Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಮಂಡೆ ಒಂದು ಕಡೆ, ದೇಹ ಒಂದು ಕಡೆ ಹೂತಿದ್ದಾರೆಯೇ ?

# ಚಂದ್ರ ದ್ರೋಣಾ, ಗಧಾತೀರ್ಥ, ಕಾಮನಾತೀರ್ಥ, ಮಾಣಿಕ್ಯಧಾರಾ, ಸೀತಾಳಾದೇವಿ, ಮಲ್ಲಿಕಾರ್ಜುನ ಸ್ವಾಮಿ, ಸಿದ್ದರಮ್ದಾ ಗದ್ದಿಗೆ ಇದೆಲ್ಲದರ ಮದ್ಯೆ ಬಾಬಾಬುಡಾನ್ ಎಂಬ ಮರುಭೂಮಿಯಲ್ಲಿ ಒಂಟೆ ಮಾಂಸ ಮುಕ್ಕುವ ಅರಬ್ಬನ ಹೆಸರು, ಬೇಸರವಾಗುವುದಿಲ್ಲವೇ ?

ಅದೇನೇ ಇರಲಿ, ದತ್ತ ಪೀಠಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಬಸ್ಸಿನ ಕಿಟಕಿಯ ಬಳಿಯಿಂದ ಸಾಗುತ್ತಿದ್ದ ಸಾಲು ಸಾಲು ಬೋರ್ಡುಗಳು ಯಾಕೋ ಮನ್ನಸ್ಸನ್ನು ಯುಗಾಂತರಕ್ಕೆ ಎಳೆದೊಯ್ದದವು. ಕಾಲದ ಮಿತಿಯಲ್ಲಿ ಚಿಂತಿಸುವ ನಾವು ಕೆಲವು ಸಾವಿರ ವರ್ಷಗಳ ಇತಿಹಾಸವನ್ನು ಬರೆದಿಟ್ಟಿರಬಹುದು. ಆದರೆ ಚಂದ್ರದ್ರೋಣದ ಸ್ಮೃತಿಪಟಲದಲ್ಲಿ ಸೃಷ್ಟಿಯ ರಹಸ್ಯ ಅಡಗಿದೆ. ಕೋಟ್ಯಾಂತರ ವರ್ಷದ ಪ್ರಕೃತಿಯ ಪ್ರಯೋಗದ ವರದಿ ಇದೆ ಮತ್ತು ಆ ಪ್ರಯೋಗದಲ್ಲಿ ತನ್ನನ್ನು ತೊಡಗಿಸಿಕೊಂಡ ಹೆಮ್ಮೆಯೂ ಚಂದ್ರದ್ರೋಣ ಪರ್ವತಕ್ಕಿದೆ.

baba budan datta peeta-3

ನಮ್ಮ ಎಣಿಕೆಗೂ ಸಿಗದಷ್ಟು ಸಸ್ಯ ವೈವಿಧ್ಯಗಳು, ನೂರಾರು ರೀತಿಯ ಅಪೂರ್ವ ಖನಿಜಗಳು ಚಂದ್ರದ್ರೋಣನ ಒಡಲಲ್ಲಿದೆ. ಕಾರಣ ಇದೊಂದು ಪ್ರಕೃತಿಯ ನಿತ್ಯ ಚಟುವಟಿಕೆಗಳಿಗೆ ವೇದಿಕೆಯಾದ ಅಪರೂಪದ ಪರ್ವತ. ಪ್ರಕೃತಿಯ ಪವಾಡಗಳು ಮೆರೆದ ಜಾಗಗಳನ್ನು ನಮ್ಮ ಹಿರಿಯರು ಗುರುತಿಸಿ ಅಲ್ಲಿನ ಪರಮ ಚೈತನ್ಯದೊಂದಿಗೆ ಅನುಸಂಧಾನ ಮಾಡಿಕೊಂಡು ಸಾಧನೆಯಲ್ಲಿ ತೊಡಗುತ್ತಿದ್ದರು.

