Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಣ್ಣು ಸಾಗಾಟದ ಲಾರಿ ಡಿಕ್ಕಿ: ಬೈಕ್ ಸವಾರ ಯುವಕನಿಗೆ ಗಂಭೀರ ಗಾಯ

ಉಡುಪಿ: ಗುಡ್ಡಕ್ಕೆ ಗುಡ್ಡವನ್ನೇ ನಾಶಪಡಿಸಿ ಮಣ್ಣು ಸಾಗಾಟ ಮಾಡುತ್ತಿದ್ದ ನವಯುಗ ಕಂಪೆನಿಯ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಮಾರ್ಚ್ 20ರಂದು ಪೂರ್ವಾಹ್ನ ಮೂಡುಬೆಳ್ಳೆ – ದೆಂದೂರುಕಟ್ಟೆ ರಸ್ತೆಯ ತೋಕೋಳಿ ಬಸ್ ನಿಲ್ದಾಣದ ಬಳಿ ಸಂಭವಿಸಿದೆ.

tokoli bick-4

ಕೆಎ 20 ಡಬ್ಲ್ಯೂ 8910 ನಂಬ್ರದ ಬೈಕ್ ಸವಾರ ಪಳ್ಳಿ ನಿವಾಸಿ ರಾಜೇಶ್ ಆಚಾರ್ಯ ಗಾಯಾಳು. ಎದೆ, ಎರಡು ಕೈ ಮತ್ತು ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜೇಶ್ ಆಚಾರ್ಯ ಉಡುಪಿ ನಗರದ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿ ದಿನದಂತೆ ಶುಕ್ರವಾರವೂ ಮನೆಯಿಂದ ಕೆಸಲಕ್ಕೆ ಉಡುಪಿಗೆ ತಮ್ಮ ಬೈಕಿ ನಲ್ಲಿ ಸಂಚರಸಿಸುತ್ತಿದ್ದರು.

tokoli bick-2

ಲಾರಿಯ ಅತೀ ವೇಗ ಮತ್ತು ಚಾಲಕನ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಎಪಿ 25 ಡಬ್ಲ್ಯೂ 5359 ನಂಬ್ರದ ಟಿಪ್ಪರ್ ಲಾರಿ ಚಾಲಕ ಶತ್ರಘ್ನ, ನವಯುಗ ಕಂಪೆನಿಯ ಮೆಕ್ಯಾನಿಕಲ್ ಮ್ಯಾನೇಜರ್ ಶಿವರಾಮಯ್ಯ ಹಾಗೂ ವೆಂಕಟೇಶ್ವರಲು ಎಂಬವರ ವಿರುದ್ಧ ಅಪಘಾತಕ್ಕೆ ಸಂಬಂಧಿಸಿದಂತೆ ಶಿರ್ವ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಲಾರಿ ದೆಂದೂರುಕಟ್ಟೆ ಕಡೆಯಿಂದ ಬೂಡುಬೆಳ್ಳೆ ಕಡೆಗೂ, ಬೈಕ್ ಮೂಡುಬೆಳ್ಳೆ ಕಡೆಯಿಂದ ದೆಂದೂರುಕಟ್ಟೆ ಕಡೆಗೂ ಸಂಚರಿಸುತ್ತಿತ್ತು. ನವಯುಗ ಕಂಪೆನಿಯು ಉದ್ಯಾವರದಲ್ಲಿ ಸೇತುವೆ ಕಾಮಗಾರಿ ನಡೆಸುತ್ತಿದ್ದು, ಇದಕ್ಕೆ ತೋಕೋಳಿಯ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಗುಡ್ಡವನ್ನು ನಾಶಪಡಿಸಿ ಇಲ್ಲಿಂದ ಅಪಘಾತವೆಸಗಿದ ಲಾರಿ ಮಣ್ಣು ಸಾಗಾಟ ಮಾಡುತ್ತಿತ್ತು.

tokoli tippar-1

 

 

 

Leave a Reply

Your email address will not be published. Required fields are marked *