Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಟಿಪ್ಪರ್ ಗಳ ಆರ್ಭಟ: ಕಣ್ಣಿದ್ದೂ ಕುರುಡರಾದ ಶಿರ್ವ ಪೊಲೀಸ್ !

ಉಡುಪಿ: ಮೂಡುಬೆಳ್ಳೆ – ಉಡುಪಿ ಮತ್ತು ಮೂಡುಬೆಳ್ಳೆ – ಕಟಪಾಡಿ ರಸ್ತೆಯಲ್ಲಿ ಇತ್ತೀಚೆಗೆ ಟಿಪ್ಪರ್ಗಳ ಅಟ್ಟಹಾಸ ಮಿತಿಮೀರಿದೆ. ಹಲವಾರು ಮಂದಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಕೂದಲೆಳೆಯ ಅಂತರದಲ್ಲಿ ಇವುಗಳ ಆರ್ಭಟದಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ.

ಟಿಪ್ಪರ್ ಚಾಲಕರನೇಕರಿಗೆ ಚಾಲನ ಪರವಾನಿಗೆ ಇಲ್ಲ. ಮಣ್ಣು ಮತ್ತು ಕ್ರಶರ್ ಹುಡಿ ಕೊಂಡೊಯ್ಯುವಾಗ ಟರ್ಪಲ್ ಹಾಕದೆ ನಿರ್ಲಕ್ಷಿಸುತ್ತಾರೆ. ವೇಗ, ಮಿತಿ ಮೀರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇವುಗಳಿಗೆಲ್ಲ ಕಡಿವಾಣ ಹಾಕಬೇಕಾದ ಶಿರ್ವ ಠಾಣೆಯ ಪೊಲೀಸರು ಮಾತ್ರ ಕಣ್ಣದ್ದೂ ಕುರುಡರಂತೆ ಎಲ್ಲವನ್ನೂ ಕಡೆಗಣಿಸಿದ್ದಾರೆ.

thokoli gudde copy

* ಮಣ್ಣು ಸಾಗಾಟಕ್ಕೆ ಗುಡ್ಡ ನಾಶ !

ಸಣ್ಣ ವಾಹನಗಳನ್ನು ತಡೆದು ನಿಲ್ಲಿಸಿ ದಾಖಲೆ ಕೇಳುವ ಶಿರ್ವ ಪೊಲೀಸರು, ಘನ ವಾಹನಗಳು ಜಗಜಜ್ಜಾಹೀರಾಗಿ ಕಣ್ಣೆದುರೇ ನಿಯಮ ಉಲ್ಲಂಘಿಸಿದರೂ ಕಾಣದಂತೆ ಸುಮ್ಮನಿರುತ್ತಾರೆ.

ಬಾರಿ ಬಾರಿ ಎಚ್ಚರಿಕೆ ನೀಡಿದ್ದರೂ…

ಟಿಪ್ಪರ್ ಸವಾರರಿಗೆ ಸ್ಥಳೀಯರಾದ ಅಶ್ವಿನ್ ಲಾರೆನ್ಸ್ ಹಾಗೂ ಪ್ರಶಾಂತ್ ಬೇನಾಳ ಅವರು ಪ್ರತಿನಿತ್ಯ ಎಚ್ಚರಿಕೆ ನೀಡಿದ್ದರೂ, ಕ್ಯಾರೇ ಅನ್ನದ ಟಿಪ್ಪರ್ ಚಾಲಕರು ದುರ್ಘಟನೆಗೆ ಕಾರಣರಾಗಿದ್ದಾರೆ.

ಆಂಧ್ರ ಮೂಲದ ಟಿಪ್ಪರ್ ಚಾಲಕರು ಯಾರನ್ನೂ ಲೆಕ್ಕಿಸದೆ ಸ್ವೇಚ್ಛಾಚಾರದ ಪ್ರವೃತ್ತಿ ತೋರುತ್ತಿರುವುದು ಪ್ರತಿನಿತ್ಯ ಸಂಚರಿಸುವವರಿಗೆ ಜೀವಭಯ ಉಂಟಾಗುವಂತೆ ಮಾಡಿದೆ.

ಸ್ಥಳೀಯ ಜನಪ್ರತಿನಿಧಿಯೊಬ್ಬರಿಗೆ ಅಶ್ವಿನ್ ಲಾರೆನ್ಸ್ ಅವರು, ಟಿಪ್ಪರ್ ಲಾರಿಗಳ ಅಟ್ಟಹಾಸದ ವಿರುದ್ಧ ಗ್ರಾಮ ಪಂಚಾಯತ್ಗೆ ದೂರು ನೀಡುವಂತೆ ಒತ್ತಾಯಿಸಿದ್ದರೂ, ಅವರು ಇದನ್ನು ನಿರ್ಲಕ್ಷ್ಯವಹಿಸಿರುವುದು ಕೆಲವೊಂದು ಅನುಮಾನಗಳಿಗೆ ಕಾರಣವಾಗಿದೆ. ಇನ್ನಾದರೂ ಈ ಟಿಪ್ಪರ್ ಲಾರಿಗಳ ವಿರುದ್ಧ ಸಂಬಂಧಪಟ್ಟ ಇಲಾಖೆ ಕೂಡಲೆ ಕ್ರಮಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

tokoli bick-4

Leave a Reply

Your email address will not be published. Required fields are marked *