Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ವೇದಗಳ ಇತಿಹಾಸ…

# ಈಗ ನಾವು ಏಳನೆಯ ಮನ್ವಂತರವಾದ ವೈವಸ್ವತದಲ್ಲಿದ್ದೇವೆ. ಈ ಮುನ್ನ ಸ್ವಾಯಂಭುವ, ಸ್ವಾರೋಚಿಷ, ಔತ್ತಮೀ, ತಾಮಸ, ರೈವತ ಮತ್ತು ಚಾಕ್ಷುಷ ಎಂಬ ಆರು ಮನ್ವಂತರಗಳು ತೀರಿವೆ. ಇದೀಗ ಏಳನೆಯ ವೈವಸ್ವತ ಮನ್ವಂತರ ನಡೆಯುತ್ತಿದೆ.

71 ಚತುರ್ಯುಗಗಳಿಗೆ ಒಂದು ಮನ್ವಂತರ. 4,32,000 ವರ್ಷಗಳಿಗೆ ಒಂದು ಕಲಿಯುಗ. 8,64,000 ವರ್ಷಗಳಿಗೆ ಒಂದು ದ್ವಾಪರ. 12,96,000 ವರ್ಷಗಳಿಗೊಂದು ತ್ರೇತಾಯುಗ. 17,28,000 ವರ್ಷಗಳಿಗೆ ಒಂದು ಸತ್ಯ ಅಥವಾ ಕೃತಯುಗ. ಈ ನಾಲ್ಕು ಯುಗಗಳ ಸಂಕಲದಿಂದ 43,20,000 ವರ್ಷಗಳಿಗೆ ಒಂದು ಚತುರ್ಯುಗದ ಕಾಲವಾಗುತ್ತದೆ.

ಹೀಗೆ ಎಪ್ಪತ್ತೊಂದು ಚತುರ್ಯುಗ ಎಂದರೆ, 30,67,20,000 ವರ್ಷಗಳ ಒಂದು ಮನ್ವಂತರವಾಗುತ್ತದೆ. ಹೀಗೆ ಆರು ಮನ್ವಂತರಗಳಿಗೆ 1,84,13,20,000 ವರ್ಷಗಳಾಗುತ್ತವೆ. ಈಗ ನಡೆಯುತ್ತಿರುವ ಏಳನೆಯ ಮನ್ವಂತರದಲ್ಲಿಯೂ ಇಪ್ಪತ್ತೇಳು ಚತುರ್ಯುಗಗಳು ಕಳೆದುಹೋಗಿವೆ. ಇಪ್ಪತ್ತೆಂಟನೆಯ ಚತುರ್ಯುಗದಲ್ಲಿ ಪ್ರಾರಂಭದ ಕಲಿಯುಗದ 5080 ವರ್ಷಗಳೂ ಕಳೆದುಹೋಗಿವೆ.

ಹೀಗೆ ವೇದೋತ್ಪತ್ತಿಯಾಗಿ, ಸಂಧಿಕಾಲಗಳೂ ಸೇರಿ 1,96,08,52080 (ಒಂದು ವೃಂದ, ತೊಂಭತ್ತಾರು ಕೋಟಿ, ಎಂಟು ಲಕ್ಷ, ಐವತ್ತೆರಡು ಸಾವಿರದ ಎಂಭತ್ತು) ವರ್ಷಗಳಾದವು.

@ ‘ಋಗ್ವೇದ ದರ್ಶನ’ ಪ್ರಥಮ ಭಾಗದಿಂದ, ಭಾಷ್ಯಕಾರರು: ಶ್ರೀ ಪಂಡಿತ ಸುಧಾಕರ ಚತುರ್ವೇದೀ ಬೆಂಗಳೂರು. ಪ್ರಕಾಶಕರು: ವೈದಿಕ ಸಾಹಿತ್ಯ ಪ್ರಕಾಶನ ಸಮಿತಿ, ಉಡುಪಿ. ಪ್ರಕಟಣೆ: 1980.

Leave a Reply

Your email address will not be published. Required fields are marked *