ಅವಧೂತ ಪರಂಪರೆಯ ಪ್ರವರ್ತಕರಾದ ದತ್ತಾತ್ರೇಯ ಮುನಿಗಳು ಚಂದ್ರದ್ರೋಣ ಪರ್ವತದಲ್ಲಿ ತಾಯಿ ಅನಸೂಯ, ತಂದೆ ಅತ್ರಿ ಮುನಿಗಳೊಂದಿಗೆ ಸಾಧನೆಯಲ್ಲಿ ತೊಡಗಿದ್ದರು ಅನ್ನುವ ಬಗ್ಗೆ ಉಲ್ಲೇಖವಿದೆ. ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಇದರ ವಿವರವಿದೆ. ಅಷ್ಟೇ ಅಲ್ಲದೆ, ಅಲ್ಲಿನ ಜೀವ ವೈವಿಧ್ಯಗಳ ಬಗ್ಗೆ ಸಾಕಷ್ಟು ಮಾಹಿತಿಯೂ ಸ್ಕಂದ ಪುರಾಣದಲ್ಲಿದೆ.

ಇತಿಹಾಸದ ಪುಟಗಳನ್ನು ತೆರೆದರೆ ದತ್ತಪೀಠ ಒಂದು ಪ್ರಬಲ ಶಕ್ತಿ ಕೇಂದ್ರವಾಗಿ ರಾಜ ಮಹಾರಾಜರ ಉಂಬಳಿ ಪಡೆದ ಬಗ್ಗೆಯೂ ಮಾಹಿತಿ ಇದೆ. ಮೈಸೂರು ಮಹಾರಾಜರು ಬೆಟ್ಟದ ಕೆಳಗಿನ ಹಲವಾರು ಹಳ್ಳಿಗಳನ್ನು ದತ್ತ ಪೀಠಕ್ಕೆ ಉಂಬಳಿ ಬಿಟ್ಟ ಬಗ್ಗೆ ದಾಖಲೆ ಇದೆ. ಕೆಳದಿ, ಇಕ್ಕೇರಿ ಹಾಗೂ ಕಿತ್ತೂರು ಸಂಸ್ಥಾನಗಳೂ ಈ ಕ್ಷೇತ್ರಕ್ಕೆ ಭಯ ಭಕ್ತಿಯಿಂದ ಹಲವಾರು ಕಾಣಿಕೆಯನ್ನು ಸಮರ್ಪಿಸಿದ ಪುರಾವೆಗಳಿವೆ.

ಈ ಗುಹಾ ದೇವಾಲಯದೊಳಗೆ ಪ್ರಮುಖ ಆಕರ್ಷಣೆಯಾಗಿ ಸಾಕ್ಷಾತ್ ದತ್ತಾತ್ರೇಯ ಸ್ವಾಮಿಗಳ ದಿವ್ಯ ಪಾದುಕೆ ಹಾಗೂ ಬೆಳ್ಳಿಯ ತ್ರಿಶೂಲವಿತ್ತು. ಅಲ್ಲದೆ ನಾಲ್ಕು ವೇದ ಪೀಠಗಳು, ತೀರ್ಥದ ಬಾವಿ ಈ ಗುಹೆಯ ಒಳಗೆ ಇತ್ತು. ಗುಹೆಯನ್ನು ಪ್ರವೇಶಿಸುವ ಮುಖ್ಯ ದ್ವಾರಕ್ಕೆ ಬೆಳ್ಳಿಯ ಹೊದಿಕೆಯನ್ನು ರಾಜರು ನೀಡಿದ್ದರಂತೆ. ನಿತ್ಯ ಪೂಜೆ ಅನುಷ್ಟಾನಗಳಿಂದ ಈ ಕ್ಷೇತ್ರ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿತ್ತು. ಹಾಗಾದರೆ ಈ ನೆಲಕ್ಕೆ ಬ್ಯಾರಿಗಳು ವಕ್ಕರಿಸಿದ್ದು ಯಾವಾಗ ?

