Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಫೆ.23: ಡಾ.ರತ್ನಾಕರ ಮಲ್ಲಮೂಲೆ ಅನುವಾದಿತ ‘ಸುಳಿಗಾಳಿ’ ಬಿಡುಗಡೆ

ಕಾಸರಗೋಡು: ಇಲ್ಲಿನ ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಫೆಬ್ರವರಿ 23ರಂದು ಮಧ್ಯಾಹ್ನ ಗಂಟೆ 1.30ಕ್ಕೆ ‘ಸುಳಿಗಾಳಿ’ ಎಂಬ ಕೃತಿಯ ಬಿಡುಗಡೆ ಸಮಾರಂಭವು ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆಯಲಿದೆ.

ಯು.ಎಸ್.ಎ.ಯ ಸಂಶೋಧನಾ ಸಹಾಯಕರಾದ ಅರುಣ್ ಕುಮಾರ್ ಪಳ್ಳತ್ತಡ್ಕ ಇವರು ಇಂಗ್ಲೀಷಿನಲ್ಲಿ ರಚಿಸಿದ ಕೃತಿಯ ಕನ್ನಡ ಅನುವಾದಿತ ಕೃತಿ ‘ಸುಳಿಗಾಳಿ’ ಬಿಡುಗಡೆಗೊಳ್ಳಲಿದ್ದು, ಇದನ್ನು ಡಾ.ರತ್ನಾಕರ ಮಲ್ಲಮೂಲೆ ಅನುವಾದಿಸಿದ್ದಾರೆ.

ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುಜಾತಾ ಎಸ್. ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಭಾಷಾಂತರಕಾರರಾದ ಎ.ನರಸಿಂಹ ಭಟ್ ಕೃತಿ ಬಿಡುಗಡೆ ಮಾಡಲಿದ್ದಾರೆ. ಕವಿ, ಲೇಖಕ ಸುಂದರ ಬಾರಡ್ಕ ಕೃತಿ ಪರಿಚಯ ಮಾಡಲಿದ್ದಾರೆ. ಕಾಲೇಜು ಪ್ರಾಂಶುಪಾಲರಾದ ಡಾ.ಕೆ.ಪಿ.ಅಜಯ ಕುಮಾರ್ ಉಪಸ್ಥಿತರಿರಲಿದ್ದಾರೆ.

ಮೂಲ ಕೃತಿಕಾರ ಅರುಣ್ ಕುಮಾರ್ ಪಳ್ಳತ್ತಡ್ಕ ಹಾಗೂ ಅನುವಾದಕ ಡಾ.ರತ್ನಾಕರ ಮಲ್ಲಮೂಲೆ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

Leave a Reply

Your email address will not be published. Required fields are marked *