Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ

ಉಡುಪಿ: ಭಾರತ ಮತ್ತು ಬಾಂಗ್ಲಾ ದೇಶದ ನಡುವೆ ಇಂದು ನಡೆಯುತ್ತಿದ್ದ ಕ್ರಿಕೆಟ್ ಮ್ಯಾಚ್ ಗೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಉಡುಪಿ ನಗರ ಪೊಲೀಸರು ಇಂದು ಬಂಧಿಸಿದ್ದಾರೆ.

ಉಡುಪಿ ನಗರದ ಕೊಳಂಬೆಯಲ್ಲಿರುವ ಸಾಯಿ ಆಶ್ರಮ್ ಅಪಾರ್ಟ್ ಮೆಂಟ್ ನ ಪ್ಲಾಟ್ ನಂ 104ರಲ್ಲಿದ್ದ ಸುಖೇಶ್ ರಾವ್, 76 ಬಡಗುಬೆಟ್ಟು ಗ್ರಾಮದ ಬೈಲೂರು ನಿವಾಸಿ ಆನಂದ ಪೂಜಾರಿ (56) ಹಾಗೂ ಮೂಡನಿಡಂಬೂರು ನಿವಾಸಿ ರಮೇಶ್ ಪೂಜಾರಿ (52) ಬಂಧಿತರು.

ಬೆಟ್ಟಿಂಗ್‌ಗಾಗಿ ಉಪಯೋಗಿಸಿದ 1 ಟಿವಿ, 4 ಮೊಬೈಲ್ ಫೊನ್ ಗಳು, 1 ಟ್ಯಾಬ್, 1 ಡೈರಿ ಮತ್ತು ಬೆಟ್ಟಿಂಗ್ ನಲ್ಲಿ ತೊಡಗಿಸಿದ 3,88,000 ರೂ.ಗಳನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

 

Leave a Reply

Your email address will not be published. Required fields are marked *