೧೭ನೇಶತಮಾನದ ಅಂತ್ಯಕ್ಕೆ ಇಡೀ ದೇಶದಲ್ಲಿ ದೇಶಿ ಸಂಸ್ಥಾನಗಳು ಸೋತು ಬ್ರಿಟೀಷರು ಅಧಿಕಾರಕ್ಕೆ ಬಂದು ಬಿಟ್ಟರು. ಮೆಕ್ಕಾದ ಯೆಮನಿನಿಂದ ಒಬ್ಬ ಸೂಫಿ ಸಂತ ೭ ಕಾಫಿ ಬೀಜಗಳನ್ನು ತೆಗೆದುಕೊಂಡು ಭಾರತಕ್ಕೆ ಬಂದು ಬಿಟ್ಟ. ತನಗೆ ಕಾಫಿ ಬೆಳೆಯಲು ಪ್ರಶಸ್ತವಾದ ಪ್ರದೇಶವನ್ನು ನೀಡಬೇಕೆಂದು ಬ್ರಿಟೀಷರ ಮೊರೆ ಹೋದ. ಆಗ ಬ್ರಿಟೀಷರು ಆತನಿಗೆ ಮೈಸೂರು ಪ್ರಾವಿಯನ್ಸ್ ವ್ಯಾಪ್ತಿಗೆ ಒಳಪಟ್ಟಿದ್ದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯನ್ನು ಸೂಚಿಸಿ ಬಿಡುತ್ತಾರೆ.

ಸಾವಿರಾರು ಎಕರೆಯಲ್ಲಿ ಕಾಫಿಯ ಬೆಳೆ ಬೆಳೆಯಲಾಗುತ್ತದೆ. ಕಾಫಿಯ ಹೆಸರಲ್ಲಿ ಮುಸ್ಲೀಂ ಪ್ರಾಬಲ್ಯ ಆ ಭಾಗದಲ್ಲಿ ಹೆಚ್ಚಾಗಿ ಬಿಟ್ಟಿತು. ಅವರಿಗೆ ಬ್ರಿಟೀಷರ ಪರೋಕ್ಷ ಬೆಂಬಲವೂ ಇತ್ತು. ಯಾಕೆಂದರೆ ಜಗತ್ತಿನ ಕಾಫಿ ಉತ್ಪಾದನೆಯಲ್ಲಿ ಬ್ರಿಟೀಷ್ ಭಾರತದ ಪಾತ್ರವೂ ಗಣನೀಯವಾಗಿತ್ತು. ಕಾಫಿ ತೋಟದ ಕಪಿ ಮುಷ್ಟಿಯಲ್ಲಿ ದತ್ತ ಪೀಠ ಸಿಲುಕಿಕೊಂಡಿತು.

ಸೂಫಿ ಸಂತರ ಹೆಸರಲ್ಲಿ ಪ್ರಾರಂಭದ ದಿನಗಳಲ್ಲಿ ಅವದೂತ ಅನುಯಾಯಿಗಳು ಎಂಬಂತೆ ಪೋಸು ಕೊಟ್ಟು ಮುಸ್ಲೀಮರು ಮೆಲ್ಲನೆ ದತ್ತಪೀಠವನ್ನು ಪ್ರವೇಶಿಸಿದರು. ಆ ಪ್ರದೇಶದಲ್ಲಿ ಮುಸ್ಲೀಂ ಪ್ರಾಬಲ್ಯ ಹೆಚ್ಚಿದ ಹಾಗೆ ಹಿಂದೂಗಳ ಓಡಾಟ ಕಡಿಮೆಯಾಗಿ ಬಿಟ್ಟಿತು. ನೋಡು ನೋಡುತ್ತ್ತಿದ್ದಂತೆ ದತ್ತ ಪೀಠ ಇಸ್ಲಾಮಿಕರಣಗೊಂಡು ಬಿಟ್ಟಿತು. ವೇದ ಪೀಠಗಳಿಗೆ ಹಸಿರು ಬಟ್ಟೆ ಹೊದಿಸಿ ದರ್ಗಾ ಮಾಡಿಬಿಡಲಾಯಿತು.

ಗುಹೆಯ ಆವರಣದಲ್ಲಿ ಇನ್ನೂರಕ್ಕೂ ಅಧಿಕ ದರ್ಗಾಗಳು ತಲೆ ಎತ್ತಿದವು. ಹಿಂದೂ ಅರ್ಚಕರ ಬದಲಿಗೆ ನವಿಲುಗರಿ ಹಿಡಿದ ಮುಲ್ಲಾಗಳು ಪ್ರತ್ಯಕ್ಷರಾಗಿಬಿಟ್ಟರು. ಹಿಂದೂಗಳ ಮೈಮರೆವಿನ ಕಾರಣದಿಂದಾಗಿ ಒಂದು ಕ್ಷೇತ್ರ ಪರಕೀಯರ ಪಲಾಗಿ ಹೋಯಿತು. ಗುಹೆಯ ಒಳಗಿರುವ ದರ್ಗಾವನ್ನು ಬಾಬಾ ಬುಡಾನ್ ದರ್ಗಾ ಎಂದು ಬ್ಯಾರಿಗಳು ತೋರಿಸುತ್ತಾರೆ.

baba budan datta peeta -2

ತಲೆ ಎತ್ತಿ ನಿಲ್ಲುವಷ್ಟೂ ಸ್ಥಳವಿಲ್ಲದ ಗುಹೆಯ ಒಳಗೆ ಒಬ್ಬನನ್ನು ಹೂಳುವ ಅಗತ್ಯವಾದರೂ ಏನಿತ್ತು ? ಅದು ಸಾಧ್ಯವೇ ? ದರ್ಗಾ ಗುಹೆಯ ಮೇಲ್ಚಾವಣಿಗೆ ತಾಗಿಕೊಂಡೇ ಇದೆ. ಹಾಗಾದರೆ ಹೂಳಲು ಹೊಂಡ ಹೇಗೆ ತೆಗೆದರು ? ಬಾಬಾ ಬುಡಾನನ ದರ್ಗಾ ಕೆಳಗೆ ನಾಗೇನಹಳ್ಳಿ ಎಂಬಲ್ಲೂ ಇದೆ. ಹಾಗಾದರೆ ಬಾಬಾ ಬುಡಾನನ ಮಂಡೆ ಒಂದು ಕಡೆ ದೇಹ ಒಂದು ಕಡೆ ಹೂತಿದ್ದಾರೆಯೇ ? ಒಂದು ವೇಳೆ ಇದು ಬ್ಯಾರಿಗಳ ದರ್ಗಾ ಎಂದಾದರೆ, ಇದು ಮುಜುರಾಯಿ ಇಲಾಖೆಗೆ ಹೇಗೆ ಸೇರಿಸಲ್ಪಟ್ಟಿತು ? ರಾಜರ ಕಾಲದಲ್ಲಿದ್ದ ಬೆಳ್ಳಿಯ ದ್ವಾರ ಹಾಗೂ ತ್ರಿಶೂಲಗಳು ಹೇಗೆ ಕಾಣೆಯಾಯಿತು ? ಸೌಹಾರ್ದತೆಯ ಹೆಸರಲ್ಲಿ ನಮ್ಮ ಕ್ಷೇತ್ರವನ್ನೇ ಬಳಸಿ ನಮ್ಮವರ ಮತಾಂತರ ಇಲ್ಲಿ ನಡೆಯುತ್ತಿದ್ದದ್ದು ಸುಳ್ಳೇ ? ದತ್ತಾತ್ರೇಯನ ಬಗ್ಗೆ ನಿಮ್ಮ ಕುರಾನ್, ಹದೀಸ್ ಗಳು ಏನು ಹೇಳುತ್ತವೆ ? ಮೂರ್ತಿ ಪೂಜೆ ಮಾಡುವವರು ಕಾಫಿರರು ಎನ್ನುವ ಬ್ಯಾರಿಗಳಿಗೆ ದತ್ತನ ಪಾದುಕೆ, ಬಾಬಾ ಬುಡಾನನ ದರ್ಗಾ ಇದೆಲ್ಲಾ ಮೂರ್ತಿ ಪೂಜೆಯ ಹಾಗೆ ಕಾಣುತ್ತಿಲ್ಲವೇ ? ಇನ್ನೊಬ್ಬನ ಕ್ಷೇತ್ರವನ್ನು ಅತಿಕ್ರಮಿಸಿ ಕುಳಿತುಕೊಂಡವರೊಂದಿಗೆ ಸೌಹಾರ್ದತೆಯನ್ನು ಮಾಡಿಕೊಳ್ಳಿ ಎನ್ನುವ ಈ ಮನೆ ಹಾಳು ಬುದ್ದಿಜೀವಿಗಳಿಗೇನಾಗಿದೆ ? ಇದೇ ಅನ್ಯಾಯ ಮುಸ್ಲೀಮರೊಂದಿಗ ಹಿಂದೂಗಳು ನಡೆಸಿದ್ದರೆ ಇವರು ಇದೇ ಡೈಲಾಗು ಬಿಡುತ್ತಿದ್ದರೇ ? ಏಕಾಏಕಿ ದತ್ತನ ಅಂಗಳದಲ್ಲಿ ಮುನ್ನೂರು ಘೋರಿಗಳು ಎಲ್ಲಿಂದ ಬಂದವು ? ಎಲ್ಲಾ ಬ್ಯಾರಿಗಳಿಗೆ ಸಾಮೂಹಿಕ ರೋಗ ಬಂದು ಸತ್ತು ಹೋದರೇ ?

ಈ ಹೋರಾಟವನ್ನು ಬಜರಂಗದಳ ಕೈಗೆತ್ತಿಕೊಂಡ ಮೇಲೆ ಹಲವಾರು ಕ್ರಾಂತಿಕಾರಿ ಬದಲಾವಣೆಗಳು ಆಗಿರುವುದು ನಿಜ. ದೇವಾಲಯದ ಆವರಣದಲ್ಲೇ ನಡೆಯುತ್ತಿದ್ದ ಗೋಹತ್ಯೆ ಇದೀಗ ನಿಂತಿದೆ. ದತ್ತನ ಆವರಣದಲ್ಲಿ ಯಜ್ಞ ಯಾಗಾದಿಗಳು ಒಂದು ದಿನದ ಮಟ್ಟಿಗಾದರೂ ನಡೆಯುತ್ತಿದೆ. ಹಿಂದೂ ಕ್ಷೇತ್ರಗಳನ್ನು ಕೆಲವರಾದರೂ ರಕ್ಷಿಸುವ ಪಣತೊಟ್ಟಿದ್ದಾರೆ ಎಂಬ ಭಯ ಆ ಮನೆಹಾಳರಿಗೂ ಅರ್ಥವಾಗತೊಡಗಿದೆ. ಒಟ್ಟಿನಲ್ಲಿ ದತ್ತನ ಹೆಸರಿನಲ್ಲಾದರೂ ಹಿಂದೂ ಸಮಾಜ ಮುಂದೆ ಈ ರೀತಿಯ ಅತಿಕ್ರಮಣಗಳು ನಡೆಯದಂತೆ ಎಚ್ಚೆತ್ತು ಕೊಳ್ಳುತ್ತಿದೆ.

 

baba budan datta peeta-4

ಅದೆಲ್ಲಾ ಒಕೆ, ಆದರೆ ರಾಜಕಾರಣಿಗಳ ನಡೆ ಏನು ? ರಾಜಕೀಯದ ಚಪ್ಪಲಿ ಹೊರಗಿಟ್ಟು ಬನ್ನಿ ಎಂದು ಬೋರ್ಡು ತಗುಲಿಸಿಕೊಂಡಿದ್ದ ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳೆಲ್ಲಾ ದತ್ತನ ಹೆಸರು ಹೇಳಿಕೊಂಡೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ರಾಜಕೀಯದಲ್ಲಿ ಬೇರು ಬಿಟ್ಟು ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಚಿಕೊಂಡು ಕೋಟಿಗಟ್ಟಲೆಯ ಬಂಗಲೆ ಕಟ್ಟಿಕೊಂಡರು. ಆದರೆ ಇವರಿಗೆ ಅಸ್ತಿತ್ವ ದೊರಕಿಸಿಕೊಟ್ಟ ದತ್ತನಿಗೆ ಇವರಿಂದ ದಕ್ಕಿದ್ದೇನು ? ಕೆಲ ವರುಷಗಳ ಹಿಂದೆ ಗುಹೆಯ ಒಂದು ಭಾಗ ಕುಸಿದಾಗ ಒಂದಷ್ಟು ಕಾಮಗಾರಿ ಮಾಡಿದ್ದು ಬಿಟ್ಟರೆ ದತ್ತ ಪೀಠದ ಮುಕ್ತಿಗಾಗಿ ಇವರು ತೆಗೆದುಕೊಂಡ ನಿರ್ಣಯಗಳೇನು ? ಮಾತೆತ್ತಿದರೆ ನ್ಯಾಯಾಲಯದ ಆದೇಶದ ಕಡೆಗೆ ಕೈ ತೋರಿಸುವ ಈ ಪೆಕ್ರಂಡೆಗಳು ನ್ಯಾಯಾಲಯದ ಆದೇಶಕ್ಕೆ ಎಷ್ಟು ನಿಷ್ಟರಾಗಿದ್ದಾರೆ ಅನ್ನುವುದನ್ನ ನಾವು ದಿನನಿತ್ಯ ನೋಡುತ್ತೇವೆ. ತಮ್ಮ ಸಂಬಳ ಏರಿಸುವ ಸಂದರ್ಭ ಬಂದಾಗ, ಪ್ರಜಾಪ್ರತಿನಿಧಿ ಕಾನೂನಿನ ರದ್ದಿಗಾಗಿ, ಜನಲೋಕಪಾಲ್ ವಿರೋಧಿಸಲು ಈ ರಾಜಕಾರಣಿಗಳಲ್ಲಿ ಪಕ್ಷ ಭೇದ ಮರೆತು ಮೂಡುವ ಒಮ್ಮತ ಒಗ್ಗಟ್ಟು ಹಿಂದೂಗಳ ವಿಚಾರ ಬಂದಾಗ ಯಾಕೆ ಮೂಡುವುದಿಲ್ಲ ?

