Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಡಿ.ಕೆ.ರವಿ ನಿಗೂಢ ಸಾವು: ಸೈಕಲಾಜಿಕಲ್ ಆಟೋಪ್ಸಿ ತನಿಖೆ ನಡೆಯಲಿ…

# Politics is the last resort of a scoundrel…

ರಾಜಕಾರಣಿ ಹೊಲಸು ವ್ಯಕ್ತಿ ಎಂಬುದನ್ನು ಈ ಹೇಳಿಕೆ ಸಾದರ ಪಡಿಸುತ್ತದೆ ಅಷ್ಟೇ. ಇಂದು ಐಎಎಸ್ ಅಧಿಕಾರಿ ಡಿ.ಕೆ.ರವಿಯವರ ಸಾವು ಕೂಡ ಅದನ್ನು ಮತ್ತೆ ಮತ್ತೆ ಸಾರುತ್ತದೆ. ನಮ್ಮ ಆಡಳಿತ ಹಾಗು ವಿರೋಧ ಪಕ್ಷದ ಮುಖಂಡರು ಸುರಿಸುತ್ತಿರುವ ಮೊಸಳೆ ಕಣ್ಣೀರು, ಪತ್ರಿಕೆಗಳ ಮುಖಾಂತರ ಅವರುಗಳೇ ತೂರಿ ಬಿಡುತ್ತಿರುವ ಅವರ ತೀರ ಖಾಸಗಿ ವಿಚಾರಗಳು, ನಿಜವಾಗಿಯೂ  ನಾಗರಿಕ ಸಮಾಜದ ದುರಂತವೆ ಸರಿ.

ಪತ್ರಿಕೆ, ಬ್ಲಾಗ್, ಫೇಸ್ಬುಕ್, whatsapp ಗಮನಿಸಿದರೆ, ಈ ಸಾವು ಜಾತ್ಯಾತೀತ ಮತ್ತು ಜಾತಿಪರ ಶಕ್ತಿಗಳ ನಡುವೆ ಒಂದು ರಾಜಕೀಯ ಹೋರಾಟದಂತೆ ಭಾಸವಗುತ್ತಿದೆ. ರವಿಯವರ ಸ್ನೇಹಿತರೊಬ್ಬರು ರವಿಯ ಬಗ್ಗೆ ನನ್ನಲ್ಲಿ ಹೇಳಿದ ಕೆಲವು ವಿಚಾರಗಳನ್ನು ಗಮನಿಸಿದಾಗ, ಈತನನ್ನು ನಮ್ಮ ಪ್ರಧಾನಿ ಒಬ್ಬ “ರಾಷ್ಟ್ರೀಯ ಹೀರೋ ” ವಾಗಿ ಘೋಷಿಸಬೇಕು ಎಂದು ನನಗೆ ಅನ್ನಿಸಿತು. ಆದರೆ ಇಲ್ಲಿ ನಡೆಯುತ್ತಿರುವುದು ಏನು ? ಅವರ ಕೊನೆಯ ಮೆಸೇಜ್, ಕೊನೆಯ ಕಾಲ್ ಗಳ ಬಗ್ಗೆ…

d.k.ravi-1

ಜಾಣ್ಮೆಯಿಂದ ಕೆಲವೇ ಕೆಲವು ವಿಷಯಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ಅವರ ಚಾರಿತ್ರ್ಯ ವಧೆಯ ವ್ಯವಸ್ಥಿತ ಸಂಚು ನಡೆಸಿದರು. ಹಾಗಿದ್ದರೆ ಅವರಿಗೆ ಈ ವಾರದಲ್ಲಿ ಫೋನಾಯಿಸಿದ ರಾಜಕಾರಣಿಗಳು, ಅವರಿಗೆ ಕೋಲಾರದಿಂದ ಟ್ರಾನ್ಸ್ ಫರ್ ಆದಾಗ ಸಿಹಿ ಹಂಚಿದ ರಾಜಕಾರಣಿಗಳ ಬಗ್ಗೆ ಯಾಕೆ ಹೆಚ್ಚು  ವಿಷಯಗಳು ಬರುತ್ತಿಲ್ಲ ?

ರವಿಯ ಬಗ್ಗೆ ನಾನು ಬದುಕಿರುವಾಗ ಹೆಚ್ಚು ತಿಳಿದುಕೊಂಡಿರಲಿಲ್ಲ. ಆದರೆ ಈಗ ನೋಡಿದರೆ ಆತ ಎಂದು ತನ್ನ ಜಾತಿಯನ್ನು ಹಿಡಿದುಕೊಂಡು ಹೋಗಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಇಂದು ಅವರ ಸಾವಿನಲ್ಲಿ ಜಾತಿ ಹಿಡಿದು ರಾಜಕೀಯ ಮಾಡಲಾಗುತ್ತಿದೆ.

