Realtime blog statisticsweb statistics
udupibits.in
Breaking News
ಉಡುಪಿ: ಶಿರ್ವ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿ ನರಸಿಂಹ ಶೆಟ್ಟಿ ಅಧಿಕಾರ ಸ್ವೀಕಾರ.

ವಿಷು ವಿಶೇಷ ಸ್ಪರ್ಧೆ – 2015ಕ್ಕೆ ಹವ್ಯಕ ಬರಹಗಳ ಆಹ್ವಾನ

ಕುಂಬಳೆ(ಕಾಸರಗೋಡು): ”ಹವ್ಯಕ” ಎಂದರೆ ಕನ್ನಡ ನಾಡಿನ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ. ಹವ್ಯಕರ ಆಡುಭಾಷೆ ”ಹವ್ಯಕ ಭಾಷೆ” ಅಥವಾ ಹವಿಗನ್ನಡ. ಮಧ್ಯಕಾಲೀನ ಹಳೆಗನ್ನಡ ಭಾಷೆಗೆ ಹತ್ತಿರವಾದ ಈ ಹವಿಗನ್ನಡ, ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ.

ಆಧುನಿಕ ಯುಗದಲ್ಲಿ ಅಂತತರ್ಜಾಲದಲ್ಲಿ ‘ಒಪ್ಪಣ್ಣನ ನೆರೆಕರೆ’ ಎಂಬ ಹವ್ಯಕ ವೆಬ್ ಸೈಟ್ ಕಳೆದ ಏಳು ವರುಷಗಳಿಂದ ತನ್ನ ಸಾಹಿತ್ಯ ಕೃಷಿಯನ್ನು ಮಾಡುತ್ತಿದೆ. ಸಾಹಿತಿ, ಚಿಂತಕ, ಬರಹಗಾರರ ಬಳಗವು ಈಗ ‘ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.)’ ಎಂದು ನೋಂದಣಿಗೊಂಡ ಸಂಸ್ಥೆಯಾಗಿದೆ.

ಕಳೆದ ಮೂರು ವರ್ಷಗಳಿಂದ ಸೌರ ಯುಗಾದಿಗೆ ಸಂಪೂರ್ಣ ಹವಿಗನ್ನಡದಲ್ಲೇ ಆಯೋಜನೆ ಆದ ವಿಷು ವಿಶೇಷ ಸ್ಪರ್ಧೆಯು ಹವ್ಯಕ ಸಾಹಿತ್ಯ ಲೋಕಕ್ಕೆ ಹೊಸ ಸಂಚಲನ ನೀಡಿದೆ. ಈ ವರ್ಷ ಪ್ರತಿಷ್ಠಾನವು ಯುಗಾದಿಯ ಪರ್ವ ಕಾಲದಲ್ಲಿ ಹೊಸ ಸಾಹಿತಿಗಳ ಅನ್ವೇಷಣೆಗಾಗಿ ”ವಿಷು ವಿಶೇಷ ಸ್ಪರ್ಧೆ – 2015” ಆಯೋಜನೆಗೊಳಿಸಿದೆ.

ವಿಷು ವಿಶೇಷ ಸ್ಪರ್ಧೆ – 2015 ವಿವರಗಳು

1. ಪ್ರಬಂಧ :
ವಿಷಯ : ”ಸಂವಹನಲ್ಲಿ ಆಡುಭಾಷೆಯ ಮಹತ್ವ”
750 ಶಬ್ದಗಳಿಗೆ ಸೀಮಿತ.

2. ಕಥೆ :
ವ್ಯಾಪ್ತಿ: ಸಾಮಾಜಿಕ ಜೀವನ (ವಿಷಯ ಸ್ಪರ್ಧಾರ್ಥಿಗಳ ಆಯ್ಕೆ)
1000 ಶಬ್ದಗಳಿಗೆ ಸೀಮಿತ.

3. ಕವಿತೆ:
ವಿಷಯ: ಸ್ವಚ್ಛ ಭಾರತ

30 ಸಾಲುಗಳಿಗೆ ಮಿತಿಗೊಳಿಸಿ.
ಛಂದೋಬದ್ಧವಾದ ಕವಿತೆಗಳಿಗೆ ಹೆಚ್ಚಿನ ಆದ್ಯತೆ.

4. ಫೋಟೋ ಸ್ಪರ್ಧೆ :
ಭಾರತೀಯರ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಕಂಡ ರಸ ನಿಮಿಷಗಳನ್ನು ಪ್ರತಿನಿಧಿಸುವ ಫೋಟೋಕ್ಕೆ ಹವ್ಯಕ ಭಾಷೆಯಲ್ಲಿ ಸೂಕ್ತ ಶೀರ್ಷಿಕೆಯನ್ನೂ ಕೊಟ್ಟು ಕಳುಹಿಸುವುದು.

ಫೋಟೋದ ಗಾತ್ರ: ಅಂಚೆಯಲ್ಲಿ ಕಳುಹಿಸುವುದಾದರೆ 5*7 ಅಳತೆಯಲ್ಲಿ.
ಮಿಂಚಂಚೆಯಲ್ಲಿ ಕಳುಹಿಸುವುದಾದರೆ ಗರಿಷ್ಠ – 1 ಒಃ

5. ನಗೆಬರಹ :
ಸದಭಿರುಚಿಯ ಲಘು ಬರಹ ಈ ವಿಭಾಗಕ್ಕೆ ಬರಲಿ. (ಅಪಹಾಸ್ಯ, ಅಶ್ಲೀಲತೆಗಳು ಬೇಡ)
500 ಶಬ್ದಗಳಿಗೆ ಮಿತಿಗೊಳಿಸಿ.
ನಿಯಮಗಳು

1. ಎಲ್ಲಾ ಬರಹಗಳೂ ಕಡ್ಡಾಯವಾಗಿ ಹವ್ಯಕಭಾಷೆ- ಕನ್ನಡ ಲಿಪಿಯಲ್ಲಿ ಇರಬೇಕು.
2. ಹವ್ಯಕ ಪರಂಪರೆ – ಸಂಸ್ಕೃತಿಯ ಹಿರಿಮೆಗಳ ಬಿಂಬಿಸುವ ಬರಹಗಳಿಗೆ ಆದ್ಯತೆ.
3. ಸ್ಪರ್ಧೆಗೆ ಬರುವ ಯಾವುದೇ ಬರಹ / ಫೋಟೋ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿರಬಾರದು.
4. ಸ್ಪರ್ಧೆಗೆ ಬಂದ ಎಲ್ಲಾ ಬರಹ / ಫೋಟೋಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ದ್ದೇ ಆಗಿರುತ್ತದೆ.
5. ಸ್ಪರ್ಧೆಯ ವಿಚಾರದಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮ.
6. ಪ್ರತಿ ವಿಭಾಗದಲ್ಲಿಯೂ ಪ್ರಥಮ ಮತ್ತು ದ್ವಿತೀಯ ಎರಡು ಬಹುಮಾನಗಳು ಇರುತ್ತವೆ. ಸೂಕ್ತ ಸಂದರ್ಭದಲ್ಲಿ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಗುವುದು.
7. ಬಹುಮಾನ ವಿಜೇತರ ವಿವರಗಳನ್ನು ವಿಷುವಿನಂದು (14-04-2015ರಂದು) ಪ್ರಕಟಿಸಲಾಗುವುದು.
8. ಹಸ್ತಪ್ರತಿಗಳನ್ನು ಕಳುಹಿಸುವುದಾದರೆ ಕಡ್ಡಾಯವಾಗಿ ಎ4 ಹಾಳೆಯಲ್ಲಿಯೇ ಬರೆದಿರಬೇಕು.
9. ಭಾಗವಹಿಸಲು ಕೊನೆಯ ದಿನಾಂಕ 03-03-2015

ನಿಮ್ಮ ಬರಹ/ಫೋಟೋವನ್ನು ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಗಳನ್ನು, ಈ ವಿಳಾಸಕ್ಕೆ ಕಳುಹಿಸಿಕೊಡಿ :

ಅಂಚೆ ವಿಳಾಸ :
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),
”ಅನುಗ್ರಹ”, ಶಿವಗಿರಿ ನಗರ,
ಕುಳಾಯಿ-ಹೊಸಬೆಟ್ಟು, ಮಂಗಳೂರು. – 575019

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ :
ಮಂಗಳೂರು – 09449806563
ಕಾಸರಗೋಡು – 08547245304
ಬೆಂಗಳೂರು – 09448472292 / 09535354380 / 09448271447.

 

Leave a Reply

Your email address will not be published. Required fields are marked *