ಸರಕಾರ ರಚನೆಯಾದ ನಂತರ ಮಾಲೆ ಹಾಕಿ ದತ್ತಾತ್ರೇಯನ ದರ್ಶನ ಮಾಡುತ್ತೇನೆ ಎಂದ ಯಡಿಯೂರಪ್ಪ ನಂತರ ಆ ಕಡೆ ತಲೆ ಹಾಕಿ ಮಲಗಲಿಲ್ಲ. ಪರಿಣಾಮವಾಗಿ ಆ ಮನುಷ್ಯ ಈವತ್ತಿನವರೆಗೆ ನೆಮ್ಮದಿಯಿಂದ ಮಲಗಲೇ ಇಲ್ಲ. ಜೈಲಿನಲ್ಲೂ ಮುದ್ದೆ ಮುರಿಯಬೇಕಾಯಿತು. ಪಕ್ಕದಲ್ಲಿದ್ದ ಕಾರ್ಯಕರ್ತನ ಮಾಲೆ ಮತ್ತು ಕೇಸರಿ ಶಾಲನ್ನು ಕೊರಳಿಗೆ ಹಾಕಿ ಮೀಡಿಯಾದವರಿಗೆ ಪೋಸು ಕೊಟ್ಟ ಇನ್ನೊಬ್ಬ ಮಾಜಿ ಮುಖ್ಯಮಂತ್ರಿಯೊಬ್ಬರಿಗೂ ದತ್ತಪೀಠ ಈಗ ನೆನಪಾಗುತ್ತಿಲ್ಲ. ಎಲ್ಲಾ ತೋರಿಕೆಗೆ ಅಷ್ಟೆ.

bsy

ಇನ್ನು ಈ ಹೋರಾಟಕ್ಕೆ ಜೋಡು ಕೋಣಗಳ ಹಾಗೆ ಹೆಗಲು ಕೊಟ್ಟು ಓಟಕ್ಕೆ ಇಳಿದು ಗುರಿಮುಟ್ಟುವ ಮೊದಲೇ ಹಗ್ಗ ಕಳಚಿಕೊಂಡ ಸಿಟಿ ರವಿ ಹಾಗೂ ಸುನೀಲ್ ಕುಮಾರ್ ಈಗ ಕೇವಲ ಕಾಟಾಚಾರಕ್ಕೋ ಎಂಬಂತೆ ದತ್ತ ಪೀಠಕ್ಕೆ ಬಂದು ಹೋಗುತ್ತಿದ್ದಾರೆ.ಅವರಲ್ಲಿ ೧೦ ವರ್ಷದ ಹಿಂದೆ ಇದ್ದ ಆಕ್ರೋಶ, ಭಾಷಣ, ಘೋಷಣೆಗಳು ಈಗ ಎಲ್ಲಿ ಉಡುಗಿ ಹೋಯಿತು ? ಈ ಜೋಡು ಕೋಣಗಳ ಬೆನ್ನು ಹಿಡಿದು ಓಡುತ್ತಿದ್ದ ಕಾರ್ಯಕರ್ತರು ಮಾತ್ರ ಇನ್ನೂ ದತ್ತ ಪೀಠಕ್ಕೆ ಓಡುತ್ತಲೇ ಇದ್ದಾರೆ. ಆದರೆ ಗುರಿ ಯಾವುದು ಅನ್ನೋದೇ ಅವರಿಗೂ ಗೊತ್ತಿಲ್ಲ.

c.t.raviv.sunil kumar

ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೇಸಿಗರಾದರೆ ಬ್ಯಾರಿಗಳ ಓಟು ಪಡೆದೇ ಬೆಳೆದವರು. ಹಾಗಾಗಿ ಅವರಿಗೆ ಗೋರಿ ಕಾಯುವುದು ಅನಿವಾರ್ಯ. ಆದರೆ ಐದು ವರ್ಷ ಕರ್ನಾಟಕವನ್ನು ಆಳಿದ ಬೀಜೇಪಿಗರಿಗೆ ಬ್ಯಾರಿಗಳ ಯಾವ ಹಂಗಿತ್ತು ? ಕಾರ್ಯಕರ್ತರಿಗೆ ಅರ್ಧ ಗಂಟೆಯ ಅವದಿ ಕೊಟ್ಟಿದ್ದರೆ ಇಡೀ ದತ್ತ ಪೀಠದ ಆವರಣದಲ್ಲಿ ಅಕ್ರಮವಾಗಿ ಕಟ್ಟಿರುವ ಅಷ್ಟೂ ಗೋರಿಗಳನ್ನು, ನಮ್ಮನ್ನು ಕೈದಿಗಳ ಹಾಗೆ ನಡೆಸಿಕೊಂಡು ಹೋಗುವ ಅಲ್ಲಿರುವ ಕಬ್ಬಿಣದ ಎಲ್ಲಾ ಗೂಡುಗಳನ್ನು ತೆರವುಗೊಳಿಸಿ ಖಾಲಿ ಮೈದಾನ ಮಾಡಿ ಬಿಡುತ್ತಿದ್ದರು. ಆಗ ಆ ಹೋರಾಟಕ್ಕೆ ಒಂದು ಅರ್ಥವಾದರೂ ಬರುತ್ತಿತ್ತು. ಆದರೆ ಈಗ ನಡೆಯುತ್ತಿರುವುದು ಏನು ?

ನಮಗಿಂತ ಹೆಚ್ಚು ಪೋಲೀಸರನ್ನು ಅಲ್ಲಿ ನೇಮಿಸಿ ಆ ಆಕ್ರಮಣದ ಪಳೆಯುಳಿಕೆಗಳನ್ನು ಕಾಯಲಾಗುತ್ತದೆ. ಗೋರಿ ಯಾವುದು, ಮೋರಿ ಯಾವುದು ಅನ್ನೋದು ತಿಳಿಯದಷ್ಟು ಮಣ್ಣಿನ ದಿಬ್ಬಗಳನ್ನು ರಚನೆ ಮಾಡಲಾಗಿದೆ. ಆ ಎಲ್ಲ ದಿಬ್ಬದ ಮೇಲೆ ಒಬ್ಬೊಬ್ಬ ಪೋಲೀಸನ ಕೈಯ್ಯಲ್ಲಿ ಪಲಾವಿನ ತೊಟ್ಟೆ ಮತ್ತು ಪ್ಯಾಕೇಟು ನೀರು ಹಿಡಿದು ಆ ಯಾರೋ ಗುರುತು ಪರಿಚಯವಿಲ್ಲದ ಬ್ಯಾರಿಯ ಗೋರಿ ಕಾಯಬೇಕಾದ ಸ್ಥಿತಿ. ಪಾಪ, ತನ್ನ ತಂದೆಯ ಗೋರಿಯನ್ನೂ ಆ ಪೋಲೀಸ್ ಅಷ್ಟು ಮುತುವರ್ಜಿಯಿಂದ ನೋಡಿರಲಿಕ್ಕಿಲ್ಲ. ಪಾಪ, ಕೆಲಸ ಮಾಡದೆ ಉಪಾಯವಿಲ್ಲ.

