Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉಡುಪಿ ಜಿಲ್ಲೆಯ ASI ರೊಸಾರಿಯೋ, HC ಜನಾರ್ದನರಿಗೆ ಮುಖ್ಯಮಂತ್ರಿಗಳ ಪದಕ ಪ್ರಕಟ

ಉಡುಪಿ: ಉಡುಪಿ ಜಿಲ್ಲೆಯ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ 2015ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಘೋಷಣೆಯಾಗಿದೆ. ಒಬ್ಬರು ಉಡುಪಿ ಜಿಲ್ಲಾ ಅಪರಾಧ ಗುಪ್ತ ವಾರ್ತಾ ವಿಭಾಗ (ಡಿಸಿಐಬಿ)ದಲ್ಲಿ ಎಎಸ್ಐ  ಆಗಿರುವ ರೊಸಾರಿಯೋ ಡಿ’ ಸೋಜಾ ಅವರಾದರೆ, ಇನ್ನೊಬ್ಬರು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಡಿಎಆರ್ )ಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿರುವ ಜನಾರ್ದನ್ ಇವರು.

ಕರ್ತವ್ಯದ ಅವಧಿಯಲ್ಲಿ ಪೊಲೀಸ್ ಇಲಾಖೆಗೆ ಮತ್ತು ಸಾರ್ವಜನಿಕರಿಗೆ ಸಲ್ಲಿಸಿದ ಶ್ಲಾಘನೀಯ ಸೇವೆಗಾಗಿ ಆಯ್ದ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿ ಪದಕಗಳನ್ನು ಪ್ರತೀ ವರ್ಷವೂ ನೀಡಲಾಗುತ್ತದೆ. ಈ ಸಾಲಿನ ಪದಕಗಳನ್ನು ಎಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯುವ ಪೊಲೀಸ್ ಧ್ವಜ ದಿನಾಚರಣಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಧಾನ ಮಾಡಲಿದ್ದಾರೆ.

ರೊಸಾರಿಯೋ ಡಿ’ಸೋಜಾ

asi rosario

1984ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಈಸ್ಟ್ ಸಂಚಾರಿ ಪೊಲೀಸ್ ಠಾಣೆಗೆ ಕಾನ್ ಸ್ಟೇಬಲ್ (ಪಿಸಿ) ಆಗಿ ಸೇರ್ಪಡೆಗೊಳ್ಳುವ ಮೂಲಕ ಇಲಾಖಾ ಸೇವೆ ಆರಂಭಿಸಿದ ರೊಸಾರಿಯೋ ಡಿ’ಸೋಜಾ ಅವರು, ಬಳಿಕ ಉಡುಪಿ ಜಿಲ್ಲೆಯ ಕೋಟಾ, ಬ್ರಹ್ಮಾವರ, ಪಡುಬಿದ್ರಿ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸಿದವರು.

ಪ್ರಸ್ತುತ ಉಡುಪಿ ನಗರ ಪೊಲೀಸ್ ಠಾಣೆಯ ಎಎಸ್ಐ ಆಗಿದ್ದುಕೊಂಡು ಒಒಡಿ ನೆಲೆಯಲ್ಲಿ ಡಿಸಿಐಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರೊಸಾರಿಯೋ, ಮೂಲತಹ ಮಂಗಳುರಿನ ವೆಲೆನ್ಸಿಯಾದವರಾಗಿದ್ದಾರೆ. ಇವರು, ದ.ಕ.ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಡಿಎಆರ್)ಯಲ್ಲಿ ಸೇವೆ ಸಲ್ಲಿಸುತ್ತಿದ್ದ ಐಸಾಕ್ ಡಿ’ಸೋಜಾರವರ ಪತ್ರ.

DAR HC ಜನಾರ್ದನ್

dar hc janardan

ಮೂಲತಹ ಕಾಸರಗೋಡು ಜಿಲ್ಲೆಯವರಾಗಿರುವ ಜನಾರ್ದನ್ ಅವರು, ಉಡುಪಿ ಜಿಲ್ಲೆಯಾದಾಗಿನಿಂದ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಡಿಎಆರ್)ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಕಾನ್ ಸ್ಟೇಬಲ್ ಆಗಿ ಕರ್ತವ್ಯ ಆರಂಭಿಸಿದ್ದ ಜನಾರ್ದನ್, ಬಳಿಕ ದ.ಕ.ಜಿಲ್ಲೆಯಿಂದ ಉಡುಪಿಯನ್ನು ಬೇರ್ಪಡಿಸಿ, ಜಿಲ್ಲೆಯನ್ನಾಗಿ ಘೋಷಿಸಿದಾಗ, ವರ್ಗಾವಣೆಗೊಂಡು ಉಡುಪಿ ಡಿಎಆರ್ ಗೆ ಬಂದವರಾಗಿದ್ದಾರೆ.

Leave a Reply

Your email address will not be published. Required fields are marked *