಧ್ಯತೆ, ಸ್ವ ಸಹಾಯ ಮತ್ತು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬೀ ಬದುಕಿನ ಗುರಿಸಾಧನೆಗೆ ಇರುವ ಅವಕಾಶಗಳ ಕುರಿತು ಮಹಾತ್ಮ ಗಾಂಧಿ ನರೇಗಾದ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಮಾಹಿತಿ ನೀಡಿ ಸಂವಾದ ನಡೆಸಿದರು.

ಗೃಹ ಉಪಯೋಗಿ ವಸ್ತುಗಳ ತಯಾರಿ ಬಗ್ಗೆ ಜನ ಶಿಕ್ಷಣ ಟ್ರಸ್ಟ್ ನ ನಿರ್ದೇಶಕ ಕೃಷ್ಣ ಮೂಲ್ಯ ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ನಡೆಸಿದರು. ಮಹಿಳಾ ದೌರ್ಜನ್ಯ ತಡೆ, ಮಹಿಳಾ ಸಮಾನತೆ, ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಭಿತ್ತಿ ಪತ್ರಗಳ ಪ್ರದರ್ಶನ ಹಾಗೂ ಮಾಹಿತಿ ಪತ್ರಗಳ ವಿತರಣೆ ಮಾಡಲಾಯಿತು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರಭಾ ಶೆಟ್ಟಿ ಮನೆಯಂಗಳದ ಮಾಹಿತಿ ಕಾರ್ಯಕ್ರಮವನ್ನು ಸುಗುಣ ಪೂಜಾರ್ತಿ ರವರ ಸಹಕಾರದಲ್ಲಿ ಗಂಜಿ ಊಟದ ವ್ಯವಸ್ಥೆಯೊಂದಿಗೆ ವಿನೂತನ ರೀತಿಯಲ್ಲಿ ಸಂಯೋಜಿಸಿದ್ದರು. ಟ್ರಸ್ಟ್ ನ ಸಂಯೋಜಕರಾದ ಚಂಚಲ ಮತ್ತು ರಶ್ಮ ರವರು ಸಹಕರಿಸಿದರು. ಗ್ರಾ.ಪಂ. ಸದಸ್ಯೆಯರಾದ ಜಾನೆಟ್ ರೆಕಾರ್ಡೋ, ಗುಲಾಬಿ, ಮಜೂರು ಗ್ರಾಮ ಪಂಚಾಯತ್ ಸದಸ್ಯೆ, ತಾಲೂಕು ಸುಗ್ರಾಮದ ಕೋಶಾಧಿಕಾರಿ ಸರಸ್ವತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *