Realtime blog statisticsweb statistics
udupibits.in
Breaking News
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಮರಣ ?

ಲವ್ ಜಿಹಾದ್ ಇದೆಯೋ ಇಲ್ಲವೋ ಗೊತ್ತಿಲ್ಲ, ಬೆಳಕಿಗೆ ಬರುತ್ತಿರುವ ಪ್ರಕರಣಗಳು ಈ ಚಕ್ರವ್ಯೂಹದ ಅಸ್ತಿತ್ವಕ್ಕೆ ಪಂಜು ಹಿಡಿಯುತ್ತಿವೆ !

# ಕೆಲ ದಿನಗಳ ಹಿಂದಿನ ಘಟನೆ. ಕಚೇರಿಯಲ್ಲಿ ನನ್ನದೇ ಆದ ಒಂದಷ್ಟು ಕೆಲಸದ ಜಂಜಾಟದಲ್ಲಿ ತಲೆಕೆಡಿಸಿಕೊಂಡು ಕುಳಿತಿದ್ದೆ. ನನ್ನನ್ನು ಕಾಣಲು ನಡು ವಯಸ್ಸಿನ ಯುವತಿಯೊಬ್ಬರು ಬಂದಿದ್ದರು. ಕಳೆ ಇಲ್ಲದ ಬಾಡಿ ಹೋದ ಆಕೆಯ ಮುಖದಲ್ಲೂ ಭವಿಷ್ಯದ ಬಗ್ಗೆ ಒಂದಷ್ಟು ನಿರೀಕ್ಷೆಗಳು ಇನ್ನೂ ಉಳಿದುಕೊಂಡಿದ್ದವು.

ನಮಸ್ಕಾರ…, ಕುಳಿತುಕೊಳ್ಳಿ ಎಂದೆ. ಕುಳಿತುಕೊಳ್ಳುತ್ತಳೇ ನನ್ನ ಮಾತಿಗೂ ಕಾಯದೆ ಒಂದೇ ಉಸಿರಿನಲ್ಲಿ ತನ್ನ ಹೆಸರು, ವಿಳಾಸ, ಇತಿಹಾಸ, ಪ್ರಸ್ತುತ ಪರಿಸ್ಥಿತಿ ಎಲ್ಲವನ್ನೂ ಕಕ್ಕಿ ಹಾಕಿ ಶಾಂತಳಾದಳು. ಏನೋ ತಾಳಲಾರದ ಭಾರವೊಂದನ್ನು ತಲೆಯಿಂದ ಇಳಿಸಿದ ನಿರಾಳತೆ ಆಕೆಯ ಮುಖದಲ್ಲಿ ಮೂಡಿತು. ನಾನು ದೃಶ್ಯ ಮಾದ್ಯಮದದಲ್ಲಿರುವುದರಿಂದ ಹೀಗೆ ಅಪರಿಚಿತ ಮುಖಗಳು ದಿಢೀರಾಗಿ ಬಂದು ತಮ್ಮ ಸಂಕಷ್ಟಗಳ ವರದಿ ಒಪ್ಪಿಸಿ ಸರಿದು ಹೋಗುವುದು ಸಾಮಾನ್ಯ. ಆದರೆ ಈ ಕೇಸ್ ತುಂಬಾ ವಿಚಿತ್ರವಿತ್ತು.

ತಾನೆ ತಿಂದ ಆಹಾರ ವಿಷವಾಗಿ, ಒಳಗೆ ಜೀರ್ಣಸಲೂ ಆಗದೆ ಹೊರಗೆ ಕಕ್ಕಲೂ ಆಗದೆ ನಿತ್ಯವೂ ಇಂಚಿಂಚಾಗಿ ಸಾಯುತ್ತಿದ್ದಳು ಆ ಹೆಣ್ಣು ಮಗಳು. ಹೆಸರು ಸವಿತಾ, ಉಡುಪಿ ನಗರ ನಿವಾಸಿ. ವಯಸ್ಸು ಮೂವತ್ತಿರಬಹುದು. ನೋಡಲು ಸುಂದರವಾಗಿದ್ದಳು. ಇಂದಿಗೆ ಹತ್ತು ವರ್ಷ ಕಳೆದಿದೆ. ಸವಿತಾ ಮತ್ತು ಮೊಬೀನ್ ಎಂಬ ಮುಸ್ಲೀಂ ಯುವಕನ ಪ್ರೇಮ ಪ್ರಕರಣ ಇಡೀ ಉಡುಪಿಯನ್ನು ಕಾದು ಕೆಂಪು ಮಾಡಿತ್ತು. ಒಂದೆರಡು ಪ್ರತಿಭಟನೆಗಳೂ ನಡೆದಿದ್ದವು. ಎಲ್ಲಾ ಪತ್ರಿಕೆಗಳು ಇದನ್ನು ಸುದ್ದಿ ಮಾಡಿದ್ದವು. ಕೆಲವು ಪತ್ರಿಕೆಗಳು ಜಾತಿ ಮೀರಿ ನಿಂತ ಮಧುರ ಮನಸ್ಸುಗಳು ಎಂಬ ಶೀರ್ಷಿಕೆಯನ್ನೂ ಕೊಟ್ಟವು. ಏನೇ ಇರಲಿ ಅಂದಿಗೆ ಅದೆಲ್ಲವೂ ಸರಿ ಎಂದು ಕಂಡಿರಬೇಕು.

ಸವಿತಾ ಮತ್ತು ಮೊಬೀನ್ ಇಬ್ಬರೂ ಕೂಡ ಒಂದೇ ಸಂಸ್ಥೆಯಲ್ಲಿ ಕೆಲಸಕ್ಕಿದ್ದರು. ಪರಿಚಯ ಪ್ರೇಮಕ್ಕೆ ತಿರುಗಿತು. ಮದುವೆಯ ಬಂಧನಕ್ಕೆ ಒಳಗಾಗಲು ಇಬ್ಬರೂ ನಿರ್ಧರಿಸಿದರು. ಹೆಣ್ಣಿನ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ ಸವಿತಾ ಲೆಕ್ಕಿಸಲಿಲ್ಲ. ಮೋಬೀನನೇ ನನಗೆ ಸರ್ವಸ್ವ, ಆತನ ತೆಕ್ಕೆಯಲ್ಲೇ ನನಗೆ ಸ್ವರ್ಗಪ್ರಾಪ್ತಿಯಾಗಿದೆ, ಮದುವೆಯಾದರೆ ಅವನನ್ನೇ ಎಂದು ಪಟ್ಟು ಹಿಡಿದಳು.

ಕೆಲಸವಿಲ್ಲದ ಬೀದಿ ಬದಿಯ ವಿತಂಡವಾದಿ ಬದ್ದಿಜೀವಿಗಳೆಲ್ಲಾ ಈ ಅಮರ ಪ್ರೇಮಿಗಳ ಬೆನ್ನಿಗೆ ನಿಂತರು. ಕೆಲವು ಮುಸ್ಲೀಂ ಸಂಘಟನೆಗಳು ಮದುವೆ ಮಾಡಿಯೇ ಸಿದ್ದ ಎಂದು ಬಿಟ್ಟವು. ಇತ್ತ ಹಿಂದೂ ಪರ ಸಂಘಟನೆಗಳು ಸವಿತಾಳ ಹೆತ್ತ ತಾಯಿ ತಂದೆಗಳ ಪರವಾಗಿ ದ್ವನಿ ಎತ್ತಿದವು. ಆದರೆ ಕಾನೂನು ಮಾತ್ರ ವಯಸ್ಸಿನ ಆಧಾರದಲ್ಲಿ ಇಬ್ಬರಿಗೂ ಮದುವೆಯಾಗಲು ಅನುಮತಿ ಮಾಡಿಕೊಟ್ಟಿತು. ಮಸೀದಿಯೊಂದರಲ್ಲಿ ಸವಿತಾಳನ್ನು ರಝಿಯಾ ಎಂದು ನೇಮ್ ಪ್ಲೇಟ್ ಚೇಂಜ್ ಮಾಡಿ ಮೊಬೀನನಿಗೆ ಕಟ್ಟಿಬಿಟ್ಟರು. ಬುದ್ದಿಜೀವಿಗಳು ಅದೇನೋ ಶ್ರೀನಿವಾಸ ಕಲ್ಯಾಣ ನಡೆಸಿದಷ್ಟು ಸಂತಸಪಟ್ಟು ಬಿರಿಯಾನಿ ತಿಂದು ತಮ್ಮ ಬೆನ್ನನ್ನು ತಾವೇ ಚಪ್ಪರಿಸಿ ಮನೆ ಸೇರಿದರು.

love-jihad-1

ಸವಿತಾಳಿಗೂ ಆರಂಭದಲ್ಲಿ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಸುಖದ ಸುಪ್ಪತ್ತಿಗೆ ದೊರಕಿಬಿಟ್ಟಿತು. ನಮ್ಮ ಅಮರ ಪ್ರೇಮ ಕೊನೆಗೂ ಗೆದ್ದು ಬಿಟ್ಟಿತು ಎಂಬ ಭ್ರಮೆ ಆಕೆಯ ತಲೆಗೆ ಅಡರಿತು. ಆದರೆ ನಿಜವಾದ ಬದುಕು ಇನ್ನೂ ಮುಂದೆ ಇತ್ತು. ಅದು ಈ ನತದೃಷ್ಟೆಯನ್ನು ದುರುಗುಟ್ಟಿ ನೋಡುತ್ತಾ ಮರುಕ ಪಡುತ್ತಿತ್ತು. ಸವಿತಾಳನ್ನು ಒಂದೆರಡು ತಿಂಗಳಲ್ಲಿ ಪರಿಪರಿಯಾಗಿ ಮೋಹಿಸಿ ಶೃಂಗಾರದ ರಸಧಾರೆ ಸುರಿಸಿ ಬಸಿರು ಮಾಡಿದ ಮೊಬೀನ ತನ್ನ ಮುದ್ದಿನ ಬೇಗಂಳಿಗೆ ಸಿಹಿ ಮುತ್ತೊಂದನ್ನು ನೀಡಿ ದುಬಾಯಿಗೆ ಹಾರಿಬಿಟ್ಟ. ಸಧ್ಯಕ್ಕೆ ಮಗು ಬೇಡ ಅಬಾರ್ಷನ್ ಮಾಡಿಸಿಕೋ ಎಂದ.

ಸವಿತಾ ಅವನು ಹೇಳಿದಂತೆ ಮಾಡಿಸಿಕೊಂಡಳು. ಮನೆಯಲ್ಲಿ ಮೊಬೀನನ ಅಪ್ಪನ ವಕ್ರದೃಷ್ಟಿ ಸವಿತಾಳ ಮೇಲೆ ಬಿತ್ತು. ಮಗಳ ಸಮಾನಳಾದ ಸೊಸೆಯ ಮೇಲೆ ಮುದುಕ ತನ್ನ ಕೊಳಕು ಕಣ್ಣು ನೆಟ್ಟಿದ್ದ. ಈ ಮುದುಕನ ಕಚ್ಛೆ ಹರುಕ ಬುದ್ದಿಯನ್ನು ಗಂಡನಿಗೆ ಸವಿತಾ ತಿಳಿಸಿದರೂ, ಪರಿಸ್ಥಿತಿ ಬದಲಾಗಲಿಲ್ಲ. ಕೊನೆಗೆ ಮೊಬೀನ ಈಕೆಯ ಒತ್ತಾಯ ತಾಳಲಾರದೆ ಬೇರೆ ಮನೆಯೊಂದನ್ನು ಬಾಡಿಗೆಗೆ ಗೊತ್ತು ಮಾಡಿ ಅದರಲ್ಲಿ ಸವಿತಾಳನ್ನು ಕುಳ್ಳಿರಿಸಿದ.

ಅಲ್ಲಿಂದ ಪ್ರಾರಂಭವಾಯಿತು, ಸವಿತಾಳ ಒಂಟಿ ಬಾಳು. ತನ್ನವರು ಎನಿಸಿಕೊಂಡವರೆಲ್ಲರೂ ಆಕೆಯಿಂದ ದೂರವಾಗಿದ್ದರು. ಗಂಡ ಪರದೇಶದಲ್ಲಿದ್ದ. ತಿಂಗಳ ಖರ್ಚಿಗೆ ಅಷ್ಟೋ ಇಷ್ಟೋ ಕಳುಹಿಸುತ್ತಿದ್ದ. ನಾಲ್ಕೈದು ಬಾರಿ ಮಗು ಪಡೆಯಲು ಆತ ಪ್ರಯತ್ನಿಸಿದರೂ ಸವಿತಾಳ ಆರೋಗ್ಯ ಅದಕ್ಕೆ ಸ್ಪಂದಿಸಲಿಲ್ಲ.

