Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅಪ್ರಾಪ್ತೆ ಕಾಲೇಜು ವಿದ್ಯಾರ್ಥಿನಿ ನಿಗೂಢ ನಾಪತ್ತೆ !

ಉಡುಪಿ: ಉಡುಪಿ ತಾಲೂಕು ಪಾಂಡೇಶ್ವರ ಗ್ರಾಮದ ಮೂಡಹಡು ಶಾಲೆ ಬಳಿಯ ಮೇಲಬೆಟ್ಟು ನಿವಾಸಿ ಅಪ್ರಾಪ್ತ ಪ್ರಾಯದ ಬಾಲಕಿ ರಮ್ಯಾ (17) ಫೆಬ್ರವರಿ 28 ರಂದು ಬೆಳಗ್ಗೆ ಗಂಟೆ 7.30ಕ್ಕೆ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವಳು ಮನೆಗೆ ಮರಳದೆ ನಿಗೂಢವಾಗಿ ಕಾಣೆಯಾಗಿದ್ದಾಳೆ.

ನಾಲ್ಕಡಿ ಏಳಿಂಚು ಎತ್ತರದ ರಮ್ಯಾ ಕನ್ನಡ ಭಾಷೆ ಬಲ್ಲವಳಾಗಿದ್ದು, ಸಾಧಾರಣ ಮೈ ಕಟ್ಟು ಹೊಂದಿದ್ದಾಳೆ. ಬಿಳಿ ಮೈ ಬಣ್ಣದ ಈಕೆ ನಾಪತ್ತೆಯಾದ ದಿನದಂದು ಕ್ರೀಂ ಬಣ್ಣದ ಚುಕ್ಕಿ ಇರುವ ಚೂಡಿದಾರ ಧರಿಸಿರುತ್ತಾಳೆ.

ಈಕೆಯ ಬಗ್ಗೆ ಯಾರಿಗಾದರೂ ಯಾವುದೇ ಮಾಹಿತಿ ಇದ್ದಲ್ಲಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಥವಾ ಪೊಲೀಸ್ ಕಂಟ್ರೊಲ್ ರೂಮ್ ಉಡುಪಿ (ದೂರವಾಣಿ: 0820-2526444) ಇಲ್ಲವೇ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರು (ದುರವಾಣಿ: 0820-2561966, ಮೊಬೈಲ್: 9480805432) ಅಥವಾ ಕೋಟಾ ಪೊಲೀಸ್ ಠಾಣೆ (ದೂರವಾಣಿ: 0820-2564155, ಮೊಬೈಲ್: 9480805454) ಇವರನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖಾ ಪ್ರಕಟಣೆ ಕೋರಿದೆ.

Leave a Reply

Your email address will not be published. Required fields are marked *