Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉಡುಪಿ ನಗರದ ಫುಟ್ಪಾತ್ ಎಂಬ ‘ನರಕ’ !

ಉಡುಪಿ: ಉಡುಪಿ ಒಂದು ನಗರಸಭೆ. ಹಾಗಾಗಿ ಈ ನಗರಸಭೆಗೆ ಒಂದು ಆಡಳಿತ ಎಂಬುದು ಇದೆ. ಪೊಲೀಸರೂ ಇದ್ದಾರೆ. ಆದರೆ, ಈ ಆಡಳಿತ, ಪೊಲೀಸ್ ಎನ್ನುವುದು ನಾಮ್ ಕೆ ವಾಸ್ತೆಗೆ ಎಂಬುದೇ ಇಲ್ಲಿನ ಸಮಸ್ಯೆ. ಭ್ರಷ್ಟಾಚಾರ ನಡೆಸಲು ಕೊಡುವಷ್ಟು ಆಸಕ್ತಿಯನ್ನು ಸಮಸ್ಯೆಗಳನ್ನು ಪರಿಹರಿಸಲು ಕೊಡದಿರುವುದೇ ಉಡುಪಿ ನಗರಸಭಾ ವ್ಯಾಪ್ತಿಯ ಜನರ ದುರಂತ.

ಉಡುಪಿ ನಗರದಲ್ಲಿನ ರಸ್ತೆ ಬದಿಗಳಲ್ಲಿ ಹೆಸರಿಗೆ ಮಾತ್ರ ಫುಟ್ ಪಾತ್ ಇರುವುದು. ಇಲ್ಲಿನ ಬಹುತೇಕ ಫುಟ್ ಪಾತ್ ಗಳೂ ಅಂಗಡಿಗಳಿಗಾಗಿ, ವ್ಯಾಪಾರಕ್ಕಾಗಿ, ಗ್ಯಾರೇಜ್ ಗಳಿಗಾಗಿ, ವಾಹನ ಪಾರ್ಕಿಂಗ್ ಗಾಗಿ ಮೀಸಲಾಗಿದೆ. ಈ ಫುಟ್ ಪಾತ್ ಗಳಲ್ಲಿ ನಾಗರಿಕರು ನಡೆಯುವುದು ಎಂದರೆ, ಅದೊಂದು ಸರ್ಕಸ್ಸೇ ಸರಿ.

ಸಿಟಿ ಬಸ್ ನಿಲ್ದಾಣ ಸಮೀಪದ ಶಿರಿಬೀಡು ಸರಸ್ವತಿ ಶಾಲೆ ಮುಂಭಾಗದ ಫುಟ್ ಪಾತ್ ಗೆ ಒಮ್ಮೆ ಬನ್ನಿ. ಇಲ್ಲಿ ಅಂಗಡಿಯೊಂದರ ಎದುರು ಫುಟ್ ಪಾತ್ ನ್ನು ಆಕ್ರಮಿಸಿ ತಗಡು ಶೀಟ್ ಅಳವಡಿಸಲಾಗಿದೆ. ಈ ತಗಡು ಶೀಟ್ ಗಿಂತಲೂ ಮುಂದಕ್ಕೆ ವ್ಯಾಪಿಸಿದೆ ಇದಕ್ಕೆ ಅಳವಡಿಸಿದ ಕಬ್ಬಿಣದ ಸರಳುಗಳು. ಈ ಸರಳಿಗೆ ಈಗಾಗಲೇ ಹಲವಾರು ಮಂದಿ ಪಾದಚಾರಿಗಳ ತಲೆ ತಾಗಿ, ರಕ್ತ ಚಿಮ್ಮಿದೆ. ಆದರೆ, ಇನ್ನೂ ಸಹ ಇದನ್ನು ತೆರವುಗೊಳಿಸುವ ಕೆಲಸವನ್ನು ಯಾರೂ ಮಾಡಿಲ್ಲ. ಯಾರದಾದರೂ ಕಣ್ಣು ಹೋಗಲು ಆಡಳಿತ ವ್ಯವಸ್ಥೆ ಕಾಯುತ್ತಿದೆ ಎಂದು ಕಾಣುತ್ತದೆ.

ಉಡುಪಿ ಸಿಟಿ ಬಸ್ ನಿಲ್ದಾಣ, ಗೀತಾಂಜಲಿ ಟಾಕೀಸ್ ಪಕ್ಕದ ಪೆಟ್ರೋಲ್ ಪಂಪ್ ಮುಂಭಾಗದ ಸ್ಥಳ ಗ್ಯಾರೇಜ್ ಆಗಿಯೂ ಕೆಲಸ ಮಾಡುತ್ತದೆ. ನಗರದ ಪ್ರತೀ ರಸ್ತೆಯ ಫುಟ್ ಪಾತ್ ಗಳಲ್ಲೂ ಒಂದಿಲ್ಲೊಂದು ಅಂಗಡಿಗಳಿವೆ. ಒಂದು ಬಾರಿ ಯಾರು ಬೇಕಾದರೂ ಇಲ್ಲಿನ ಫುಟ್ ಪಾತ್ ಗಳಲ್ಲಿ ನಡೆದರೆ ಇದರ ಅರಿವು ಆಗಿಯೇ ಆಗುತ್ತದೆ.

ಇಲ್ಲಿನ ಫುಟ್ ಪಾತ್ ಗಳಲ್ಲಿ ನಡೆದಾಡುವಾಗ ಪಾದಚಾರಿಗಳು ಪದೇ ಪದೇ ಫುಟ್ ಪಾತ್ ನಿಂದ ಕೆಳಗಿಳಿಯುವುದು ಅನಿವಾರ್ಯ. ಇದಕ್ಕೆ ಒಂದು ಕಾರಣವೆಂದರೆ, ಅಂಗಡಿಗಳು ಪಾದಚಾರಿಗಳ ನಡಿಗೆಗೆ ಅಡ್ಡಿಯಾಗಿ ಪರಿಣಮಿಸುವುದು. ಇನ್ನೊಂದು ಕಾರಣ, ಫುಟ್ ಪಾತ್ ಗೆ ಅಳವಡಿಸಿರುವ ಚಪ್ಪಡಿ ಕಲ್ಲು ಸರಿಯಾಗಿ ಕುಳಿತುಕೊಳ್ಳದೆ ದಡ ಬಡ ಆಗುವುದು. ಒಳ ಚರಂಡಿಗೆ ಬಿದ್ದೆವೋ ಅನ್ನುವ ಭಯ ಇಲ್ಲಿ ನಡೆದಾಡುವ ಪ್ರತಿಯೊಬ್ಬನಿಗೂ ಆಉವ ಸಹಜವಾದ ಅನುಭವ.

ಇದನ್ನೆಲ್ಲಾ ಸರಿಪಡಿಸಬೇಕಾದ ನಗರಸಭಾ ಆಡಳಿತ ವ್ಯವಸ್ಥೆ ಕಣ್ಣು ಮುಚ್ಚಿದೆ. ಪೊಲಿಸರು ಇತ್ತ ಕಡೆ ಸುಳಿಯುವುದೇ ಇಲ್ಲವಾದ ಕಾರಣ ಕಣ್ಣು ಮುಚ್ಚಬೇಕಾದ ಅಗತ್ಯವೇ ಇಲ್ಲ !

ajjarakadu phutpath copy

Leave a Reply

Your email address will not be published. Required fields are marked *