ರವಿ, ರಿಯಲ್ ಎಸ್ಟೇಟ್  ಮಾಫಿಯಾ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಿದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾದ ತಾಯಿ ತಂದೆ ಎನಿಸಿದ ಎಲ್ಲ ರಾಜಕಾರಣಿಗಳು ಇಂದು ಅಳುತ್ತಾ ಇರುವುದು ವಿಪರ್ಯಾಸವೇ ಸರಿ. ಇನ್ನು  ರಾಷ್ಟ್ರೀಯ ಟೆಲಿ ಮಾಧ್ಯಮದಲ್ಲಿ  ಒಬ್ಬ ಪತ್ರಕರ್ತ, ತಾನು ಅಂತರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯ ಹಾಗೆ ವರ್ತಿಸುತ್ತ ಇರುವಾಗ, ಆತನೊಂದಿಗೆ ಸೇರಿ ದೊಡ್ಡ ದೊಡ್ಡ ಮಾತುಗಳನ್ನು ಆಡುವ ಕೆಲವು ಮಂದಿ ಅಧಿಕಾರಗಳಲ್ಲಿ, ನಮ್ಮ ಉಡುಪಿಯ ಡಾ. ಶರತ್ ಕುಮಾರ್ ಪ್ರಕರಣದಲ್ಲಿ ಲ್ಯಾಬ್ ಮಾಫಿಯಾದ  ವಿರುಧ್ಧ  ದೂರು ನೀಡಿದ್ದನ್ನು  ಮುಚ್ಚಿ ಹಾಕಲು ಶತಾಯಗತಾಯ ಪ್ರಯತ್ನಿಸಿದ ಒಂದು ಮುಖವು ಇತ್ತು…

ಮಾನಸಿಕ ತಜ್ಞನಾಗಿ ನನ್ನ ಅಭಿಪ್ರಾಯವೆಂದರೆ,  ರವಿ ಸಾವಿನ ಬಗ್ಗೆ ಈ ರೀತಿ ಚರ್ಚೆ ನಡೆಸುವುದರಿಂದ ಅವರ ಮನೆಯವರು ಹಾಗೂ ಸ್ನೇಹಿತರ  right to live ನ ಉಲ್ಲಂಘನೆಯಾದಂತಾಗುತ್ತದೆ.

d.k.ravi-2

ರವಿ ಸಾವಿನ ಬಗ್ಗೆ ಸುದ್ದಿ ತಿಳಿದಂತೆ  ಜನರ ಪ್ರತಿಕ್ರಿಯೆ ಗಮನಿಸಿ, ಹಾಗೆಯೇ ನಮ್ಮ ಜನ ನಾಯಕರುಗಳು ಯಾರಾದರು ಸತ್ತರೆ  ನಮ್ಮ ಜನ ಈ ರೀತಿ ದುಖ: ತಪ್ತರಾಗಬಹುದೇ ಊಹಿಸಿ ? ಬಹುಷಃ ಇವರ ಮನೆಯವರೇ ಅಳಲಿಕ್ಕಿಲ್ಲ…

ರವಿ ಸಾವಿನ ಬಗ್ಗೆ ಸಿಬಿಐ ತನಿಖೆಯಲ್ಲಿ ಪುನಃ  ಪೋಸ್ಟ್  ಮಾರ್ಟಮ್ ಆಗಲಿ. ಹಾಗೆಯೇ ಸೈಕಲಾಜಿಕಲ್ ಆಟೋಪ್ಸಿ  ಎಂಬ ಮನೋ ವೈದ್ಯಕೀಯ ತನಿಖೆಯೂ ನುರಿತ ತಜ್ಞರಿಂದ ಆಗಬೇಕು. ಇದರಿಂದ  ಈ  ಕೃತ್ಯದ ಮುಂಚೆ  ೨೪ ಘಂಟೆ ರವಿಯವರ ಮನೋಸ್ಥಿತಿಯ ಕುರಿತಾದ ಮಾಹಿತಿ ಸಿಗುತ್ತದೆ  ಹಾಗು ಸಾರ್ವಜನಿಕರ ಅನೇಕ ಸಂದೇಹಗಳಿಗೆ ಉತ್ತರ ಸಿಗಬಹುದು.

d.k.ravi-4

ಇಲ್ಲದಿದ್ದರೆ, ಇದು ಕೇವಲ ಒಂದು ವ್ಯವಸ್ಥಿತ ಸಂಚೇ ಸರಿ. ಪ್ರಾಮಾಣಿಕ ಅಧಿಕಾರಿಯನ್ನು ಕೊಲೆ ಯಾ ಸಸ್ಪೆಂಡ್ ಮಾಡುವುದು, ಹೆಣ್ಣಿನ ಕಥೆ, ರಿಯಲ್ ಎಸ್ಟೇಟ್ ನಲ್ಲಿ  ಹಣ ಮಾಡಿದ ಎಂಬ ಸುಳ್ಳು ಕಥೆ ಹೆಣೆಯುವುದು, ಮನೆಯವರನ್ನು ಬಗ್ಗಿಸುವುದು, ಪಾಲಿಟಿಕ್ಸ್, ಪೇಪರ್ ಮತ್ತು ಪೊಲೀಸ್ ಸೇರಿ  ಹೊಸ ಕಥೆ ಸೃಷ್ಟಿಸುವುದು ಮುಂದುವರಿಯುತ್ತದೆ…

mislead the people… bury the investigation…

dr.p.v.bhandary

– ಡಾ.ಪಿ.ವಿ.ಭಂಡಾರಿ, ಖ್ಯಾತ ಮನೋವೈದ್ಯರು, ಡಾ.ಎ.ಎವಿ.ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ.

Leave a Reply

Your email address will not be published. Required fields are marked *