ಇನ್ನು ಅಲ್ಲಿಗೆ ಬರುವ ಕಾರ್ಯಕರ್ತರ ಮನಸ್ಥಿತಿಯನ್ನು ಗಮನಿಸಬೇಕು. ಎಲ್ಲರ ಮನದಲ್ಲೂ ಏನಾದರೂ ಮಾಡಬೇಕು ಎಂಬ ಹಂಬಲ. ಆದರೆ ಮಾಡುವುದೇನು ? ಯಾರಿಗೂ ಗೊತ್ತಿಲ್ಲ. ಮುನ್ನಡೆಸಿಕೊಂಡು ಹೋಗಬೇಕಿದ್ದ ಸೋಕಾಲ್ಡ್ ಲೀಡರ್ ಗಳಿಗೆ ರಾಜಕೀಯದ ರುಚಿ ಹಿಡಿದಾಗಿದೆ. ಅವರು ಸುಮ್ಮನೆ ರಿಸ್ಕ್ ತೆಗೆದುಕೊಳ್ಳೋದಿಕ್ಕೆ ತಯಾರಿಲ್ಲ. ಯಾರಾದರೂ ಹುಮ್ಮಸ್ಸಿನಿಂದ ಮುಂದುವರೆದರೆ ತಲೆ ಮೇಲೆ ಹತ್ತು ಕೇಸು ಹಾಕಿ ಜೀವಮಾನದಲ್ಲಿ ಯಾವತ್ತೂ ಹೋರಾಟದ ಹೆಸರೆತ್ತದಂತೆ ಮಾಡಿ ಬಿಡುತ್ತಾರೆ. ಯಾವ ನಾಯಕನೂ ಹತ್ತಿರ ಸುಳಿಯುವುದಿಲ್ಲ. ಹತಾಶನಾದ ಕಾರ್ಯಕರ್ತ ಕೇವಲ ಬೇಲಿಗೆ ಬಾವುಟ ಕಟ್ಟುವುದು, ಬೋರ್ಡಿಗೆ ಮಸಿ ಬಳಿಯುವುದು, ಗೋರಿಗೆ ಕದ್ದು ಮೂತ್ರ ಹುಯ್ಯುವುದು, ಬಾಯಿಗೆ ಬಂದ ಅಸಭ್ಯ ಘೋಷಣೆ ಕೂಗುವುದು ಹೀಗೆ ಏನೇನೋ ಚೇಷ್ಟೆ ಮಾಡೀ ದತ್ತ ಪೀಠದ ಯಾತ್ರೆಯನ್ನು ಸಾರ್ಥಕ ಮಾಡಿಕೊಂಡು ಬರುತ್ತಾನೆ !
 
ನಮ್ಮ ನಾಯಕರಿಗೂ ಇದೇ ಬೇಕು. ಶಾಶ್ವತ ಪರಿಹಾರ ಕಂಡುಕೊಂಡರೆ ಮುಂದಿನ ಚುನಾವಣೆಗೆ ಕಿವಿಯೂದಲು ಬೇರೆ ವಿಚಾರ ಏನಾದರೂ ಬೇಕಲ್ಲವೆ ? ಹಿಂದೂ ಸಮಾಜದ ಹೋರಾಟ ಈ ಕೀಳು ಮಟ್ಟದ ರಾಜಕೀಯದಿಂದಾಗಿ ದಿಕ್ಕು ತಪ್ಪುತ್ತಿದೆ. ಸಂಘ ನಾಲ್ಕು ಕ್ಶೇತ್ರಗಳ ಮುಕ್ತಿಗಾಗಿ ಹೋರಾಟ ಕೈಗೆತ್ತಿಕೊಡಿತು. ಆದರೆ ೬೭ ವರ್ಷದ ಸ್ವತಂತ್ರ ಭಾರತದಲ್ಲಿ ೮೦ ಕೋಟಿ ಹಿಂದೂಗಳ ಬೇಡಿಕೆ ಇಂದಿಗೂ ಈಡೇರುತ್ತಿಲ್ಲ ಎಂದಾದರೆ ಇದಕ್ಕೆ ಇರುವ ದೊಡ್ಡ ತಡೆ ಯಾವುದು ? ಒಮ್ಮೆ ಯೋಚಿಸಿ…

Leave a Reply

Your email address will not be published. Required fields are marked *