Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ತಂದೆ-ತಾಯಿ ಕೊಲೆಗೈದ ಮಗನಿಗೆ ಜೀವಾವಧಿ ಶಿಕ್ಷೆ

ಉಡುಪಿ: ಕೇಳಿದಾಗಲೆಲ್ಲಾ ಕರ್ಚಿಗೆ ಹಣ ಕೊಡುವುದಿಲ್ಲ ಎಂಬ ಕಾರಣಕ್ಕೆ ತಂದೆ – ತಾಯಿಯನ್ನು ಮರದ ಸೋಂಟೆಯಿಂದ ತಲಗೆ ಹೊಡೆದು ಕೊಲೆಗೈದ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕುಂದಾಪುರದ ಉಡುಪಿ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಆರ್,ವಿ.ಪಾಟೀಲ್ ಅವರು ಇಂದು ತೀರ್ಪು ನೀಡಿದ್ದಾರೆ.

ಉಡುಪಿ ತಾಲೂಕು ಹೆಗ್ಗುಂಜೆ ಗ್ರಾಮದ ಹೊನ್ನೆಕುಂಬ್ರಿ ನಿವಾಸಿ ಸುರೇಶ್ ಮರಕಾಲ (29) ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. ಈತ 2012ರ ಮೇ 3ರಂದು ಮುಂಜಾನೆ ಗಂಟೆ 3.30ಕ್ಕೆ ತಂದೆ ಹೆರಿಯ ಮರಕಾಲ (65) ಹಾಗೂ ತಾಯಿ ಬಾಬಿ ಮರಕಾಲ್ತಿ (60) ಇವರನ್ನು ಕೊಲೆಗೈದಿದ್ದನು.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಅಮದಿನ ಸಬ್ ಇನ್ಸ್ ಪೆಕ್ಟರ್ ಗಿರೀಶ್ ಕುಮಾರ್ ಆರೋಪಿ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿದ್ದರು. ಸರ್ಕಲ್ ಇನ್ಸ್ ಪೆಕ್ಟರ್ ಡಿ.ಟಿ.ಪ್ರಭು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕರಾದ ಟಿ.ಎಸ್. ಜಿತೂರಿ, ಎಂ. ಮಂಜುನಾಥ ಭಟ್ ಪನ್ನೆ ಹಾಗೂ ಪ್ರಧಾನ ಸರಕಾರಿ ಅಭಿಯೋಜಕರಾದ ಪುಷ್ಪರಾಜ ಕೆ. ಅಡ್ಯಂತಾಯ ಇವರು ವಾದಿಸಿದ್ದರು.

Leave a Reply

Your email address will not be published. Required fields are marked *