ತಮ್ಮ ಸಂಖ್ಯೆಯನ್ನು ಹೆಚ್ಚಿಸುವುದು ಧಾರ್ಮಿಕ ಕರ್ತವ್ಯವೆಂದು ತಿಳಿದುಕೊಂಡಿರುವ ಮತವೊಂದರಲ್ಲಿ ಹುಟ್ಟಿದ ಮೊಬೀನ್ ಮಕ್ಕಳಿಲ್ಲದೆ ಹೇಗೆ ತಾನೆ ಇರಬಲ್ಲ?. ಅದಕ್ಕಾಗಿ ಆತ ಹೊಸದೊಂದು ನಿಖಾ ಮಾಡಿಕೊಂಡ. ಆದರೆ, ಈ ವಿಚಾರ ಸವಿತಾಳಿಗೆ ತಡವಾಗಿ ತಿಳಿಯಿತು. ಎದೆ ಒಡೆದು ಹೋದಂತಾಯ್ತು. ಸಮಾಜದ ದೃಷ್ಟಿಯಲ್ಲಿ ಸವಿತಾ ಈಗ ಮೊಬೀನನ ರಖವಾಲಿ ಅಷ್ಟೆ. ಹೆತ್ತವರ ಹೊಟ್ಟೆಗೆ ಒದ್ದ ಪಾಪಕ್ಕೆ ಈ ಪ್ರಾಯಶ್ಚಿತ್ತವೋ ಗೊತ್ತಿಲ್ಲ. ಈಕೆಗೆ ಮೊಬೀನನ ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗುವಂತಿಲ್ಲ. ಯಾಕೆಂದರೆ ಆಕೆ ದಬಕ್ಕನೆ ಹಾರಿದ ಇಸ್ಲಾಮಿನ ಕೂಪದಲ್ಲಿ ಬಹುಪತ್ನಿತ್ವ ಸಂವಿಧಾನ ಬಧ್ಧವಾಗಿದೆ. ಇಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ?

ಮೊಬಿನನ ಮದುವೆಯಲ್ಲಿ ಬಿರಿಯಾನಿ ಮುಕ್ಕಿ ಹೋದ ಬುದ್ದಿ ಜೀವಿಗಳು, ಹಿಂದೂ ಹುಡುಗಿಯೊಬ್ಬಳಿಗೆ ಬುರ್ಖಾ ತೊಡಿಸಿ ಪುರುಷತ್ವ ಮೆರೆದ ಮುಸ್ಲೀಂ ಸಂಘಟನೆಯ ಪುಂಡರು ಒಬ್ಬರದ್ದೂ ಈಗ ಪತ್ತೆ ಇಲ್ಲ. ಅಕೆಯ ಕತೆ ಕೇಳಿ ಕಣ್ಣು ತುಂಬಿ ಬಂತು. ಆದರೆ ಒಳಗೊಳಗೆ ಹತಾಷೆಯೊಂದು ಮಿಂಚಿ ಮರೆಯಾಯಿತು. ಲವ್ ಜಿಹಾದ್…, ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಬೆಳಕಿಗೆ ಬರುತ್ತಿರುವ ಒಂದೊಂದೇ ಪ್ರಕರಣಗಳು ಈ ಚಕ್ರವ್ಯೂಹದ ಅಸ್ತಿತ್ವಕ್ಕೆ ಪಂಜು ಹಿಡಿಯುತ್ತಿವೆ. ನಂಬದೆ ಬೇರೆ ವಿಧಿ ಇಲ್ಲ. ಈ ವ್ಯವಸ್ಥಿತ ಜಾಲಕ್ಕೆ ಇಂದು ಕೂಡ ಮಿಕಗಳು ಬೀಳುತ್ತಲೇ ಇವೆಯಲ್ಲವೇ ? ಈ ವ್ಯವಸ್ಥಿತ ಜಾಲಕ್ಕೆ ನೀವು ಲವ್ ಜಿಹಾದ್ ಎನ್ನಿ, ರೋಮಿಯೋ ಜಿಹಾದ್ ಎನ್ನಿ ಅಥವಾ ಇನ್ನೇನೋ ಹೆಸರಿಡಿ. ಆದರೆ ಇದರ ಉದ್ಧೇಶ ಮಾತ್ರ ಸ್ಪಷ್ಟವಿದೆ. ಅದು ಇಸ್ಲಾಮಿನ ಸಂಖ್ಯಾಭಿವೃದ್ಧಿ…

love jihad-2

ದೇವಗಿರಿಗೆ ದಾಳಿ ಮಾಡಿದ ಖಿಲ್ಜಿಯಿಂದ ಪ್ರಾರಂಭಗೊಂಡು, ಪಟೇಲರ ಉರಿಗಣ್ಣಿಗೆ ಹಿಡಿ ಬೂದಿಯಾದ ಕಾಸೀಂ ರಿಝ್ವಿಯ ಹುಚ್ಚು ಸೇನೆಯ ರಝಾಕರರವರೆಗೆ ಎಲ್ಲರೂ ದಕ್ಷಿಣ ಭಾರತದಲ್ಲಿ ಇಸ್ಲಾಮಿನ ಪ್ರಭುತ್ವ ಸ್ಥಾಪಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಇಸ್ಲಾಮಿಕರಣಕ್ಕೆ ತೀವ್ರವಾಗಿ ಪ್ರಯತ್ನಿಸಿ ಮಾರಣ ಹೋಮ ನಡೆಸಿದ ಎರಡು ಪ್ರಮುಖ ಮುಸ್ಲೀಂ ಸಂಘಟನೆಗಳೆಂದರೆ ಒಂದು ಮುಸ್ಲೀಂ ಲೀಗ್, ಮತ್ತೊಂದು ಮಜ್ಲೀಸ್ ಇತ್ತೇತುಲ್ಲಾಹ್ ಮುಸಲ್ಮೀನ್…

ಈ ಸಂಘಟನೆಗಳು ಇಡೀ ಭಾರತದಲ್ಲಿ ರಕ್ತದ ಹೊಳೆಯನ್ನೇ ಹರಿಸಿದವು. ಸಾವಿರಾರು ಅಮಾಯಕರ ಮಾರಣ ಹೋಮ ನಡೆಸಿದವು. ದುರಂತವೆಂದರೆ, ಈ ಎರಡೂ ಸಂಘಟನೆಗಳು ಸ್ವಾತಂತ್ರ ಬರುತ್ತಿದ್ದಂತೆ ತಮ್ಮ ಹೆಸರನ್ನು ಬದಲಾಯಿಸಿಕೊಂಡು ದಕ್ಷಿಣ ಭಾರತದಲ್ಲಿ ಬಲಗೊಂಡವು. 1923ರಲ್ಲಿ ಕೇರಳದಲ್ಲಿ ಮೋಪ್ಲಾದಂಗೆ ನಡೆಯಿತು. 80 ಸಾವಿರ ಹಿಂದೂ ಯುವತಿಯರನ್ನು ಬಹಿರಂಗವಾಗಿ ಏಲಾಮ್ ಹಾಕಿ ಅವರನ್ನು ಮಾಪಿಳ್ಳೆಗಳಿಗೆ ಕೊಟ್ಟು ಬಲಾತ್ಕಾರದ ಮದುವೆ ಮಾಡಿಸಲಾಯಿತು. ಇದು ಟಿಪ್ಪು ಸುಲ್ತಾನ ಸತ್ತ ನಂತರ ದಕ್ಷಿಣದಲ್ಲಿ ನಡೆದ ದೊಡ್ಡ ಪ್ರಮಾಣದ ಮತಾಂತರ.

ಮಲಬಾರ ಪ್ರಾಂತ್ಯದಲ್ಲಿ ಈ ಪ್ರಕ್ರಿಯೆಗೆ ವೇಗ ದೊರಕಿ, ಇಡೀ ಮಲಬಾರ್ ಎಂಬ ಒಂದು ಜಿಲ್ಲೆಯೇ ಸಂಪೂರ್ಣವಾಗಿ ಮುಸ್ಲೀಮರ ಹಿಡಿತಕ್ಕೆ ಜಾರಿ ಹೋಯಿತು. ಈ ಮಲಬಾರ್ ತನ್ನ ಒಡಲಲ್ಲಿ ನೂರಾರು ಸಂಘಟನೆಗಳನ್ನು ಹುಟ್ಟಿ ಬೆಳೆಸಿದೆ. ಇದರ ಬಾಹುಗಳು ಕೊಡಗಿನ ಮೂಲಕ ಘಟ್ಟದ ಮೇಲೂ ಮತ್ತು ಮಂಗಳೂರು, ಉಡುಪಿಯ ಮೂಲಕ ಭಟ್ಕಳದ ಕಡೆಗೂ ಚಾಚಿದೆ. ಮಂಗಳೂರು ಮತ್ತು ಉಡುಪಿಯಲ್ಲಿ ಎಲ್ಲಾದರೂ ಹಿಂದೂ ಹೆಣ್ಣು ಮಕ್ಕಳು ಕಾಣೆಯಾದರೆ ನಮ್ಮ ಪೊಲೀಸ್ ಅಧಿಕಾರಿಗಳು ಮೊದಲು ಕರೆ ಮಾಡುವುದು ಕಾಸರಗೋಡು ಚೆಕ್ ಪೋಸ್ಟಿಗೆ. ಏಕೆಂದರೆ ಕೇರಳದ ಪೊನ್ನಾಣಿ ಎಂಬ ಮತಾಂತರ ಕೇಂದ್ರ ಈಗಾಗಲೇ ಲಕ್ಷಾಂತರ ಹಿಂದೂ ಹೆಣ್ಣು ಮಕ್ಕಳನ್ನು ಕಪ್ಪು ಬಟ್ಟೆ ಸುತ್ತಿ ಕತ್ತಲೆಗೆ ದೂಡಿದೆ.

ಕಾರ್ಕಳ ತಾಲೂಕಿನ ಅಜೆಕಾರು ಎಂಬಲ್ಲಿಂದ ಬಂಟ ಸಮುದಾಯಕ್ಕೆ ಸೇರಿದ ಹೆಣ್ಣು ಮಗಳೊಬ್ಬಳನ್ನು ಪುತ್ತೂರಿನ ಯುವಕನೊಬ್ಬ ಅಪಹರಿಸಿದ. ಕೊನೆಗೆ ಆಕೆ ಪತ್ತೆಯಾಗಿದ್ದು ಕಾಸರಗೋಡಿನಲ್ಲಿ. ಕೇರಳ ಸಾಗುವ ದಾರಿಯಲ್ಲೇ ಸಿಕ್ಕಿ ಬಿದ್ದ. ಆಕೆಯನ್ನು ಮತ್ತೆ ತಂದು ಮನೆಗೆ ಬಿಡಲಾಯಿತು. ಈ ರೀತಿಯ ಅಪಹರಣ ಪ್ರಕರಣಗಳು ನನಗೆ ತಿಳಿದಿರುವಂತೆ ಕಳೆದ ಆಗಸ್ತ್ ತಿಂಗಳಿನಿಂದ ಅಕ್ಟೋಬರ್ವರೆಗೆ ಸುಮಾರು 18 ನಡೆದಿದೆ.

ಇದು ಕೇವಲ ಪ್ರೀತಿ, ಪ್ರೇಮಕ್ಕಷ್ಟೇ ಸೀಮಿತವಾಗಿದ್ದರೆ ಹಿಂದೂ ಹುಡುಗರಿಗೂ ಮುಸ್ಲೀಂ ಹುಡಿಗಿಯರೊಂದಿಗೆ ಮದುವೆಯಾಗಬೇಕಿತ್ತು. ಅದೇನು ಮುಸ್ಲೀಂ ಹುಡುಗರಿಗೆ ಮಾತ್ರ ಪರ ಧರ್ಮದ ಹೆಣ್ಣಿನ ಮೇಲೆ ಪ್ರೀತಿ ಉಕ್ಕಿ ಹರಿಯುವುದೇ ? ಹಿಂದೂ ಹುಡುಗರಿಗೆ ಪ್ರೀತಿ ಹುಟ್ಟುವುದೇ ಇಲ್ಲವೇ ? ಅಥವಾ ಮುಸ್ಲೀಂ ಯುವತಿಯರು ಪ್ರೀತಿಸದಷ್ಟು ಕುರೂಪಿಗಳೇ ? ಇದ್ಯಾವುದೂ ಅಲ್ಲ. ಇದರ ಹಿಂದೆ ಒಂದು ವ್ಯವಸ್ಥಿತ ಸಂಚು ಇದೆ.

ಅದೊಂದು ಸಂಚು ಎಂಬ ವಿಚಾರ ಎಲ್ಲರಿಗೂ ತಿಳಿದಿದ್ದರೂ ಯಾರೂ ಏನೂ ಮಾಡುವಂತಿಲ್ಲ. ಯಾರಾದರೂ ಈ ನೆಲದ ಕಾನೂನಿನ ಮೊರೆ ಹೋದರೆ ಅವರಿಗೆ ಅಲ್ಲಿ ಮಣ್ಣೂ ದಕ್ಕದು. ಏಕೆಂದರೆ ಕಾನೂನಿನಲ್ಲಿ ಯುವಕ ಯುವತಿಯರು ಇಬ್ಬರೂ ಪ್ರಾಪ್ತ ವಯಸ್ಸಿಗೆ ಬಂದಿದ್ದರೆ ಅವರಿಗೆ ಅವರ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಮುಕ್ತ ಅವಕಾಶವಿದೆ. ತಂದೆ ತಾಯಂದಿರಿಗೆ ಕಾನೂನು ಯಾವುದೇ ನೆರವು ನೀಡದು. ಇನ್ನು ಜಾತ್ಯಾತೀತವಾದದ ಅಮಲಿನಲ್ಲಿ ತೇಲುತ್ತಿರುವ ನಮ್ಮ ದೇಶದಲ್ಲಿ ಹಿಂದೂ ಹೆಣ್ಣು ಮಗಳೊಬ್ಬಳನ್ನು ಮುಸ್ಲೀಂ ಹುಡುಗ ಹಾರಿಸಿಕೊಂಡು ಹೋಗಿ ಬುರ್ಖಾ ತೊಡಿಸಿ ತಂದರೆ ಅವನನ್ನು ಬೆಂಬಲಿಸಲು ನೂರಾರು ಬುದ್ದಿಜೀವಿಗಳು ಮುಂದೆ ಬರುತ್ತಾರೆ.

ಆ ಮುಸ್ಲೀಂ ಯುವಕನನ್ನು ಕಂಬಳದಲ್ಲಿ ಗೆದ್ದು ಬಂದ ಕೋಣನ ಬೆನ್ನು ಚಪ್ಪರಿಸಿದಂತೆ ಚಪ್ಪರಿಸಿ ಅಭಿನಂದಿಸುತ್ತಾರೆ. ನೀನು ಎರಡು ಧರ್ಮಗಳ ಮದ್ಯೆ ಹೊಸ ಕೊಂಡಿಯೊಂದನ್ನು ಬೆಸೆದೆ ಎಂದು ಹಾಡಿ ಹೊಗಳುತ್ತಾರೆ. ಆದರೆ ಇದೇ ಕೆಲಸವನ್ನು ಒಬ್ಬ ಹಿಂದೂ ಹುಡುಗ ಮಾಡಿದರೆ ಆತನ ಬೆನ್ನಿಗೆ ಈ ಯಾವ ಪ್ರಗತಿಪರನೂ ನಿಲ್ಲುವುದಿಲ್ಲ. ಹಿಂದೂ ಹುಡುಗನ ಪರವಾಗಿ ನಿಂತರೆ ಮತ್ತೆ ನಿಲ್ಲಲಾಗದಂತೆ ಮುಸ್ಲೀಂ ಗೂಂಡಾಗಳು ಇವರ ಸೊಂಟ ಮುರಿಯುತ್ತಾರೆ.

ಕೇರಳದ ಕೋಝಿಕ್ಕೋಡ್ನಲ್ಲಿ ಗೌತಮ್ ಎಂಬ ಹಿಂದೂ ಯುವಕನೊಬ್ಬ ಮುಸ್ಲೀಂ ಯುವತಿಯೊಬ್ಬಳನ್ನು ಮದುವೆಯಾದ. ಮದುವೆಯಾದ ದಿನವೇ ಕೆಲವು ಮತಾಂಧ ಮುಸ್ಲೀಮರು ಆತನ ಮನೆಯನ್ನು ದ್ವಂಸ ಮಾಡಿ ಬಿಟ್ಟರು. ಅಷ್ಟೇ ಅಲ್ಲ ಕಳೆದ ಒಂದು ತಿಂಗಳಿನಿಂದ ನವ ದಂಪತಿಗಳು ಮನೆಯಿಂದ ಹೊರಬಂದಿಲ್ಲ. ಯಾವುದೇ ಕ್ಷಣದಲ್ಲಿ ಇವರು ನಡು ಬೀದಿಯಲ್ಲಿ ಹೆಣವಾಗಬಹುದು. ಗೌತಮ್ ಕೈ ಹಿಡಿದ ಆ ಮುಸ್ಲಿಂ ಹುಡುಗಿ ಕಾಸರಗೋಡಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು ತನ್ನ ಶಿಕ್ಷಣವನ್ನೇ ಪ್ರಾಣಭಯದಿಂದ ನಿಲ್ಲಿಸಿ ಬಿಟ್ಟಿದ್ದಾಳೆ. ಇದು ಮುಸ್ಲಿಂ ಹೆಣ್ಣೊಬ್ಬಳನ್ನು ಹಿಂದೂ ಹುಡುಗ ಮದುವೆಯಾದಾಗ ನಿರ್ಮಾಣವಾಗುವ ಸ್ಥಿತಿ.

ಪುತ್ತೂರಿನ ಮೋಹಿತ್ ಎಂಬ ವಿಧ್ಯಾರ್ಥಿಯ ನಿಗೂಢ ಸಾವಿನ ಹಿಂದೆ ಕೂಡ ಇಸ್ಲಾಮಿಕ್ ಮೂಲಭೂತವಾದಿಗಳ ಕೈವಾಡವಿದೆ ಎನ್ನಲಾಗಿದೆ. ಉಡುಪಿಯಲ್ಲಿ ಕೆಲ ಸಮಯದ ಹಿಂದೆ ಯಾಸೀನ್ ಪ್ರಕರಣ ಬಹಳಷ್ಟು ಸುದ್ದಿ ಮಾಡಿತ್ತು. ನಗರದ ಪ್ರತಿಷ್ಟಿತ ಕಾಲೇಜಿನ ಬಾಲಕಿಯೊಬ್ಬಳನ್ನು ಪ್ರೀತಿಯ ಹೆಸರಲ್ಲಿ ಮೋಸ ಮಾಡಿ ಆಕೆಯ ಕೆಲವು ಅಶ್ಲೀಲ ಚಿತ್ರಗಳನ್ನು ಸೆರೆ ಹಿಡಿದಿದ್ದ. ಕೊನೆಗೊಂದು ದಿನ ಯಾಸೀರ್ ತನ್ನ ಬಳಿ ಇದ್ದ ಎಲ್ಲಾ ಚಿತ್ರಗಳನ್ನು ಅಂತರ್ಜಾಲಕ್ಕೆ ಅಪ್ಲೋಡ್ ಮಾಡಿದ. ಇನ್ನೂ ಸರಿಯಾಗಿ ಜೀವನವನ್ನು ಅರಿಯದ ಪುಟ್ಟ ಬಾಲಕಿಯೊಬ್ಬಳು ಈ ಯಾಸೀರ್ನಿಂದಾಗಿ ಮನೆ ಮೂಲೆ ಸೇರುವಂತಾಯಿತು. ಆಕೆಯೊಂದಿಗೆ ಯಾಸೀರ್ ನಡೆಸಿದ ಕಾಮಕೇಳಿಯ ಹಸಿಬಿಸಿ ಚಿತ್ರಗಳನ್ನು ಲಕ್ಷಾಂತರ ಜನ ವೀಕ್ಷಿಸಿದರು. ಆ ಯಾಸೀರ್ನನ್ನು ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

ಈ ಘಟನೆಗೆ ಪೂರಕವಾಗಿ ಇಲಿಯಾಸ್ ಎಂಬ ಮತ್ತೊಬ್ಬನ ಕರ್ಮಕಾಂಡವೂ ಬಯಲಿಗೆ ಬಂತು. ಫೇಸ್ ಬುಕ್ ಮಾದ್ಯಮದಿಂದ ಉಡುಪಿಯ ಬಂಟ ಯುವತಿಯೊಬ್ಬಳಿಗೆ ಬಲೆ ಬೀಸಿದ ಈ ಬೂಪ ಆಕೆಗೆ ತನ್ನನ್ನು ರಾಹುಲ್ ಶೆಟ್ಟಿ ಎಂದು ಪರಿಚಯಿಸಿಕೊಂಡಿದ್ದ. ಜಾತಿಯವನಿರಬೇಕೆಂದು ನಂಬಿದ ಆ ಯುವತಿ ಈತನೊಂದಿಗೆ ಸಲುಗೆಯಿಂದಲೇ ಮಾತನಾಡುತ್ತಿದ್ದಳು. ಮಾತು ಪ್ರೇಮಕ್ಕೆ ತಲುಪಿತು. ಐಷಾರಾಮಿ ಜೀವನ ನಡೆಸುತ್ತಿದ್ದ ಇಲಿಯಾಸ್ ಹಣಕ್ಕಾಗಿ ಈ ಯುವತಿಯ ಬಂಗಾರವನ್ನೆಲ್ಲಾ ಅಡವಿಟ್ಟು ಸಾಲಮಾಡಿದ್ದ. ಕೊನೆಗೆ ಆತನನ್ನು ಮಣಿಪಾಲ ಠಾಣೆಗೆ ಹಿಡಿದೊಪ್ಪಿಸಲಾಯಿತು. ವಿಚಾರಣೆ ನಡೆಸುವ ಸಂದರ್ಭದಲ್ಲಿ ಹಲವಾರು ಭಯಾನಕ ಸಂಗತಿಗಳು ಹೊರಬಿದ್ದವು. ಇಲಿಯಾಸನ ಬಲೆಗೆ ಬಿದ್ದಿದ್ದು ಇವಳೊಬ್ಬಳೇ ಯುವತಿಯಲ್ಲ. ಇಂತ 27 ಹಿಂದೂ ಯುವತಿಯರ ಸಂಪರ್ಕವಿತ್ತು ಆತನಿಗೆ. ಎಲ್ಲರನ್ನೂ ಬಳಸಿಕೊಂಡು ಮಜಾ ಮಾಡುತ್ತಿದ್ದ ಇಲಿಯಾಸ. ಇದು ಈ ಮೂಲಭೂತವಾದಿ ಯುವಕರ ಅಸಲಿ ಚೆಹರೆ. 27 ಯುವತಿಯರಲ್ಲಿ ಒಬ್ಬಳೂ ಕೂಡ ಮುಸ್ಲಿಂ ಯುವತಿ ಇರಲಿಲ್ಲ. ಪಟ್ಟಿ ಮಾಡುತ್ತಾ ಸಾಗಿದರೆ ಈ ರೀತಿಯ ನೂರಾರು ಘಟನೆಗಳನ್ನು ಉಲ್ಲೇಖಿಸಬಹುದು.

ಧರ್ಮ ಪಂಥ ಜಾತಿ ಮತ ರಾಜಕೀಯ ಹಿತಾಸಕ್ತಿ ಈ ಎಲ್ಲಾ ದೃಷ್ಟಿಕೋನಗಳನ್ನು ಹೊರತುಪಡಿಸಿ ಕೇವಲ ವಾಸ್ತವದ ನೆಲೆಗಟ್ಟಿನಲ್ಲಿ ವಿಮರ್ಶಿಸಿದಾಗ ಕೂಡ ಈ ಪ್ರಕರಣಗಳ ಹಿಂದೆ ಒಂದು ವ್ಯವಸ್ಥಿತ ಜಾಲ ಕಾರ್ಯಾಚರಿಸುತ್ತಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಹಿಂದೂ ಪರ ಸಂಘಟನೆಗಳನ್ನು ನಖಶಿಖಾಂತ ದೂಷಿಸುವ, ಅಲ್ಪಸಂಖ್ಯಾತರ ಪರವಾಗಿ ಗಟ್ಟಿಯಾಗಿ ದ್ವನಿ ಎತ್ತುವ ಎಡ ಪಕ್ಷಗಳು ಕೂಡ ಈ ಲವ್ ಜಿಹಾದಿನ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾರೆ. ಸ್ವತಃ ಕೇರಳದ ನಿಕಟಪೂರ್ವ ಮುಖ್ಯಮಂತ್ರಿ ಅಚ್ಯುತಾನಂದನ್ ಅವರೇ ಈ ಜಾಲದ ಕರಾಳ ಮುಖವನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಕೇರಳ ಹೈಕೋರ್ಟ್ ಲವ್ ಜಿಹಾದ್ ಜಾಲದ ಬಗ್ಗೆ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ಗೃಹ ಇಲಾಖೆಗೆ ಆಜ್ಞೆ ಮಾಡಿದೆ. ಕೇರಳದ ಪೊನ್ನಾಣಿಯೇ ಈ ಇಡೀ ಜಾಲದ ರಿಮೋಟ್ ಕಂಟ್ರೋಲ್. ಭಟ್ಕಳದಿಂದ ಪ್ರಾರಂಭಿಸಿ ಕಾಸರಗೋಡಿನ ತನಕ ಕರ್ನಾಟಕದ ಕಡಲ ತಡಿಯಲ್ಲಿ ಎಲ್ಲೆಲ್ಲಿ ಹಿಂದೂ ಹೆಣ್ಣು ಮಕ್ಕಳ ಅಪಹರಣವಾಗಿದೆಯೋ, ಅದೆಲ್ಲದರ ತುದಿ ಸಿಗೋದು ನಿಮಗೆ ಪೊನ್ನಾಣಿಯಲ್ಲೇ.

love jihad-3

ಇಲ್ಲೊಂದು ಹಳೆಯ ಕಾಲದ ಮಸೀದಿ ಇದೆ. ಹಿಂದೂ ವಾಸ್ತು ಶೈಲಿಯ ಈ ಮಸೀದಿ ಚೇರ ಪೆರುಮಾಳ್ ಎಂಬ ಹಿಂದೂ ರಾಜನ ಅರಮನೆಯಾಗಿತ್ತು ಎನ್ನಲಾಗಿದೆ. ರಾಜನನ್ನು ಮತಾಂತರಗೊಳಿಸಿ ಅರಮನೆಯನ್ನು ಮಸೀದಿ ಮಾಡಲಾಯಿತು ಎನ್ನುತ್ತದೆ ಇತಿಹಾಸ. ಈ ಮಸೀದಿಯ ಒಂದು ಭಾಗದಲ್ಲಿ ಇಸ್ಲಾಮಿಕ್ ರಿಸರ್ಚ್ ಸೆಂಟರ್ ಎಂಬ ವಿಭಾಗವೊಂದು ನಡೆಯುತ್ತಿದೆ. ಇಲ್ಲಿ ನಡೆಯುತ್ತೆ, ಭಾರಿ ಪ್ರಮಾಣದ ಮತಾಂತರ. ಹಿಂದೂ ಯುವತಿಯರನ್ನು ನೇರವಾಗಿ ಇಲ್ಲಿಗೆ ಕರೆ ತರಲಾಗುತ್ತದೆ. ನಂತರ ಅವರಿಗೆ ಇಸ್ಲಾಮಿಕ್ ಮತ ಪುಸ್ತಕಗಳನ್ನು ಓದಲು ನೀಡಲಾಗುತ್ತದೆ. ನಾನಾ ರೀತಿಯಲ್ಲಿ ಮತಿಬ್ರಾಂತಿಗೆ ಒಳಪಡಿಸಿ ಅವರಿಗೆ ಹಿಂದೂ ಧರ್ಮದ ಮೇಲೆ, ಆಕೆಯ ತಾಯಿ ತಂದೆಯ ಮೇಲೆ ಅಸಹ್ಯ ಭಾವನೆ ಹುಟ್ಟುವಂತೆ ಮಾಡಲಾಗುತ್ತದೆ. ಒಮ್ಮೆ ಅಲ್ಲಿ ಮತಾಂತರಕ್ಕೆ ಒಳಗಾದರೆ ಮತ್ತೆ ಅವರನ್ನು ಸರಿದಾರಿಗೆ ತರಲು ತುಂಬಾ ಕಷ್ಟವಿದೆ.

ವಿಚಿತ್ರ ರೀತಿಯ ಸಮ್ಮೋಹಿನಿಗೆ ಆ ಯುವತಿಯರನ್ನು ಒಳಪಡಿಸಲಾಗುತ್ತದೆ. ನಂತರ ಅಲ್ಲೇ ಅವರ ನಿಖಾ ಮುಸ್ಲಿಂ ಯುವಕನೊಂದಿಗೆ ನಡೆದು ಹೋಗುತ್ತದೆ. ಪೊನ್ನಾಣಿಯಲ್ಲಿ ಮದುವೆಯಾಗಿ ಬಂದ ನೂರಾರು ಜೋಡಿಗಳು ನಮ್ಮ ಜಿಲ್ಲೆಯಲ್ಲಿದ್ದಾರೆ. ಈ ರೀತಿಯ ಇಸ್ಲಾಮಿಕ್ ರಿಸರ್ಚ್ ಸೆಂಟರ್ಗಳು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ತಲೆ ಎತ್ತುತ್ತಿವೆ. ಇವರ ಸಂಪರ್ಕಕ್ಕೆ ಬಂದ ಮುಸ್ಲಿಂ ಯುವಕರ ತಲೆಗೆ ಧರ್ಮದ ಅಮಲನ್ನು ತುಂಬಿಸಿ ಹಿಂದೂ ಹೆಣ್ಣು ಮಕ್ಕಳನ್ನು ಪ್ರೇಮದ ಬಲೆಗೆ ಬೀಳಿಸುವಂತೆ ಪ್ರಚೋದಿಸಲಾಗುತ್ತದೆ. ಈ ಕಚಡಾ ಕೆಲಸಕ್ಕೆ ಧರ್ಮದ ಲೇಪವನ್ನು ಹಚ್ಚಿ ಇದು ಇಸ್ಲಾಮಿನ ಉಳಿವಿಗಾಗಿ ನಡೆಸುವ ಪವಿತ್ರ ಕಾರ್ಯವೆಂದು ಭೊದಿಸಲಾಗುತ್ತದೆ. ಇಲ್ಲಿಂದ ಹೊರಬೀಳುವ ಯುವಕರಿಗೆ ಹಣಕಾಸಿನ ನೆರವು, ಕಾನೂನಿನ ನೆರವು, ರಾಜಕೀಯ ನೆರವು, ಎಲ್ಲವನ್ನೂ ನೀಡಲು ಒಂದಷ್ಟು ಜನರನ್ನು ಗೊತ್ತು ಮಾಡಲಾಗಿರುತ್ತದೆ.

ಮೊಬೈಲ್ ಶಾಪ್ಗಳನ್ನು, ಸೈಬರ್ ಸೆಂಟರ್ಗಳನ್ನು, ಕಾಲೇಜ್ ಕ್ಯಾಂಪಸ್ಗಳನ್ನು ಈ ಜಾಲ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ. ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರ ಕೇರಳ ಮತ್ತು ಕರಾವಳಿ ಕರ್ನಾಟಕದಲ್ಲಿ ಸುಮಾರು 23 ಸಂಘಟನೆಗಳು ಹಗಲು ರಾತ್ರಿ ಎನ್ನದೆ ಈ ಮನೆಹಾಳ ಕೆಲಸದಲ್ಲಿ ತೊಡಗಿವೆ. ಇವರ ಅಂತಿಮ ಉದ್ದೇಶವೊಂದೇ, ಅದು ಭಾರತದ ಇಸ್ಲಾಮಿಕರಣ…

ಶೋಭಾ ಕರಂದ್ಲಾಜೆಯವರು ಸಚಿವೆಯಾಗಿದ್ದಾಗ ಗೃಹ ಇಲಾಖೆಯ ಅಧಿಕಾರಿಗಳು ಕೊಟ್ಟ ಅಂಕಿ ಅಂಶದ ಪ್ರಕಾರ, ಕನರ್ಾಟಕದಿಂದ ನಾಪತ್ತೆಯಾಗಿರುವ ಒಟ್ಟು ಯುವತಿಯರ ಸಂಖ್ಯೆ 23000 ! ಅದೂ ಕೇವಲ ಐದು ವರ್ಷದಲ್ಲಿ. ಬೆಚ್ಚಿ ಬೀಳಬೇಡಿ…, ಇದು ವಾಸ್ತವ. ಮಾನವ ಕಳ್ಳಸಾಗಣಿಕೆ, ವೇಶ್ಯಾವಾಟಿಕೆ, ಭಯೋತ್ಪಾದನಾ ಜಾಲ, ಖೋಟಾನೋಟು ಜಾಲ ಎಲ್ಲವೂ ಒಂದಕ್ಕೊಂದು ಇಂಟರ್ ಕನೆಕ್ಟೆಡ್ ಆಗಿದೆ. ಇವೆಲ್ಲಾ ಘಟನೆಗಳು ಓಟಿಗಾಗಿ ತಾಯಂದಿರನ್ನೂ ಹರಾಜು ಹಾಕುವ ಕೆಲವು ಹೊಲಸು ರಾಜಕಾರಣಿಗಳ ಕೃಪಾಕಟಾಕ್ಷದಿಂದ ನಡೆಯುತ್ತಿದೆ.

