Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಜಾರಿಯಾಗಿ 13 ವರ್ಷ ಕಳೆದರೂ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಕ ಮಾಡದ ಬೀದರ್ ಜಿಲ್ಲಾ ಸರಕಾರಿ ಆಸ್ಪತ್ರೆ !

ದರೋಡೆ ಪ್ರಕರಣ: 12 ವರ್ಷದ ಬಳಿಕ ಆರೋಪಿ ಬಂಧನ

ಮುಳ್ಳೇರಿಯಾ(ಕಾಸರಗೋಡು): ಮನೆ ಕೆಲಸದಾಕೆಯನ್ನು ಕತ್ತಿ ತೋರಿಸಿ ಬೆದರಿಸಿ, ಮಾನಭಂಗಗೈದು ನಗ-ನಗದು ದರೋಡೆಗೈದ ಆರೋಪಿಯನ್ನು ಹನ್ನೆರಡು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.

ಕುಂಡಂಕುಳಿ ಚೇಡಿಕುಂಡು ಎಂಬಲ್ಲಿಯ ರಫೀಕ್(32) ಬಂಧಿತ ಆರೋಪಿ. ಈತ 2003ರ ಆಗಸ್ಟ್ 14ರಂದು ಕುಂಡಂಗುಳಿ ತ್ರಿವೇಣಿ ಹೌಸ್ನ ವಿ.ಕೆ ಮಾಧವನ್ ನಾಯರ್ ಮನೆಗೆ ನುಗ್ಗಿ ದರೋಡೆಗೈದ್ದಿದ್ದನು.

ಮಾಧವನ್ ನಾಯರ್ ಕುಟುಂಬ ಮನೆಯಲ್ಲಿಲ್ಲದ ವೇಳೆ ಮನೆಗೆ ನುಗ್ಗಿದ ಆರೋಪಿ, ಮನೆ ಕೆಲಸದಾಕೆಯನ್ನು ಚಾಕು ತೋರಿಸಿ ಬೆದರಿಸಿ, ಮಾನಭಂಗಗೈದು ಹದಿನಾರು ಮುಕ್ಕಾಲು ಪವನ್ ಚಿನ್ನಾಭರಣ, 30 ಸಾವಿರ ರೂ. ನಗದು, ಮೊಬೈಲ್ ಹ್ಯಾಂಡ್ ಸೆಟ್ ಮತ್ತಿತರ ವಸ್ತುಗಳನ್ನು ದರೋಡೆಗೈದಿದ್ದನು. ಘಟನೆ ನಡೆದು ಮೂರು ತಿಂಗಳ ಬಳಿಕ ಪೊಲೀಸರು ಆರೋಪಿ ರಫೀಕ್ ನನ್ನು ಬಂಧಿಸಿದ್ದರೂ, ನ್ಯಾಯಾಲಯದಲ್ಲಿ ಜಾಮೀನು ದೊರೆತ ಬಳಿಕ ತಲೆಮರೆಸಿಕೊಂಡಿದ್ದನು.

ಈ ಮಧ್ಯೆ ಕಳೆದ ಜನವರಿಯಲ್ಲಿ ಪನೆಯಾಲದ ಖಾಸಗೀ ಬಸ್ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ್ದು, ಅಯ್ಯಪ್ಪ ಯಾತ್ರಾರ್ಥಿಗಳನ್ನು ಶಬರಿಮಲೆಗೆ ಕರೆದೊಯ್ದಿದ್ದ ವೇಳೆ ಅಯ್ಯಪ್ಪ ಭಕ್ತರ 20 ಸಾವಿರ ರೂ. ನಗದು, ಬಸ್ ಮಾಲಕನ 37 ಸಾವಿರ ರೂ. ನಗದು, ಮೊಬೈಲ್ ಮೊದಲಾದವುಗಳನ್ನು ಕಳವುಗ್ಯದ ದೂರಿನ ಮೇರೆಗೆ ಪತ್ತನಂತಿಟ್ಟದ ಪಂಪಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲಾಗಿತ್ತು.

ಈ ಪ್ರಕರಣದ ಬಳಿಕ ಅಲ್ಲಿಂದ ತಲೆಮರೆಸಿಕೊಂಡಿದ್ದ ಆರೋಪಿ ರಫಿಕ್, ಚೆನ್ನೈನಲ್ಲಿ ಹೋಟೆಲ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವುದಾಗಿ ಆದೂರು ಸಿಐ ಸತೀಶ್ ಕುಮಾರ್ ಅವರಿಗೆ ಲಭಿಸಿದ ರಹಸ್ಯ ಮಾಹಿತಿಯ ಮೇರೆಗೆ ಬೇಡಗಂ ಎಸ್.ಐ ಕೆ.ಆನಂದನ್, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳ ಸ್ಕ್ವಾಡಿನ ಸಿಬ್ಬಂದಿಗಳಾದ ಸಿ.ಕೆ ಬಾಲಕೃಷ್ಣನ್, ರಾಜೀವನ್ ಹಾಗೂ ಇತರ ಪೊಲೀಸರು ರಫೀಕ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *