Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನಿಧನ: ಅಡ್ಕಸ್ಥಳದ ಕೌಶಿಕ್ ರೈ, ಬೆಳ್ಳೆಯ ರೇಮಂಡ್ ಆಲ್ವ

ಎಂಡೋ ಸಲ್ಫಾನ್ ಭಾದಿತ ಬಾಲಕ ಕೌಶಿಕ್

ಪೆರ್ಲ(ಕಾಸರಗೊಡು): ಕಳೆದ ಹಲವು ವರ್ಷಗಳಿಂದ ಎಂಡೋ ಭಾದಿತನಾಗಿ ಅಸೌಖ್ಯದಲ್ಲಿದ್ದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಅಡ್ಕಸ್ಥಳ ನಿವಾಸಿ ಕರುಣಾಕರ ರೈ – ಚಂದ್ರಿಕಾ ದಂಪತಿಗಳ ಪುತ್ರ ಕೌಶಿಕ್ (15) ಮೃತ ಬಾಲಕ. ಸಣ್ಣ ಮಗುವಾಗಿರುವಾಗಲೇ ಕೌಶಿಕ್ ಕೈಕಾಲುಗಳ ಬಲ ಕಳಕೊಂಡಿದ್ದನು. ಎಂಡೋಸಲ್ಪಾನ್ ಸಂಬಂಧಿತ ಹಲವು ಶಿಬಿರಗಳಿಗೆ ಬಾಲಕನನ್ನು ಹಲವು ಬಾರಿ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗಲಿಲ್ಲ.

ಮೃತ ಬಾಲಕ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾನೆ.

ರೇಮಂಡ್ ಆಲ್ವ ಯಾನೆ ರೆಯ್ಯು ಪೊರ್ಬು

reyyu copy

ಉಡುಪಿ: ಉಡುಪಿ ತಾಲೂಕು ಬೆಳ್ಳೆ ಗ್ರಾಮದ ನೆಲ್ಲಿಕಟ್ಟೆ-ತಬೈಲ್ ನಿವಾಸಿ ರೇಮಂಡ್ ಆಲ್ವ ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಎಪ್ರಿಲ್ ಒಂದರಂದು ನಿಧರಾದರು.

ಹಲವು ದಶಕಗಳಿಂದ ಭತ್ತದ ಕೃಷಿ ಮತ್ತು ಹೈನುಗಾರಿಕೆ ನಡೆಸುತ್ತಿದ್ದ ರೇಮಂಡ್ ಆಲ್ವ ಅವರು, ಸ್ವತಹಾ ಶ್ರಮಜೀವಿಯಾಗಿ ಪ್ರತೀ ದಿನವೂ ಕೃಷಿ ಕಾರ್ಯದಲ್ಲಿ ನಿರತರಾಗುವ ಮೂಲಕ ಸಂತೃಪ್ತಿಯನ್ನು ಕಾಣುತ್ತಿದ್ದರು. ಜಾನುವಾರುಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು.

ಸ್ಥಳೀಯವಾಗಿ ‘ರೆಯ್ಯು ಪೊರ್ಬು’ ಎಂಬ ಹೆಸರಿನಲ್ಲಿಯೇ ಚಿರ ಪರಿಚಿತರಾಗಿದ್ದ ರೇಮಂಡ್ ಆಲ್ವರು, ಇತರ ಜಾತಿ, ಧರ್ಮಗಳ ಜನರ ಜೊತೆಗೂ ಆತ್ಮೀಯ, ಸೌಹಾರ್ದ ಸಂಬಂಧವನ್ನು ಇರಿಸಿಕೊಂಡಿದ್ದರು.

ಮೃತರು ಪತ್ನಿ, ಮೂವರು ಗಂಡು ಹಾಗೂ ಒಬ್ಬಾಕೆ ಹೆಣ್ಣು ಮಗಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

 

Leave a Reply

Your email address will not be published. Required fields are marked *