ಗೃಹ ಇಲಾಖೆ, ಪೊಲೀಸ್ ವ್ಯವಸ್ಥೆ ಎಲ್ಲವೂ ಇವರ ಕೈಗೊಂಬೆಗಳಷ್ಟೆ. ಸಾಮಾನ್ಯನೊಬ್ಬ ಈ ಬ್ರಹ್ಮಾಂಡ ಜಾಲದ ಮುಂದೆ ಅತ್ಯಂತ ಅಸಹಾಯಕ. ಇನ್ನು ಜಾತಿ, ಮತ, ಧರ್ಮ, ಪ್ರಾಂತದ ಹೆಸರಲ್ಲಿ ಪ್ರೀತಿಸುವ ಮನಸ್ಸುಗಳನ್ನು ಬೇರೆ ಮಾಡೋದು, ಸಂದೇಹಿಸೋದು ಯಾವ ನ್ಯಾಯ ಎಂದು ಕೆಲವರು ಕೇಳಬಹುದು. ಆದರೆ ಧರ್ಮಕ್ಕಿಂತ ಪ್ರೀತಿಯೇ ಮೇಲಾದರೆ ಪ್ರತಿ ಬಾರಿಯೂ ಹಿಂದೂ ಯುವತಿಯ ಮತಾಂತರವೇ ಏಕೆ ನಡೆಯುತ್ತದೆ ? ಆಕೆ ಯಾಕಾಗಿ ತನ್ನ ಪೂರ್ವಜರ ನಂಬಿಕೆಗೆಳ ಕತ್ತು ಹಿಸುಕಿ ಕೊಲ್ಲಬೇಕಾಗುತ್ತದೆ ? ಆಕೆಗೆ ಆಕೆಯ ಧರ್ಮದಲ್ಲೇ ಬದುಕುವ ಹಕ್ಕನ್ನು ಯಾಕೆ ನೀಡಲಾಗುತ್ತಿಲ್ಲ. ಅಥವಾ ಮುಸ್ಲಿಂ ಹುಡುಗನಿಗೆ ಹಿಂದೂ ಯುವತಿಯೊಬ್ಬಳ ಮೇಲೆ ಅಷ್ಟೊಂದು ಆಳವಾದ ಪ್ರೀತಿ ಮೂಡಿದ್ದರೆ ಆತನಿಗೆ ತನ್ನ ಮತವನ್ನು ತ್ಯಜಿಸಿ ಹಿಂದು ಆಗಲು ಅಭ್ಯಂತರವೇನು ? ಹಲವಾರು ಘಟನೆಗಳಲ್ಲಿ ಹಿಂದೂ ಯುವಕರು ಮುಸ್ಲಿಂ ಯುವತಿಯನ್ನು ಪ್ರೀತಿಸಿ ಕೊನೆಗೆ ಪ್ರಿಯತಮೆಗಾಗಿ ಧರ್ಮವನ್ನು ತ್ಯಜಿಸಿ ಸುನ್ನತ್ ಮಾಡಿಕೊಂಡ ಉದಾಹರಣೆ ಇದೆ. ಹೆಣ್ಣಾದರೂ ಹಿಂದೂಗಳೇ ಮತಾಂತರವಾಗಬೇಕು. ಗಂಡಾದರೂ ಹಿಂದೂಗಳೇ ಮತಾಂತರಗೊಳ್ಳಬೇಕು. ಎಂಥಾ ದಯಾನೀಯ ಸ್ಥಿತಿ ! ಆದರೂ ನಾವು ಈ ದೇಶದಲ್ಲಿ ಬಹುಸಂಖ್ಯಾತರು !

ಸನಾತನ ಸಂಸ್ಕೃತಿಯ ಅಸ್ತಿತ್ವಕ್ಕೆ ಕೊಳ್ಳಿ ಇಡುತ್ತಿರುವ ಈ ಭಯಾನಕ ಸಮಸ್ಯೆಯಿಂದ ನುಣುಚಿಕೊಳ್ಳಲು ಒಂದೇ ಪರಿಹಾರ. ನಮ್ಮ ಸಹೋದರಿಯರನ್ನು ಜಾಗೃತಗೊಳಿಸುವುದು. ಇದನ್ನಲ್ಲದೆ ನಾವು ಮತ್ತೇನು ಮಾಡಲು ಸಾಧ್ಯವಿಲ್ಲ. ಬಡ ಹಿಂದೂ ಯುವತಿಯರಿಗೆ ದುಬಾರಿ ಡ್ರೆಸ್ಸು, ಮೊಬೈಲುಗಳ ಆಮಿಷ ತೋರಿಸಿ ಈ ಮತಾಂಧರು ಬಲೆಗೆ ಕೆಡಹುತ್ತಿದ್ದಾರೆ. ಕಲ್ಯಾಣಪುರದಲ್ಲಿ ಈ ರೀತಿಯ ಘಟನೆಯೊಂದು ಬೆಳಕಿಗೆ ಬಂದಿತ್ತು. ಹಿಂದೂಗಳ ಬಡತನವೇ ಈ ಕೀಚಕರಿಗೆ ಬಂಡವಾಳವಾಗಿದೆ. ಸದೃಡ ಹಿಂದೂ ಸಮಾಜ ನಮ್ಮ ಮದ್ಯೆ ಇರುವ ಆರ್ಥಿಕವಾಗಿ ಹಿಂದುಳಿದಿರುವ ಧರ್ಮ ಬಾಂಧವರ ಕಡೆಗೆ ದೃಷ್ಟಿ ಹರಿಸಬೇಕು. ವರದಕ್ಷಿಣೆಯ ಹಾವಳಿಯಿಂದಾಗಿ ವಯಸ್ಸು 30 ದಾಟಿದರೂ ಮದುವೆಯಾಗದೆ ಮನೆಯ ಮೂಲೆ ಸೇರಿರುವ ಲಕ್ಷಾಂತರ ಯುವತಿಯರಿದ್ದಾರೆ. ಅವರಿಗೂ ಎಲ್ಲರಂತೆ ಆಸೆ ಆಕಾಂಕ್ಷೆಗಳಿವೆ. ಯಾರಾದರೂ ಅವರಿಗೆ ಮದುವೆಯಾಗುವ ಕನಸು ತೋರಿಸಿದರೆ ತಕ್ಷಣವೇ ಅವರು ನಂಬಿ ಬಿಡುತ್ತಾರೆ. ಇಂಥ ಬಡಪಾಯಿ ಯುವತಿಯರೇ ಹೆಚ್ಚು ಮೋಸಕ್ಕೊಳಗಾಗುತ್ತಿರುವವರು. ಭಾಷಣ, ಘೋಷಣೆಗಳಿಂದ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತೆ, ಬಿಟ್ಟರೆ ಪರಿಹಾರವಂತೂ ಅಗುವುದಿಲ್ಲ. ಇದರ ಪರಿಹಾರಕ್ಕಾಗಿ ಒಂದು ಯೋಜನಾಬಧ್ಧವಾದ ಪ್ರಭುದ್ದ ಹೆಜ್ಜೆಯನ್ನು ಹಿಂದೂ ಸಮಾಜ ಮುಂದಿಡಬೇಕು.

Leave a Reply

Your email address will not be published. Required fields are marked *